newsfirstkannada.com

ಮತ್ತೊಂದು ಮೈಲಿಗಲ್ಲು ಸಾಧಿಸಿದ ಚಂದ್ರಯಾನ-3; ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಕಕ್ಷೆಗೆ

Share :

06-08-2023

    ಯಶಸ್ವಿಯಾಗಿ ಪೂರ್ಣಗೊಂಡ ಮತ್ತೊಂದು ಹಂತ

    ಭೂಮಿಯಿಂದ ಹಾರಿದ 22 ದಿನದ ಬಳಿಕ ಕಕ್ಷೆಗೆ ನೌಕೆ

    ಅಡ್ಡಿ ಆತಂಕಗಳಿಲ್ಲದೇ ಚಂದ್ರನ ಕಕ್ಷೆ ಸೇರಿದ ನೌಕೆ

ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ‘ಚಂದ್ರಯಾನ- 3’ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದೆ. ಕಕ್ಷೆಯ ಸಂಕೋಚನ ಪ್ರಕ್ರಿಯೆ ಇಂದು ರಾತ್ರಿ ನಡೆಯಲಿದ್ದು ಇಸ್ರೋಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.

ಜುಲೈ 14ರಂದು ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಇಸ್ರೋದ ಹೆವಿ-ಲಿಫ್ಟ್ ಲಾಂಚರ್ LVM-3 ಉಡಾವಣಾ ನೌಕೆಯಲ್ಲಿ ಯಶಸ್ವಿಯಾಗಿ ಉಡಾವಣೆಯಾದ ಚಂದ್ರಯಾನ-3, ಸುಮಾರು ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿದೆ. ಭೂಮಿಯ ಏಕೈಕ ಉಪಗ್ರಹದ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸಲು ತೆರಳಿರುವ ಚಂದ್ರಯಾನ- 3 ನೌಕೆಯು ಮತ್ತೊಂದು ಮಹತ್ವದ ಹಂತವನ್ನು ಕ್ರಮಿಸಿದೆ. ನೌಕೆಯು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಇದರಿಂದ ಚಂದ್ರಯಾನ ಯೋಜನೆಯ ಮತ್ತೊಂದು ಮೈಲುಗಲ್ಲನ್ನು ಇಸ್ರೋ ದಾಟಿದೆ.

ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3

ದೇಶದ ಮಹತ್ವಾಕಾಂಕ್ಷೆಯ ‘ಚಂದ್ರಯಾನ- 3’ ಮತ್ತೊಂದು ಮಹತ್ವದ ಹೆಜ್ಜೆ ಕ್ರಮಿಸಿದ್ದು, ಚಂದ್ರನ ಅಂಗಳದಲ್ಲಿ ಕಾಲಿರಿಸುವ ಪ್ರಯತ್ನದಲ್ಲಿ ಇನ್ನೊಂದು ಹಂತವನ್ನು ಯಶಸ್ವಿಯಾಗಿ ಪೂರೈಸಿದೆ. ಚಂದ್ರಯಾನ- 3 ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ ಅಂತ ಸ್ವತಃ ಇಸ್ರೋ ಮಾಹಿತಿ ನೀಡಿದೆ.

ಭೂಮಿ ಮತ್ತು ಚಂದ್ರನ ಬ್ಲೂ ಪ್ರಿಂಟ್​
ಭೂಮಿ ಮತ್ತು ಚಂದ್ರನ ಬ್ಲೂ ಪ್ರಿಂಟ್​

ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ನೌಕೆ

ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ನೌಕೆ ಇದಾಗಿದ್ದು LVM-3 M4 ರಾಕೆಟ್​ ಉಪಗ್ರಹ ಹೊತ್ತೊಯ್ದಿತ್ತು. ಜುಲೈ 14ರಂದು ನಭಕ್ಕೆ ಚಿಮ್ಮಿದ್ದ ಚಂದ್ರಯಾನ-3 ಬಳಿಕ 5 ಬಾರಿ ಕಕ್ಷೆ ಎತ್ತರಿಸುವ ಪ್ರಕ್ರಿಯೆ ನಡೆದಿತ್ತು..ಯಾವುದೇ ಅಡ್ಡಿ ಆತಂಕಗಳಿಲ್ಲದೇ ನೌಕೆ ಚಂದ್ರನ ಕಕ್ಷೆ ಸೇರಿದೆ..  ಮತ್ತೊಂದು ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ.. ಈಗಾಗ್ಲೇ ನೌಕೆ ಮೂರನೇ ಎರಡರಷ್ಟು ಕ್ರಮಿಸಿದೆ.

ಇತಿಹಾಸ ನಿರ್ಮಿಸಲು ಇನ್ನೊಂದು ಹೆಜ್ಜೆ ಹತ್ತಿರ!

ಇದೇ ವೇಳೆ ಮುಂದಿನ ಕಾರ್ಯಾಚರಣೆಯಾದ ಕಕ್ಷೆಯ ಸಂಕೋಚನ ಪ್ರಕ್ರಿಯೆಯನ್ನು ಇಂದು ರಾತ್ರಿ 11 ಗಂಟೆಗೆ ನಡೆಸಲಾಗುತ್ತೆ..  ಆಗಸ್ಟ್ ಮೊದಲ ವಾರದಲ್ಲಿ ನೌಕೆಯು ಚಂದ್ರನ ಸುತ್ತ 5- 6 ಕಕ್ಷೆಯ ಪಥವನ್ನು ಪೂರ್ಣಗೊಳಿಸಲು ತಯಾರಿ ನಡೆಸಿದೆ. ಕ್ರಮೇಣ ಅದು 100 ಕಿ.ಮೀ ಆರ್ಬಿಟ್​​ನ ವರ್ತುಲಕ್ಕೆ ಪರಿವರ್ತನೆಯಾಗಲಿದೆ. ಮುಂದಿನ ಹತ್ತು ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವದ ಪ್ರದೇಶದ ಒಳಗೆ ಇಳಿಯಲು ಸೂಕ್ತವಾದ ಜಾಗವನ್ನು ನಿರ್ಧರಿಸಲಾಗುತ್ತದೆ. ಆಗಸ್ಟ್ 17ರಂದು ಪ್ರೊಪಲ್ಷನ್ ಮಾಡ್ಯೂಲ್ ಹಾಗೂ ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 23ರ ಸಂಜೆ 5.47ರ ಸುಮಾರಿಗೆ ಚಂದ್ರಯಾನ ನೌಕೆಯ ಲ್ಯಾಂಡರ್ ಕಕ್ಷೆಯಿಂದ ಹೊರಬರುತ್ತದೆ ಮತ್ತು ಸುಗಮ ಲ್ಯಾಂಡಿಂಗ್‌ಗೆ ಪ್ರಯತ್ನ ಆರಂಭಿಸುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಚಂದ್ರಯಾನ- 3ರ ಪ್ರಯಾಣ ಆಗಸ್ಟ್ 1ರಂದು ಟ್ರಾನ್ಸ್‌ಲೂನಾರ್ ಇಂಜೆಕ್ಷನ್‌ ಹಂತದಲ್ಲಿ ಚಂದ್ರನ ಕಡೆಗೆ ಭೂಮಿಯಿಂದ ಟ್ರಾಜೆಕ್ಟರಿ ಗುರಿಪಡಿಸುವುದರೊಂದಿಗೆ ಆರಂಭವಾಗಿತ್ತು. ಚಂದ್ರನ ಗುರುತ್ವಾಕರ್ಷಣೆ ವಲಯಕ್ಕೆ ಪ್ರವೇಶಿಸಿದಾಗ ಚಂದ್ರಯಾನ ನೌಕೆಯು ಅಂಡಾಕಾರದ ಕಕ್ಷೆಯಲ್ಲಿ ಚಂದ್ರನ ಸುತ್ತ ಸುತ್ತಲು ಆರಂಭಿಸುತ್ತದೆ.

ಚಂದ್ರಯಾನ -3 ನೌಕೆ
ಚಂದ್ರಯಾನ -3 ನೌಕೆ

ಚಂದ್ರಯಾನ-3 ನೌಕೆ ಲ್ಯಾಂಡಿಂಗ್ ಮುಂದೂಡಿಕೆ ಸಾಧ್ಯತೆ!

ಚಂದ್ರಯಾನ-3 ಈವರೆಗಿನ ಪ್ರಯಾಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಆದ್ರೆ ಚಂದ್ರನ ಮೇಲೆ ಸೂರ್ಯ ಕಿರಣಗಳು ಬೀಳುವಂತಹ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಚಂದ್ರನ ಲ್ಯಾಂಡಿಂಗ್ ಸಮಯದ ಮೇಲೆ ಇಸ್ರೋ ಗಮನ ಹರಿಸಿದೆ. ಅಗತ್ಯವಿದ್ದರೆ ಲ್ಯಾಂಡಿಂಗ್ ಅನ್ನು ಸೆಪ್ಟೆಂಬರ್‌ಗೆ ಮುಂದೂಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದು ಯಶಸ್ವಿಯಾದ್ರೆ ಭಾರತವು ಅಮೆರಿಕ, ಚೀನಾ ಹಾಗೂ ರಷ್ಯಾ ನಂತರ ಚಂದ್ರನ ಮೇಲ್ಮೈಯಲ್ಲಿ ತನ್ನ ಬಾಹ್ಯಾಕಾಶ ನೌಕೆ ಇಳಿಸಿದ ನಾಲ್ಕನೇ ದೇಶವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಂದು ಮೈಲಿಗಲ್ಲು ಸಾಧಿಸಿದ ಚಂದ್ರಯಾನ-3; ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಕಕ್ಷೆಗೆ

https://newsfirstlive.com/wp-content/uploads/2023/08/CHANDRAYAANA_3-2.jpg

Load More