‘ನಿಲುವು ಕುಡಿಚ ಸಿಂಹಗಳ್’ ಎಂಬ ಆತ್ಮಕಥನ
ಕೆ ಶಿವನ್ ಬಗ್ಗೆ ಬರೆದುಕೊಂಡ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
ಚರ್ಚೆಗೆ ಗ್ರಾಸವಾಗಿದೆ ಸೋಮನಾಥ್ ಬರೆದ ಪುಸ್ತಕ, ಶುರುವಾಗಿದೆ ಶೀತಲಸಮರ
ಚಂದ್ರಯಾನ -3ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸಂಸ್ಥೆಯ ಶೀತಲಸಮರ ಬೆಳಕಿಗೆ ಬಂದಿದೆ. ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಕೆ ಶಿವನ್ ತಮಗೆ ಮುಖ್ಯಸ್ಥ ಹುದ್ದೆ ತಪ್ಪಿಸಲು ಯತ್ನಿಸಿದ್ದರು ಎಂದು ಹಾಲಿ ಅಧ್ಯಕ್ಷ ಎಸ್.ಸೋಮನಾಥ್ ಆರೋಪ ಮಾಡಿದ್ದಾರೆ.
ಎಸ್ ಸೋಮನಾಥ್ ‘ನಿಲುವು ಕುಡಿಚ ಸಿಂಹಗಳ್’ ಎಂಬ ಆತ್ಮಕಥನ ಬರೆದಿದ್ದು, ಅದರಲ್ಲಿ ಈ ಅಂಶಗಳು ದಾಖಲಾಗಿವೆ. ಇನ್ನು ಪುಸ್ತಕದಲ್ಲಿ ಚಂದ್ರಯಾನ – 2 ಸಾಫ್ಟ್ವೇರ್ ಸಮಸ್ಯೆಯಿಂದ ವೈಫಲ್ಯತೆ ಕಂಡಿತ್ತು. ಆದರೆ ಶಿವನ್ ಲ್ಯಾಂಡರ್ ಜೊತೆ ಸಂಪರ್ಕ ಆಗುತ್ತಿಲ್ಲ ಎಂದು ಸುಳ್ಳು ಘೋಷಿಸಿದ್ದರು ಎಂದು ಹೇಳಿದ್ದರು ಎಂಬುದನ್ನು ಬರೆದಿದ್ದಾರೆ.
ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ – 2 ನೌಕೆ ಚಂದ್ರನಲ್ಲಿ ಇಳಿಯುವ ದಿನ ಇಸ್ರೋಗೆ ಆಗಮಿಸಿದ್ದು, ಅಂದು ಅವರನ್ನು ಸ್ವಾಗತಿಸುವ ತಂಡದಲ್ಲಿ ನನ್ನನ್ನು ಹೊರಗಿಟ್ಟಿದ್ದರು ಅಂತ ಬರೆದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಸೋಮನಾಥ್ ಪುಸ್ತಕ ಹಿಂಪಡೆಯುವುದಾಗಿ ತಿಳಿಸಿದ್ದಾರೆ.
ಇದಲ್ಲದೆ, ಪುಸ್ತಕದ ಕುರಿತಾಗಿಯೂ ಎಸ್ ಸೋಮನಾಥ್ ಮಾತನಾಡಿದ್ದು, ‘‘ಪ್ರಮುಖ ಪಾತ್ರದಲ್ಲಿ ಬರುವ ವ್ಯಕ್ತಿಗಳು ಸಂಸ್ಥೆಯಲ್ಲಿ ಸ್ಥಾನಗಳನ್ನು ಭದ್ರಪಡಿಸುವುದು ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ನನ್ನ ಉದ್ದೇಶವು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಪ್ರತ್ಯೇಕಿಸುವುದಲ್ಲ. ನಾನು ನಿರ್ದಿಷ್ಟ ಅಂಶವನ್ನು ಹೈಲೈಟ್ಸ್ ಮಾಡುವ ಗುರಿಯನ್ನು ಹೊಂದಿದ್ದೇನೆ.’’ಎಂದು ಹೇಳಿದ್ದಾರೆ.
‘‘ಪುಸ್ತಕ ನನ್ನ ಜೀವನದ ಕಥೆಯನ್ನು ನಿರೂಪಿಸುವ ಗುರಿಯನ್ನು ಹೊಂದಿಲ್ಲ.ಇದು ಜನರು ತಮ್ಮ ಕನಸನ್ನು ಮುಂದುವರಿಸಲು ಪ್ರೋತ್ಸಾಹಿಸುವ ಏಕೈಕ ಉದ್ದೇಶವನ್ನು ಹೊಂದಿದೆ’’ ಎಂದು ಸೋಮನಾಥ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ