ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಇಸ್ರೋ ವಿಜ್ಞಾನಿಗಳು
ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲೆಲ್ಲೂ ಮೆಚ್ಚುಗೆಯ ಮಹಾಪೂರ
ಸೋಮನಾಥನ್‌ಗೆ ಅಭಿನಂದಿಸಿದ್ದಕ್ಕೆ ಅದೃಷ್ಟವಂತರು ಎಂದ ನೆಟ್ಟಿಗರು
ಆಗಸ್ಟ್ 23 ಇಡೀ ಭಾರತವೇ ಹೆಮ್ಮೆ ಪಟ್ಟ ಸುದಿನ. ಅಂದಿನ ಚಂದ್ರಯಾನ-3ರ ಯಶಸ್ಸಿನ ಬಗ್ಗೆ ಈಗ ಇಡೀ ವಿಶ್ವವೇ ಅರಿತಿದೆ. ಇಡೀ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ. ಈ ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನು ಓದಿ: WATCH: 30 ಸಾವಿರ ಅಡಿ ಎತ್ತರದಲ್ಲಿ ರಕ್ಷಾ ಬಂಧನ; ಅಣ್ಣ-ತಂಗಿಯರ ಅಪರೂಪದ ವಿಡಿಯೋ ಇಲ್ಲಿದೆ ನೋಡಿ
ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಮುನ್ನಡೆಸಿದ ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರನ್ನು ಇಂಡಿಗೋ ಫ್ಲೈಟ್ ಗಗನಸಖಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಜೊತೆಗೆ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಉತ್ಸಾಹಭರಿತವಾಗಿ ಬರಮಾಡಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘‘ಇಂದು ನಮ್ಮ ವಿಮಾನವನ್ನು ಹತ್ತಿದ ಇಸ್ರೋ ಅಧ್ಯಕ್ಷರಾದ ಶ್ರೀ ಎಸ್. ಸೋಮನಾಥ್ ಅವರನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಸೋಮನಾಥ್ ಮತ್ತು ಅವರ ತಂಡಕ್ಕೆ ಒಂದು ದೊಡ್ಡ ಚಪ್ಪಾಳೆ ಬರಬೇಕು. ನೀವು ನಮ್ಮ ವಿಮಾನದಲ್ಲಿರುವುದಕ್ಕೆ ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು’’ ಎಂದು ಹೆಮ್ಮೆಯಿಂದ ಗಗನಸಖಿ ಪೂಜಾ ಶಾ ಹೇಳಿದ್ದಾರೆ.
View this post on Instagram
ಸೋಮನಾಥನ್ ಅವರನ್ನು ಅಭಿನಂದಿಸಿದ ವಿಡಿಯೋವನ್ನು ಗಗನಸಖಿ ಪೂಜಾ ಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ಅದೆಷ್ಟೋ ನೆಟ್ಟಿಗರು ಬಹಳ ಜೋಶ್‌ನಿಂದಲೇ ಕಾಮೆಂಟ್ ಮಾಡಿದ್ದಾರೆ. ನಿಜವಾದ ನಾಯಕನಿಗೆ ಗೌರವ ನೀಡಿದ ನಿಮಗೆ ತುಂಬಾ ಧನ್ಯವಾದಗಳು. ಭಾರತವು ಖಚಿತವಾಗಿ ಬದಲಾಗುತ್ತಿದೆ. ನಮ್ಮ ಅಧ್ಯಕ್ಷರನ್ನು ಸ್ವಾಗತಿಸಲು ನಿಮಗೆ ತುಂಬಾ ಖುಷಿಯಾಗಿದೆ. ಇಸ್ರೋ ಕಡೆಗೆ ಸ್ವಲ್ಪ ಪ್ರೀತಿ ತೋರಿಸಿದ್ದಕ್ಕಾಗಿ ಧನ್ಯವಾದಗಳು. ಹೆಮ್ಮೆಯ ಕ್ಷಣವನ್ನು ಸ್ವಾಗತಿಸಲು ನೀವು ತುಂಬಾ ಅದೃಷ್ಟವಂತರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ