newsfirstkannada.com

ಚಂದ್ರಯಾನ-3ರ ಯಶೋಗಾಥೆ, ಅವಿಸ್ಮರಣೀಯ ಗೆಲುವಿಗೆ ಶ್ರಮಿಸಿದ ಇಸ್ರೋ ಸಿಬ್ಬಂದಿಗೆ ಹ್ಯಾಟ್ಸಪ್

Share :

25-08-2023

    ಕಠಿಣ ಪರಿಶ್ರಮ, ಅವಿರತ ದುಡಿಮೆ, ಸಮರ್ಪಣೆ

    ಚಂದ್ರಯಾನ-3 ಯಶಸ್ಸಿಗಾಗಿ ವಿಜ್ಞಾನಿಗಳು ಶಪಥ

    ಅವಿಸ್ಮರಣೀಯ ಗೆಲುವಿಗೆ ಶ್ರಮಿಸಿದ ಇಸ್ರೋ ಸಿಬ್ಬಂದಿ

ಚಂದ್ರನ ಮೇಲೆ ಭಾರತ ತ್ರಿವಿಕ್ರಮ ಸಾಧಿಸಿದೆ. ಇಸ್ರೋ ವಿಜ್ಞಾನಿಗಳ ಸಾಧನೆ ಇಡೀ ವಿಶ್ವವವೇ ಬೆರಗುಗಣ್ಣಿನಿಂದ ನೋಡ್ತಿದೆ. ಚಂದ್ರಯಾನ-3ರ ಯಶಸ್ಸಿನ ಹಿಂದೆ ಅಪಾರ ಜನರ ಪರಿಶ್ರಮ ಇದೆ. ಹಗಲಿರುಳೆನ್ನದೇ ದುಡಿದು ಮಿಷನ್ ಸಕ್ಸಸ್ ಮಾಡಿದವರ ಯಶೋಗಾಥೆ ಇದು. ಕೋಟ್ಯಂತರ ಭಾರತೀಯರ ಹರಕೆ, ಹಾರೈಕೆಯೊಂದಿಗೆ ಇಸ್ರೋ ವಿಜ್ಞಾನಿಗಳು ಅಭೂತಪೂರ್ವ ವಿಕ್ರಮ ಸಾಧಿಸಿದ್ದಾರೆ. ಸೋಲನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಗುರಿ ಮುಟ್ಟಿರುವ ಸಂದೇಶ ಇಸ್ರೋ ನೀಡಿದೆ. ನವಭಾರತದ ಹೊಸ ಯಾನ ಚಂದ್ರಯಾನದ ಯಶಸ್ಸಿನ ಹಿಂದೆ ಹಲವರ ಬೆವರಿದೆ. ಕಷ್ಟ-ಕಾರ್ಪಣ್ಯಗಳು, ನೋವುಗಳ ಕಥೆ, ವ್ಯಥೆ ಇದೆ.

ಐತಿಹಾಸಿಕ ವಿಜಯದ ಹಿಂದಿದೆ ಹಲವರ ಶ್ರಮ!

ಸರಿಯಾಗಿ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3 ಗುರಿ ಮುಟ್ಟುತ್ತಿದ್ದಂತೆ ಇಸ್ರೋದ ಈ ಸಾಧನೆ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಅಭೂತಪೂರ್ವ ಗೆಲುವಿಗೆ ಭಾರತವನ್ನು ಇಡೀ ವಿಶ್ವವೇ ಕೊಂಡಾಡ್ತಿದೆ. ಎಲ್ಲರೂ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿದ್ದರ ಬಗ್ಗೆ ಮಾತನಾಡುತ್ತಿದ್ದಾರೆ, ಆದ್ರೆ ಈ ಗೆಲುವಿನ ಹಿಂದಿರುವ ಪರಿಶ್ರಮದ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಇದು ಇಸ್ರೋ ಮಿಷನ್ ಚಂದ್ರಯಾನ-3ರ ಯಶೋಗಾಥೆ ಆಗಿದೆ. ಐತಿಹಾಸಿಕ ಗೆಲುವಿನ ಹಿಂದಿದೆ ಇಸ್ರೋ ಸಿಬ್ಬಂದಿಯ ಕಠಿಣ ಪರಿಶ್ರಮ, ಅವಿರತ ದುಡಿಮೆ, ಸಮರ್ಪಣೆ ಇದೆ. ಇನ್ನು 2019ರಲ್ಲಿ ಚಂದ್ರಯಾನ-2 ಕೊನೆಯ ಕ್ಷಣದಲ್ಲಿ ವಿಫಲವಾಗಿದ್ದು ಇಸ್ರೋವನ್ನು ಭಾರಿ ನಿರಾಸೆಗೆ ತಳ್ಳಿತ್ತು. ಆದ್ರೆ ಸೋಲು, ನಿರಾಸೆಗಳನ್ನು ಪಕ್ಕಕ್ಕೆ ತಳ್ಳಿ ಇಸ್ರೋ ವಿಜ್ಞಾನಿಗಳು ದೃಢ ನಿರ್ಧಾರ ಮಾಡಿದ್ದರು. ಚಂದ್ರಯಾನ-3 ಗೆಲ್ಲಿಸಲು ಸಿಬ್ಬಂದಿ ಪಟ್ಟ ಶ್ರಮ ಅಂತಿಂಥದ್ದಲ್ಲ. ಚಂದ್ರಯಾನ-3ನ್ನು ಯಶಸ್ವಿಗೊಳಿಸಲೇಬೇಕು ಅಂತ ಇಸ್ರೋ ವಿಜ್ಞಾನಿಗಳು ಶಪಥಗೈದಿದ್ದರು.

ವಿಕ್ರಮನ ಸಾಫ್ಟ್​ ಲ್ಯಾಂಡಿಂಗ್​​ಗಾಗಿ ಇಸ್ರೋ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ವಿಕ್ರಂ ಲ್ಯಾಂಡಿಂಗ್ ಆಗುವ 3 ದಿನ ಮುನ್ನ ವಿಜ್ಞಾನಿಯೊಬ್ಬರ ತಂದೆ ನಿಧನರಾಗಿದ್ದರು. ತಂದೆಯ ಅಗಲಿಕೆಯ ನೋವಲ್ಲೂ ಆ ವಿಜ್ಞಾನಿ ದುಡಿದಿದ್ದರು. ಸೂತಕದ ನೋವಿನಲ್ಲೂ ಚಂದ್ರಯಾನ-3ಕ್ಕೆ ಪರಿಶ್ರಮ ಹಾಕಿದ್ದರು. ಅಂತ್ಯಕ್ರಿಯೆ ಮುಗಿಸಿದ ಕೂಡಲೇ ಕರ್ತವ್ಯಕ್ಕೆ ಹಾಜರಾಗಿದ್ದರು. ಮತ್ತೋರ್ವ ಮಹಿಳಾ ಸಿಬ್ಬಂದಿ ಹೆರಿಗೆಯಾಗಿ ಕೆಲ ವಾರಗಳಲ್ಲೇ ಕರ್ತವ್ಯಕ್ಕೆ ಹಾಜರಿ ನೀಡಿದ್ದರು.

ಹಸುಗೂಸನ್ನ ಮನೆಯಲ್ಲಿ ಬಿಟ್ಟು ದೇಶಕ್ಕಾಗಿ ದುಡಿದಿದ್ದರು. ಚಂದ್ರಯಾನ-2 ವಿಫಲತೆಯಿಂದ ಎಚ್ಚೆತ್ತಿದ್ದ ಇಸ್ರೋ ತಾಂತ್ರಿಕವಾಗಿಯೂ ಸಾಕಷ್ಟು ಬದಲಾವಣೆ ಮಾಡಿಕೊಂಡಿತ್ತು. ಚಂದ್ರನ ಮೇಲೆ ವಿಕ್ರಮ ಸಾಧಿಸಲು ಈ ಸಿದ್ಧತೆಗಳೇ ಕಾರಣವಾಗಿದ್ದವು. ಇದು ಕೇವಲ ಒಬ್ಬಿಬ್ಬರು ವಿಜ್ಞಾನಿಗಳ ಶ್ರಮವಲ್ಲ. ಚಂದ್ರಯಾನಕ್ಕಾಗಿ ಕೆಲಸ ಮಾಡಿದ ಸಾವಿರಾರು ಜನರ ಶ್ರಮವನ್ನ ಎಸ್​.ವಿ ಶರ್ಮಾ ಮೆಲುಕು ಹಾಕಿದ್ದಾರೆ.

ಇದೂ ಅಲ್ಲದೇ ಈ ಗೆಲುವಿನ ಹಿಂದೆ ಬೆಳಗಾವಿ ವಿಜ್ಞಾನಿ ದೀಪಕ್ ಧಡೂತಿ ಪಾತ್ರವೂ ಅಪಾರವಾಗಿದೆ. ದೀಪಕ್ ಕಂಪನಿಯಲ್ಲಿ ತಯಾರಾದ ಸೆನ್ಸಾರ್‌ ಅಳವಡಿಕೆ ಮಾಡಲಾಗಿದೆ. ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಲಿಮಿಟೆಡ್ ಕಂಪನಿಯಲ್ಲಿ, ಕ್ರಯೋಜನಿಕ್ ಸೆನ್ಸಾರ್ ಸಿದ್ಧ ಪಡಿಸಿ ದೀಪಕ್ ಇಸ್ರೋಗೆ ನೀಡಿದ್ದರು. ಅಮೆರಿಕದಲ್ಲಿದ್ದ ವಿಜ್ಞಾನಿ ದೀಪಕ್, APJ ಅಬ್ದುಲ್ ಕಲಾಂ ಪ್ರೇರಣೆಯಿಂದ ಬೆಳಗಾವಿಗೆ ಬಂದು ಇಲ್ಲಿಯೇ ಸ್ವಂತ ಕಂಪನಿಯನ್ನ ಸ್ಥಾಪಿಸಿದ್ದರು. ಇದೀಗ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಬಗ್ಗೆ ದೀಪಕ್ ಸಂತಸ ವ್ಯಕ್ತಪಡಿಸಿದ್ದಾರೆ.

ಹೀಗೆ ಬದುಕಿನ ಬವಣೆಗಳನ್ನ ಗೆದ್ದು ಬಂದವರು ಈಗ 140 ಕೋಟಿ ಭಾರತೀಯರ ಮನವನ್ನ ಗೆದ್ದಿದ್ದಾರೆ. ಇವರು ತ್ಯಾಗದ ಫಲದಿಂದ ಇಂದು ಇಸ್ರೋ ಗೆದ್ದು ಬೀಗಿದೆ. ಇವರ ಸ್ಪೂರ್ತಿಧಾಯಕ ಕಥೆ ಯುವ ಪೀಳಿಗೆಗೆ ಒಂದು ಸೊಗಸಾದ ಅಧ್ಯಾಯವಾಗುದರಲ್ಲಿ ಎರಡು ಮಾತಿಲ್ಲ. ಅವಿಸ್ಮರಣೀಯ ಗೆಲುವಿಗೆ ಶ್ರಮಿಸಿದ ಇಸ್ರೋ ಸಿಬ್ಬಂದಿಗೆ ಹ್ಯಾಟ್ಸಪ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3ರ ಯಶೋಗಾಥೆ, ಅವಿಸ್ಮರಣೀಯ ಗೆಲುವಿಗೆ ಶ್ರಮಿಸಿದ ಇಸ್ರೋ ಸಿಬ್ಬಂದಿಗೆ ಹ್ಯಾಟ್ಸಪ್

https://newsfirstlive.com/wp-content/uploads/2023/08/ISRO-6.jpg

Load More