newsfirstkannada.com

ಚಂದ್ರನ ಅಂಗಳದಲ್ಲಿ ವಿಕ್ರಮ್​ ರೋವರ್ ಓಡಾಟ; ಹೈಡ್ರೋಜನ್​ಗಾಗಿ ಹುಡುಕಾಟ ನಡೆಸುತ್ತಿರುವ ಇಸ್ರೋ

Share :

01-09-2023

    ವಿಕ್ರಮ್ ಲ್ಯಾಂಡರ್​ ತೆಗೆದ ಪ್ರಗ್ಯಾನ್ ಫೋಟೋ ವೈರಲ್​

    ಲ್ಯಾಂಡರ್​ ಇಮೇಜರ್ ಕ್ಯಾಮೆರಾದಲ್ಲಿ ಸಖತ್​ ದೃಶ್ಯ ಸೆರೆ

    15 ಮೀಟರ್ ದೂರದಲ್ಲಿ ಪ್ರಗ್ಯಾನ್​ ಕಣ್ಣಿಗೆ ಕಂಡ ವಿಕ್ರಮ

ಹಿಮಕರನ ತವರಿನಲ್ಲಿ ಸಂಚಲನ ಆರಂಭಿಸಿರೋ ತ್ರಿವಿಕ್ರಮ, ಒಂದೋದೇ ಸತ್ಯಗಳನ್ನ ಬಯಲಿಗೆಳೆಯುತ್ತಿದ್ದಾನೆ. ಚಂದ್ರನ ಮೇಲೆ ಪ್ರಗ್ಯಾನ್​ನ ಮಗುವಿನಂತ ಓಡಾಟವನ್ನ ಇಸ್ರೋ, ತಾಯಿ-ಮಗುವಿನ ಬಾಂಧವ್ಯಕ್ಕೆ ಹೋಲಿಸಿ ಬಣ್ಣಿಸಿದೆ. ಈ ಮಧ್ಯೆ ಸೂರ್ಯ ಶಿಕಾರಿಗೂ ಇಸ್ರೋ ಭರ್ಜರಿ ಸಿದ್ಧತೆ ನಡೆಸಿದೆ.

ಪ್ರಗ್ಯಾನ್​ ಓಡಾಟವನ್ನ ಸೆರೆ ಹಿಡಿದ ಲ್ಯಾಂಡರ್

ಚಂದ್ರನ ಮೇಲೆ ಪರ್ಯಟನೆ ಆರಂಭಿಸಿರೋ ಭಾರತದ ತ್ರಿವಿಕ್ರಮ​ ಶಶಿಯ ಅಂಗಳದಲ್ಲಿ ಏನೇನೆಲ್ಲಾ ಅಡಗಿದೆ ಅನ್ನೋ ಪ್ರಶ್ನೆಗೆ ವಿಸ್ಮಯದ ಉತ್ತರಗಳನ್ನ ರವಾನೆಮಾಡುತ್ತಿದ್ದಾನೆ. ಹಿಮಕರನ ಮೇಲ್ಮೈನಲ್ಲಿ ಪ್ರಗ್ಯಾನ್​ನಿಂದ ಸೇಫ್ ರೂಟ್​ಗಾಗಿ ಹುಡುಕಾಟ ನಡೆದಿದ್ದು, ಈ ದೃಶ್ಯವನ್ನ ಇಮೇಜರ್ ಕ್ಯಾಮರಾದಿಂದ ವಿಕ್ರಮ್​ ಲ್ಯಾಂಡರ್​​ ಸೆರೆಹಿಡಿದಿದೆ. ರೋವರ್ ಈ ಓಡಾಟದ ದೃಶ್ಯವನ್ನ ಹಂಚಿಕೊಂಡ ಇಸ್ರೋ, ಪ್ರಗ್ಯಾನ್​ನ ಓಡಾಟ ಚಂದಮಾಮನ ಅಂಗಳದಲ್ಲಿ ಮಗುವಿನಂತೆ ಭಾಸವಾಗುತ್ತಿದೆ. ಮಗುವನ್ನ ತಾಯಿ ಪ್ರೀತಿಯಿಂದ ನೋಡಿದ ಭಾವನೆಯಂತೆ ಕಾಣುತ್ತಿದೆ ಅಂತ ಬಣ್ಣಿಸಿದೆ.

ವಿಕ್ರಮ್ ಲ್ಯಾಂಡರ್​ ಫೋಟೋ ತೆಗೆದ ಪ್ರಗ್ಯಾನ್!

ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮನಿಂದ ಬೇರ್ಪಟ್ಟು ಹಿಮಕರನ ಮೇಲ್ಮೈನಲ್ಲಿ ಪರ್ಯಟನೆ ಆರಂಭಿಸಿರೋ ಪ್ರಗ್ಯಾನ್​, ವಿಕ್ರಮ್​ ಲ್ಯಾಂಡರ್​ನ ಪೋಟೋವನ್ನೇ ಕ್ಲಿಕ್ಕಿಸಿ ಭೂಮಿಗೆ ರವಾನೆ ಮಾಡಿದೆ. ಪ್ರಗ್ಯಾನ್​ನಲ್ಲಿರುವ ನೇವಿಗೇಶನ್ ಕ್ಯಾಮೆರಾದಿಂದ ವಿಕ್ರಮ್​ನ ಪೋಟೋ ತೆಗೆಯಲಾಗಿದೆ. ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್​ನಿಂದ ಅಭಿವೃದ್ಧಿಪಡಿಸಲಾದ ಹೈ ರೆಸ್ಯುಲ್ಯೂಷನ್ ಕ್ಯಾಮರಾದಿಂದ ಈ ಪೋಟೋ ಕ್ಲಿಕ್ಕಿಸಲಾಗಿದೆ. ಸದ್ಯ 15 ಮೀಟರ್ ದೂರದಲ್ಲಿ ಪ್ರಗ್ಯಾನ್​ ಕಣ್ಣಿನಲ್ಲಿ ಕಂಡ ವಿಕ್ರಮ್ ಲ್ಯಾಂಡರ್ ಪೋಟೋವನ್ನ ಇಸ್ರೋ ಬಿಡುಗಡೆ ಮಾಡಿದೆ.

ಇಸ್ರೋ ಉತ್ಸಾಹವನ್ನ ಹೆಚ್ಚಿಸಿದ ಚಂದ್ರನ ಖನಿಜ ಸಂಪತ್ತು!

ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಗ್ಯಾನ್ ರೋವರ್​ ಖನಿಜಗಳು ಇರುವಿಕೆ ಪತ್ತೆ ಹಚ್ಚಿರೋದು ಇಸ್ರೋದ ಉತ್ಸಾಹವನ್ನ ಇಮ್ಮಡಿಗೊಳಿಸಿದೆ. ಮಾನವ ಜೀವಿಸೋದಕ್ಕೆ ಅತ್ಯಗತ್ಯವಾಗಿರೋ ಆಮ್ಲಜನಕ ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಇರೋದು ಧೃಡಪಟ್ಟಿದೆ. ಜೊತೆಗೆ ಸಲ್ಪರ್, ಅಲ್ಯೂಮಿನಿಯಂ, ಕ್ಯಾಲ್ಶಿಯಂ, ಐರನ್, ಟೈಟಾನಿಯಂ ಹಾಗೂ ಮ್ಯಾಂಗನೀಸ್​ ಕೂಡ ಪತ್ತೆಯಾಗಿದೆ. ಸದ್ಯ ಚಂದ್ರನಂಗಳದಲ್ಲಿ ಹೈಡ್ರೋಜನ್​ಗಾಗಿ ಹುಡುಕಾಟ ಮುಂದುವರಿದಿದೆ.

ಆದಿತ್ಯ ಎಲ್​-1 ಉಡಾವಣೆಗೆ ಇಸ್ರೋ ಸಿದ್ದತೆ!

ಸೆಪ್ಟೆಂಬರ್​ 2ರಂದು ಆದಿತ್ಯ ಎಲ್-1 ರಾಕೆಟ್​ ಅನ್ನ ಉಡಾವಣೆ ಮಾಡಲು ಇಸ್ರೋ ಸಕಲ ಸಿದ್ಧತೆ ಕೈಗೊಂಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಆದಿತ್ಯನ ಉಡಾವಣೆಗೆ ತಯಾರಿ ಆರಂಭವಾಗಿದೆ. ಇಸ್ರೋ ರಾಕೆಟ್​ ಲಾಂಚ್ ಬಗ್ಗೆ​ ರಿಹರ್ಸಲ್ ಸಹ​ ನಡೆಸಿದ್ದು, ರಾಕೆಟ್ ವೆಹಿಕಲ್ ಅಂತರಿಕ ಪರೀಕ್ಷೆ ಪೂರ್ಣಗೊಂಡಿದೆ. ಈ ಬಗ್ಗೆ ಟ್ವೀಟ್ ಮೂಲಕ ಇಸ್ರೋ ಮಾಹಿತಿ ನೀಡಿದೆ. ಆದಿತ್ಯ ಎಲ್​-1 ರಾಕೆಟ್​ನಲ್ಲಿ 7 ಪೇ ಲೋಡ್​ಗಳು ಇವೆ ಅಂತ ಸಹ ಇಸ್ರೋ ತಿಳಿಸಿದೆ. ಒಟ್ಟಿನಲ್ಲಿ ಚಂದ್ರನ ಒಡಲಲ್ಲಿ ಅವಿತಿರೋ ಖನಿಜ ಸಂಪತ್ತು ಇಸ್ರೋದ ಸಂಶೋಧನೆಯ ಹಾದಿಗೆ ಉತ್ಸಾಹ ತುಂಬಿದೆ. ಶಶಿಯ ಮಡಿಲಿನ ಸತ್ಯಗಳನ್ನ ಕೆದಕುತ್ತಿರೋ ಪ್ರಗ್ಯಾನ್​ನಿಂದ ಮತ್ತಷ್ಟು ಮಾಹಿತಿಯ ನೀರಿಕ್ಷೆಯಲ್ಲಿ ಇಸ್ರೋ ಕಾದುಕುಳಿತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನ ಅಂಗಳದಲ್ಲಿ ವಿಕ್ರಮ್​ ರೋವರ್ ಓಡಾಟ; ಹೈಡ್ರೋಜನ್​ಗಾಗಿ ಹುಡುಕಾಟ ನಡೆಸುತ್ತಿರುವ ಇಸ್ರೋ

https://newsfirstlive.com/wp-content/uploads/2023/08/isro-12-1.jpg

Load More