newsfirstkannada.com

ಸೂರ್ಯ ಶಿಕಾರಿ ಮಾತ್ರವಲ್ಲ, ಇಸ್ರೋದಿಂದ ಮತ್ತೊಂದು ಬಿಗ್ ಬಜೆಟ್ ಪ್ರಾಜೆಕ್ಟ್.. 2025ಕ್ಕೆ ಇನ್ನೊಂದು ಐತಿಹಾಸಿಕ ಮೈಲಿಗಲ್ಲು..!

Share :

24-08-2023

    ಇಸ್ರೋ ಅಧ್ಯಕ್ಷರಿಂದ ಹೊಸ ಪ್ರಾಜೆಕ್ಟ್​​ ಬಗ್ಗೆ ಮಾಹಿತಿ

    ದಕ್ಷಿಣ ಧ್ರುವದಲ್ಲೇ ವಿಕ್ರಂನನ್ನು ಯಾಕೆ ಇಳಿಸಿದ್ರಂತೆ ಗೊತ್ತಾ?

    ಚಂದ್ರನಲ್ಲಿ ‘ಮಾನವ ಕಾಲೋನಿ ಸೃಷ್ಟಿ’ ಬಗ್ಗೆ ಮಾತು

ಬೆಂಗಳೂರು: 2025ಕ್ಕೆ ಮಾನವ ಸಹಿತ ಗಗನಯಾನ ಸಾಧ್ಯವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ತಿಳಿಸಿದ್ದಾರೆ.

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಮಾತನಾಡಿರುವ ಅವರು, ಚಂದ್ರನ ಅಂಗಳದಲ್ಲಿ ಇಳಿದಿರುವ ರೋವರ್ ಪ್ರಜ್ಞಾನ್​ನಲ್ಲಿ ರಸಾಯನಿಕ ಸಂಯೋಜನೆ ಅಧ್ಯಯನಕ್ಕೆ ಸಂಬಂಧಿಸಿದ ಎರಡು ಉಪಕರಣಗಳಿವೆ. ಚಂದ್ರನ ಮೇಲ್ಮೈ ಮೇಲೆ ರಸಾಯನಿಕ ಸಂಯೋಜನೆ ಬಗ್ಗೆ ಅಧ್ಯಯನ ಮಾಡಲಿದೆ. ಚಂದ್ರನ ಮೇಲ್ಮೈ ಮೇಲೆ ರೋವರ್ ಸಂಚಾರ ನಡೆಯಲಿದೆ. ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಮಿಷನ್ ಸೆಪ್ಟೆಂಬರ್​ನಲ್ಲಿ ಉಡಾವಣೆ ಆಗಲಿದೆ. ಗಗನಯಾನದ ಕೆಲಸ ಇನ್ನೂ ನಡೆಯುತ್ತಿದೆ. ಮಾನವ ಸಹಿತ ಗಗನಯಾನ 2025 ಕ್ಕೆ ಸಾಧ್ಯವಾಗಲಿದೆ ಎಂದರು.

ಇನ್ನು ಚಂದ್ರಯಾನ-3 ಬಗ್ಗೆ ಮಾತನಾಡಿ, ನಾವು ಚಂದ್ರನ ದಕ್ಷಿಣ ದ್ರುವದ ಹತ್ತಿರಕ್ಕೆ ಹೋಗಿದ್ದೇವೆ. ದಕ್ಷಿಣ ಧ್ರುವ ಬಹುತೇಕ 70 ಡಿಗ್ರಿಯಲ್ಲಿದೆ. ದಕ್ಷಿಣ ಧ್ರುವದಲ್ಲಿ ಕೆಲವೊಂದು ಅನುಕೂಲಗಳಿವೆ. ಸೂರ್ಯನ ಬೆಳಕು ಕಡಿಮೆ ಬೀಳುತ್ತದೆ. ದಕ್ಷಿಣ ಧ್ರುವದಲ್ಲಿ ಹೆಚ್ಚಿನ ವೈಜ್ಞಾನಿಕ ಅಧ್ಯಯನದ ಅಂಶಗಳಿವೆ. ಚಂದ್ರನ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿಗಳು ದಕ್ಷಿಣ ಧ್ರುವದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.

ಕಾರಣ ಇಷ್ಟೇ, ಅಂತಿಮವಾಗಿ ಮನುಷ್ಯರು ಚಂದ್ರನ ಮೇಲ್ಮೈಗೆ ಹೋಗಲು ಬಯಸಿದ್ದಾರೆ. ಚಂದ್ರನಲ್ಲೇ ಮಾನವ ಕಾಲೋನಿ ಸೃಷ್ಟಿ ಮಾಡಲು ಬಯಸಿದ್ದಾರೆ. ಅದರಾಚೆಗೂ ಹೋಗಬೇಕಾಗಿದೆ. ಹೀಗಾಗಿ ಚಂದ್ರಯಾನ-3 ರಲ್ಲಿ ಲ್ಯಾಂಡಿಂಗ್‌ ಗೆ ದಕ್ಷಿಣ ಧ್ರುವವೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡ್ವಿ ಎಂದು ಬೆಂಗಳೂರಲ್ಲಿ ಸೋಮನಾಥ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯ ಶಿಕಾರಿ ಮಾತ್ರವಲ್ಲ, ಇಸ್ರೋದಿಂದ ಮತ್ತೊಂದು ಬಿಗ್ ಬಜೆಟ್ ಪ್ರಾಜೆಕ್ಟ್.. 2025ಕ್ಕೆ ಇನ್ನೊಂದು ಐತಿಹಾಸಿಕ ಮೈಲಿಗಲ್ಲು..!

https://newsfirstlive.com/wp-content/uploads/2023/08/ISRO-5.jpg

Load More