ಚಂದ್ರಯಾನ-3 ಉಡಾವಣೆ ಕಣ್ತುಂಬಿಕೊಂಡ ಭಾರತೀಯರು..!
LVM- 3 ವೆಹಿಕಲ್ ಮೂಲಕ ಚಂದ್ರಯಾನ- 3 ಯಶಸ್ವಿ ಉಡಾವಣೆ..!
ಕೋಟ್ಯಾಂತರ ಭಾರತೀಯರ ಕನಸು ನನಸಾಗುವ ಸಮಯ ಸನೀಹ..!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಇಂದು ಇಸ್ರೋ ಅಂದುಕೊಂಡಿದ್ದ ಸಮಯಕ್ಕೆ ಸರಿಯಾಗಿ 2 ಗಂಟೆ 35 ನಿಮಿಷಕ್ಕೆ LVM- 3 ಲಾಂಚಿಂಗ್ ವೆಹಿಕಲ್ ಮೂಲಕ ಚಂದ್ರಯಾನ- 3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಇಸ್ರೋದ ಬಹುದಿನಗಳ ಕನಸು ನನಸಾಗಿದೆ. ಇನ್ನೇನಿದ್ದರೂ ಚಂದ್ರನಲ್ಲಿ ಲ್ಯಾಂಡರ್ ಮತ್ತು ರೋವರ್ ಲ್ಯಾಂಡ್ ಆಗಿ ಅಧ್ಯಯನ ಮಾಡುವುದು ಮಾತ್ರ ಬಾಕಿ ಉಳಿದಿದೆ.
ಹೌದು, ಚಂದ್ರನ ದಕ್ಷಿಣ ಭಾಗವನ್ನು ಅಧ್ಯಯನ ಮಾಡಲು ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ- 3 ಯಶಸ್ವಿಯಾಗಿ ಭೂಮಿಯಿಂದ ಆಕಾಶದತ್ತ ಪ್ರಯಾಣ ಬೆಳಸಿತು. ಇಸ್ರೋದ ಎಲ್ಲಾ ವಿಜ್ಞಾನಿಗಳು ಚಂದ್ರಯಾನ- 3 ಉಡಾವಣೆಯ ಅಮೂಲ್ಯ ಕ್ಷಣವನ್ನು ಕಣ್ಣು ತುಂಬಿಕೊಂಡು ನಮ್ಮ ಕೆಲಸದ ಪ್ರತಿಫಲವೆಂದು ಚಪ್ಪಾಳೆ ತಟ್ಟುತ್ತ ಆನಂದಪಟ್ಟರು. ವಿಶ್ವದ್ಯಾಂತ ಭಾರತೀಯರು ಕೂಡ ಇಸ್ರೋ ಸಾಧನೆಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಆಂಧ್ರ ಪ್ರದೇಶದ ಶ್ರೀಹರಿಕೋಟದ ರಾಕೆಟ್ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 2:35ಕ್ಕೆ ಚಂದ್ರಯಾನ- 3 ಉಡಾವಣೆಯಾಯಿತು. 2019ರಲ್ಲಿ ಚಂದ್ರಯಾನ- 2 ವಿಫಲವಾಗಿತ್ತು. ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಇಸ್ರೋ ಮತ್ತೆ ಚಂದ್ರನ ಅಂಗಳಕ್ಕೆ ತನ್ನ ಚಂದ್ರಯಾನ- 3 ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉಪಗ್ರಹವು 42 ದಿನಗಳ ಕಾಲ ಹಲವು ಹಂತಗಳಲ್ಲಿ ಸಂಚಾರ ಮಾಡಿ ಚಂದ್ರನ ಕಕ್ಷೆಯನ್ನು ತಲುಪಲಿದೆ. ಇದರ ನಡುವೆ ಆಗಸ್ಟ್ 23 ಅಥವಾ 24 ರಂದು ನೌಕೆಯಿಂದ ಲ್ಯಾಂಡರ್ (ವಿಕ್ರಮ್) ಬೇರ್ಪಟ್ಟು ಚಂದ್ರನ ಮೇಲೆ ಇಳಿಯಲಿದೆ. ನಂತರ ವಿಕ್ರಮ್ನಿಂದ ಹೊರ ಬಂದು ರೋವರ್ (ಪ್ರಗ್ಯಾನ್) ಚಂದ್ರನ ಮೇಲೆ ಅಧ್ಯಯನ ಶುರು ಮಾಡಲಿದೆ.
ಈ ಯೋಜನೆ ಯಶಸ್ವಿಯಾದ್ರೆ ಭಾರತದ ಇಸ್ರೋ ಸಂಸ್ಥೆ ಖ್ಯಾತಿ ವಿಶ್ವ ಮಟ್ಟದಲ್ಲಿ ಇನ್ನಷ್ಟು ಪ್ರಬಲಗೊಳ್ಳಲಿದೆ. ಅಮೆರಿಕ, ರಷ್ಯಾ, ಚೀನಾ ನಂತರ ಭಾರತ 4ನೇ ಸ್ಥಾನ ಪಡೆಯಲಿದೆ. ಈಗಾಗಲೇ ಈ 3 ದೇಶಗಳು ಚಂದ್ರನ ಅಂಗಳದಲ್ಲಿ ಉಪಗ್ರಹಗಳನ್ನು ಇಳಿಸಿವೆ. ಆದರೆ ಭಾರತ ಕಳೆದ ಬಾರಿ ವಿಫಲಗೊಂಡಿದೆ. ಹೀಗಾಗಿ ಮತ್ತೆ ಚಂದ್ರನಲ್ಲಿಗೆ ಉಪಗ್ರಹವನ್ನು ಕಳುಹಿಸಿದ್ದು ಒಂದು ವೇಳೆ ಇದು ಸಕ್ಸಸ್ ಆದರೆ 4ನೇ ಸ್ಥಾನದಲ್ಲಿ ಭಾರತ ಗುರುತಿಸಿಕೊಳ್ಳಲಿದೆ.
ಚಂದ್ರಯಾನ -3 ಉಪಗ್ರಹವು ಒಟ್ಟು 3,921 ಕೆ.ಜಿಯಷ್ಟು ತೂಕವಿದ್ದು ಪ್ರಪೋಲಷನ್ ಮಾಡೆಲ್ 2,148 ಕೆ.ಜಿಯಷ್ಟು ಭಾರವಿದೆ. ಲ್ಯಾಂಡರ್, ರೋವರ್, ಮಾಡೆಲ್ 1,752 ಕೆ.ಜಿ ತೂಕವಿದೆ. ಭಾರತ ಸರ್ಕಾರದ ಇಸ್ರೋ ಸಂಸ್ಥೆಯು ಈ ಮಹತ್ವದ ಯೋಜನೆಗೆ ಒಟ್ಟು ₹615 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಇಷ್ಟೇ ಅಲ್ಲ, ಇಡೀ ವಿಶ್ವದಲ್ಲಿ ಇನ್ನುವರೆಗೂ ಚಂದ್ರನ ದಕ್ಷಿಣ ಭಾಗವನ್ನು ಯಾರೂ ಅಧ್ಯಯನ ಮಾಡಿಲ್ಲ. ಈ ಬಗ್ಗೆ ಮಾಹಿತಿಗಳು ಇಲ್ಲ. ಇಸ್ರೋ ಈ ದಕ್ಷಿಣ ಭಾಗದ ಅಧ್ಯಯನದಲ್ಲಿ ಜಯ ಗಳಿಸಿದರೆ ವಿಶ್ವಮಟ್ಟಲದಲ್ಲಿ ವಿಶೇಷ ಸ್ಥಾನ ಪಡೆಯಲಿದೆ ಭಾರತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ