ಚಂದ್ರನಲ್ಲಿ ಬೆಳಕಿನ ನಂತರ ಮತ್ತೆ ಕಾರ್ಯಾಚರಣೆಗೆ ಪೂರ್ವ ತಯಾರಿ
ಶಿವಶಕ್ತಿ ಪಾಯಿಂಟ್ನಿಂದ ಜಿಗಿದು ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್!
ಭವಿಷ್ಯದಲ್ಲಿ ಮಾನವನನ್ನು ಕಳಿಸಿ ವಾಪಸ್ ತರುವ ಯೋಜನೆಗೆ ಪೂರಕ
ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ, ಚಂದ್ರನ ಅಂಗಳದಲ್ಲಿ ಮತ್ತೊಂದು ಮಹತ್ವದ ಪ್ರಯೋಗವನ್ನು ಯಶಸ್ವಿಗೊಳಿಸಿದೆ. ಶಿವಶಕ್ತಿ ಪಾಯಿಂಟ್ನಿಂದ ವಿಕ್ರಮ್ ಲ್ಯಾಂಡರ್ನ್ನು ಮೇಲಕ್ಕೆ ಹಾರಿಸಿ, ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಮಾಡಿಸಲಾಗಿದೆ. ಇದರಿಂದ ಭವಿಷ್ಯದ ಕಾರ್ಯಾಚರಣೆಗಳ ಬಗ್ಗೆ ಇಸ್ರೋ ಹೋಪ್ನ್ನು ಮತ್ತಷ್ಟು ಹೆಚ್ಚಿಸಿದೆ. ಆಗಸ್ಟ್ 23 ಇಡೀ ವಿಶ್ವಕ್ಕೆ ಭಾರತ ತನ್ನ ಸಾಧನೆಯನ್ನು ತೋರಿದ ದಿನ. ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಮೃದುವಾಗಿ ಲ್ಯಾಂಡ್ ಆಗಿ ಚಂದ್ರಯಾನ 3 ಯಶಸ್ವಿಯಾಗಿತ್ತು. ಸದ್ಯ ಚಂದ್ರನಲ್ಲಿ ಕತ್ತಲು ಆವರಿಸಿದ್ದು, ರೋವರ್ ಮತ್ತು ವಿಕ್ರಮ್ನನ್ನು ಸ್ಲೀಪ್ ಮೋಡ್ಗೆ ಹಾಕಲಾಗಿದೆ. ಈ ಪ್ರಕ್ರಿಯೆ ನಂತರವೂ ಇಸ್ರೋ ಚಂದ್ರನ ಅಂಗಳದಲ್ಲಿ ಮತ್ತೊಂದು ಮಹತ್ವದ ಪ್ರಯೋಗವನ್ನು ಯಶಸ್ವಿಗೊಳಿಸಿದೆ.
ಚಂದ್ರನ ಅಂಗಳದಲ್ಲಿ ಇಸ್ರೋನ ಮತ್ತೊಂದು ಪ್ರಯೋಗ ಯಶಸ್ವಿ
ಇಸ್ರೋದ ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಸ್ವಲ್ಪ ಮೇಲೆತ್ತಲು ತನ್ನ ಇಂಜಿನ್‌ಗಳನ್ನು ಹಾರಿಸುವ ಹೋಪ್ ಪ್ರಯೋಗದ ನಂತರ ಚಂದ್ರನ ಮೇಲೆ ಎರಡನೇ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ವಿಕ್ರಮ್ ಲ್ಯಾಂಡರ್ ಇಳಿದ ಶಿವಶಕ್ತಿ ಪಾಯಿಂಟ್ನಲ್ಲಿ ಸುಮಾರು 40 ಸೆಂಟಿ ಮೀಟರ್ ಎತ್ತರಕ್ಕೆ ಲ್ಯಾಂಡರ್ ಹಾರಿದೆ. ಬಳಿಕ 30 ರಿಂದ 40 ಸೆ.ಮೀ ನಷ್ಟು ಪಕ್ಕಕ್ಕೆ ಸಾಫ್ಟ್ ಲ್ಯಾಂಡ್ ಆಗುವಲ್ಲಿ ಸಕ್ಸಸ್ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ ವಿಡಿಯೋ ಹಂಚಿಕೊಂಡಿದೆ.

ಕಿಕ್ ಸ್ಟಾರ್ಟ್‌ನಿಂದ ಭವಿಷ್ಯದಲ್ಲಿ ಕಾರ್ಯಾಚರಣೆಗೆ ಸಹಕಾರಿ ಆಗಲಿದೆ. ಚಂದ್ರನಲ್ಲಿ ಬೆಳಕಿನ ನಂತರ ಮತ್ತೆ ಕಾರ್ಯಾಚರಣೆಗೆ ಪೂರ್ವ ತಯಾರಿ ಇದಾಗಿದೆ. ಇನ್ನು ಭವಿಷ್ಯದಲ್ಲಿ ಚಂದ್ರನ ಅಂಗಳಕ್ಕೆ ಮಾನವನನ್ನು ಕಳಿಸಿ ವಾಪಸ್ ತರುವ ಯೋಜನೆಗೆ ಇದು ಪೂರಕವಾಗಿದೆ. ಸದ್ಯ ವಿಕ್ರಮ್ ಲ್ಯಾಂಡರ್ ಇಸ್ರೋ ಆಜ್ಞೆಗಳನ್ನು ಚಾಚು ತಪ್ಪದಂತೆ ಪಾಲಿಸುತ್ತಿದ್ದು. ಯೋಜನೆ ಉದ್ದೇಶಗಳನ್ನು ಮೀರಿದ ಯಶಸ್ಸು ಕಾಣುತ್ತಿದೆ. ವಿಕ್ರಮ್ ಲ್ಯಾಂಡರ್‌ನ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯಕರವಾಗಿವೆ. ನಿಯೋಜಿತ ರ‍್ಯಾಂಪ್, ChaSTE ಮತ್ತು ILSAಗಳನ್ನು ಮಾಡಲಾಗಿತ್ತು. ಪ್ರಯೋಗದ ನಂತರ ಅವುಗಳನ್ನು ಯಶಸ್ವಿಯಾಗಿ ಮರು ನಿಯೋಜಿಸಲಾಗಿದೆ.
ಚಂದ್ರಯಾನ-3 ಕೌಂಟ್ಡೌನ್ ದನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನ
ಭಾರತದ ಸ್ಥಾನಮಾನವನ್ನು ಉತ್ತಂಗಕ್ಕೇರಿಸಿದ ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿ ವಲರ್ಮತಿ ಅವರು ಚೆನ್ನೈನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಚಂದ್ರಯಾನ ಸೇರಿ ಹಲವು ಲಾಂಚ್ಗಳಿಗೆ ಕೌಂಟ್ಡೌನ್ ಕೊಡುತ್ತಿದ್ದ ವಿಜ್ಞಾನಿ ವಲರಮತಿ, ಶ್ರೀಹರಿಕೋಟಾದಿಂದ ಲಾಂಚ್ ಆಗಿದ್ದ ಚಂದ್ರಯಾನ-3 ರಾಕೆಟ್ ಲಾಂಚ್ನಲ್ಲೆ ಕೊಟ್ಟಿದ್ದ ಕೌಂಟ್ಡೌನ್ ಇವರ ಕಡೆಯ ದನಿಯಾಗಿದೆ. ಚಂದ್ರಯಾನ-3 ಯೋಜನೆಯ ಯಶಸ್ವಿಯಾಗಿ ಸಾಗಿತ್ತು, ಸೆಪ್ಟೆಂಬರ್ 22ಕ್ಕೆ ವಿಕ್ರಮ್ ಮತ್ತು ರೋವರ್ ಮತ್ತೆ ಕಾರ್ಯಾಚರಣೆ ಶುರು ಮಾಡ್ತಾವಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ