newsfirstkannada.com

ವಿಕ್ರಮನಿಂದ ಒಂದೊಂದೇ ಮಾಹಿತಿಗಳ ಶೋಧ, ಅಚ್ಚರಿಯ ಸತ್ಯಗಳು.. ISRO

Share :

28-08-2023

    ವೈಜ್ಞಾನಿಕ ಮಾಹಿತಿಗಳ ಸಂಗ್ರಹಕ್ಕೆ ಸಜ್ಜಾದ ತ್ರಿ‘ವಿಕ್ರಮ’!

    ಚಂದ್ರನಂಗಳದ ಅಚ್ಚರಿ ಅರಿಯಲು ಪ್ರಗ್ಯಾನ್​ ಅಲರ್ಟ್​!

    ಚಂದ್ರಯಾನದ ರಾಯಭಾರಿಗಳಿಗೆ ಬೊಮ್ಮಾಯಿ ಸನ್ಮಾನ!

ಚಂದ್ರಯಾನ 3ರ ಸಕ್ಸಸ್ ಮೂಲಕ ಇಸ್ರೋ ಸಂಸ್ಥೆ​ ಭಾರತದ ಬಲಿಷ್ಟತೆಯನ್ನ ಜಗತ್ತಿನ ಮುಂದೆ ಎತ್ತಿ ಹಿಡಿದಿದೆ. ಚಂದ್ರನಂಗಳದಲ್ಲಿ ಪರ್ಯಟನೆ ಆರಂಭಿಸಿರೋ ಭಾರತದ ತ್ರಿವಿಕ್ರಮ ಅಚ್ಚರಿಯ ಸತ್ಯಗಳ ಅನ್ವೇಷಣೆಗೆ ಅಣಿಯಾಗಿದ್ದಾನೆ. ಶಶಿಯ ಒಡಲಿನ ವೈಜ್ಞಾನಿಕ ಮಾಹಿತಿಗಳನ್ನ ಇಸ್ರೋದ ಮುಂದೆ ಅಚ್ಚೊತ್ತುವ ಕಾರ್ಯದಲ್ಲಿ ನಿರತನಾಗಿದ್ದಾನೆ. ಶಶಿಯ ಶಿಖರದಲ್ಲಿ ಭಾರತ ಸಾಧನೆಯ ಸಹಿ ಹಾಕಿದೆ.

ಹಿಮಕರನ ದಕ್ಷಿಣ ಧ್ರುವ ವಿಕ್ರಮನ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ಅಂಗಳದಲ್ಲಿ ಭಾರತದ ಹಿರಿಮೆ ಎತ್ತಿ ಹಿಡಿದ ಇಸ್ರೋ ಜಗತ್ತೇ ತನ್ನತ್ತ ತಿರುಗಿನೋಡುವಂತೆ ಮಾಡಿದೆ. 14 ದಿನಗಳ ಲಕ್ಷ್ಮಣ ರೇಖೆಯ ಗಡಿಯಲ್ಲಿ ಸೋಮನ ನೆಲದಲ್ಲಿ ವಿಕ್ರಮ್​ ಲ್ಯಾಂಡರ್​ ಮತ್ತು ಪ್ರಗ್ಯಾನ್​ ರೋವರ್​ ಪರ್ಯಟನೆ ಮುಂದುವರೆದಿದೆ. ಚಂದ್ರಮನ ಒಡಲಿನಲ್ಲಿ ಅವಿತಿರುವ ಅಚ್ಚರಿಯ ಸತ್ಯಗಳನ್ನ ಜಗತ್ತಿನ ಮುಂದಿಡಲು ಇಸ್ರೋ ಅಣಿಯಾಗಿದೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಪಾದಾರ್ಪಾಣೆ ಮಾಡಿರೋ ವಿಕ್ರಮ, ಕೌತುಕಗಳ ಹುಡುಕಾಟಕ್ಕೆ ಸಜ್ಜಾಗಿದ್ದಾನೆ. ತ್ರಿವಿಕ್ರಮನಿಗೆ ಜೊತೆಯಾಗಿ ಶಶಿಯ ಬೇಟೆಗಿಳಿದಿರೋ ಪ್ರಗ್ಯಾನ್​ ಚಂದ್ರನ ಮೇಲ್ಮೈನ ಮೇಲೆ ಸಂಚಾರ ಆರಂಭಿಸಿದೆ. ಚಂದ್ರನ ಮಡಿಲಿನಲ್ಲಿ ಅವಿತಿರುವ ವೈಜ್ಞಾನಿಕ ಮಾಹಿತಿಗಳನ್ನ ಕೆದಕಿ ಭೂಲೋಕಕ್ಕೆ ರವಾನಿಸುವ ಕೆಲಸಕ್ಕೆ ಕೈ ಹಾಕಿದೆ. ಒಂದೊಂದೇ ಮಾಹಿತಿಗಳನ್ನ ಇಸ್ರೋದ ಮುಂದೆ ಅಚ್ಚೊತ್ತುವ ಕಾರ್ಯವನ್ನ ವಿಕ್ರಮ ಆರಂಭಿಸಿದ್ದಾನೆ ಅಂತ ಇಸ್ರೋ ಅಧ್ಯಕ್ಷ ಸೋಮನಾಥ್​ ತಿಳಿಸಿದ್ದಾರೆ.

ಚಂದ್ರನ ಮೇಲೆ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿರುವುದರಿಂದ ನಮಗೆ ತುಂಬಾ ಸಂತೋಷವಾಗಿದೆ. ಹೆಚ್ಚಿನ ವೈಜ್ಞಾನಿಕ ಮಿಷನ್ ಉದ್ದೇಶಗಳು ಈಡೇರಲಿವೆ. ಎಲ್ಲಾ ವೈಜ್ಞಾನಿಕ ದತ್ತಾಂಶಗಳು ತುಂಬಾ ಚೆನ್ನಾಗಿ ಕಾಣುತ್ತಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಮುಂಬರುವ 14 ದಿನಗಳಲ್ಲಿ ನಾವು ಚಂದ್ರನಿಂದ ಸಾಕಷ್ಟು ಡೇಟಾ ಪಡೆಯುವುದನ್ನು ಮುಂದುವರಿಸುತ್ತೇವೆ. ಹಾಗೆ ಮಾಡುವಾಗ ನಾವು ವಿಜ್ಞಾನದಲ್ಲಿ ನಿಜವಾಗಿ ಉತ್ತಮ ಪ್ರಗತಿ ಮಾಡುತ್ತೇವೆ ಎಂದು ಭಾವಿಸುತ್ತೇವೆ. ಆದ್ದರಿಂದ ನಾವು ಮುಂದಿನ 13-14 ದಿನಗಳವರೆಗೆ ಉತ್ಸುಕರಾಗಿ ನೋಡುತ್ತಿದ್ದೇವೆ.

– ಎಸ್​. ಸೋಮನಾಥ್​, ಇಸ್ರೋ ಅಧ್ಯಕ್ಷ

ಚಂದ್ರಯಾನದ ರಾಯಭಾರಿಗಳಿಗೆ ಬೊಮ್ಮಾಯಿ ಸನ್ಮಾನ!

ಚಂದ್ರಯಾನ 3ರ ಸಕ್ಸಸ್​ಗೆ ಕಾರಣವಾದ ಇಸ್ರೋ ವಿಜ್ಞಾನಿಗಳಿಗೆ ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದರು. ಬೆಂಗಳೂರಿನ ನಾಗಸಂದ್ರದ ಖಾಸಗಿ ಅಪಾರ್ಟ್ಮೆಂಟ್ ನಿವಾಸಿಗಳಿಂದ ಮೂವರು ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ಇದೇ ಕಾರ್ಯಕ್ರಮದಲ್ಲಿ ಭಾಗಿಯಾದ ವಿಜ್ಞಾನಿಗಳಾದ ಮಹೇಶ್ ಚಾವ್ಲಾ, ಕಲ್ಪನಾ ಅರವಿಂದ್ ಹಾಗೂ ಆಕಾಂಕ್ಷಾ ಅರವಿಂದ್​​ಗೆ ಸನ್ಮಾನ ಮಾಡಿದ್ರು. ಬಾಹ್ಯಾಕಾಶದ ಅಂಗಳದಲ್ಲಿ ಭಾರತದ ಇಸ್ರೋ ಸಂಸ್ಥೆಯ ಸಾಧನೆ ಹೊಸ ಮೈಲಿಗಲ್ಲನ್ನ ಸೃಷ್ಟಿಸಿದೆ. ಇಸ್ರೋ ವಿಜ್ಞಾನಿಗಳ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ದೇಶವಾಸಿಗಳ ಪ್ರೀತಿ, ಚಂದ್ರಯಾನ 3ರ ಸಕ್ಸಸ್,​ ಇಸ್ರೋ ವಿಜ್ಞಾನಿಗಳ ಉತ್ಸಾಹವನ್ನ ಇಮ್ಮಡಿಗೊಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಕ್ರಮನಿಂದ ಒಂದೊಂದೇ ಮಾಹಿತಿಗಳ ಶೋಧ, ಅಚ್ಚರಿಯ ಸತ್ಯಗಳು.. ISRO

https://newsfirstlive.com/wp-content/uploads/2023/08/chandrayana-1-1.jpg

Load More