ಎರಡು ವಾರಗಳ ಅಂತರದಲ್ಲಿ 2 ಬಾರಿ ಲಾಂಚಿಂಗ್
ಉಪಗ್ರಹಗಳ ಹೊತ್ತೊಯ್ದ PSLV-C56 ರಾಕೆಟ್
ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ನಮ್ಮ ಇಸ್ರೋ
ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 7 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಬೆಳಗ್ಗೆ 6.30ಕ್ಕೆ ಸರಿಯಾಗಿ ಒಟ್ಟು 7 ಉಪಗ್ರಹಗಳನ್ನು ಪೋಲಾರ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್ (PSLV-C56) ಮೂಲಕ ಇಸ್ರೋ ಯಶಸ್ವಿಯಾಗಿ ಲಾಂಚ್ ಮಾಡಿದೆ.
ಯಾವೆಲ್ಲ ಸ್ಯಾಟಲೈಟ್ ಲಾಂಚ್..?
7 ಸ್ಯಾಟಲೈಟ್ಗಳಲ್ಲಿ ಒಂದು ಮೇಕ್ ಇನ್ ಇಂಡಿಯಾ ಕಲ್ಪನೆಯ ದೇಶಿ ನಿರ್ಮಿತ ಉಪಗ್ರಹವಾಗಿದೆ. ಉಳಿದ 6 ವಿದೇಶಿ ನಿರ್ಮಿತ ಸ್ಯಾಟಲೈಟ್ ಆಗಿವೆ. ಡಿಎಸ್-ಸಿಂಥೆಟಿಕ್ ಅಪೆರ್ಚರ್ ಏರೋಸ್ಪೆಸ್, ವೆಲಾಕ್ಸ್-ಎಎಂ, ಆರ್ಕೇಡ್, ಸ್ಕೂಬ್-2, ಗೆಲೇಸಿಯ-2, ORB12-ಸ್ಪ್ರೈಡರ್, ನೂಲಯನ್ ಸ್ಯಾಟಲೈಟ್ಗಳನ್ನು ಲಾಂಚ್ ಮಾಡಲಾಗಿದೆ. DS-SAR ಸ್ಯಾಟಲೈಟ್ ಬರೋಬ್ಬರಿ 360 ಕೆಜಿ ಇದ್ದು, ಭೂಯಿಂದ 535 ಕಿಲೋ ಮೀಟರ್ ಎತ್ತರದಲ್ಲಿರುವ ಸಮಭಾಜಕ ಕಕ್ಷೆಗೆ (Near-equatorial Orbit) ಇದನ್ನು ಸೇರಿಸಲಾಗುತ್ತದೆ.
ಸಿಂಗಾಪುರದ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಏಜೆನ್ಸಿ ಮತ್ತು ಸಿಂಗಾಪುರದ ST ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ DS-SAR ಅನ್ನು ಅಭಿವೃದ್ಧಿಪಡಿಸಲಾಗಿದೆ. DS-SAR ಅನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನಿಂದ ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ನೊಂದಿಗೆ ಅಳವಡಿಸಲಾಗಿದೆ. ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲೂ ಇದು ಕಾರ್ಯ ನಿರ್ವಹಿಸಲಿದೆ. ಹಗಲು-ರಾತ್ರಿ ಕೂಡ ಇದು ಸುಲಭವಾಗಿ ಫೋಟೋಗಳನ್ನು ತೆಗೆದು ಇಸ್ರೋಗೆ ಕಳುಹಿಸಲಿದೆ.
ವರ್ಷದ 3ನೇ ವಾಣಿಜ್ಯ ಮಿಷನ್
ಈ ವರ್ಷ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಲಾಂಚ್ ಮಾಡಿದ ಮೂರನೇ ವಾಣಿಜ್ಯ ಮಿಷನ್ ಇದಾಗಿದೆ. ಈ ಹಿಂದೆ ಬ್ರಿಟನ್‌ನ ಒನ್-ವೇವ್ (ಒನ್-ವೇವ್)ಗೆ ಸಂಬಂಧಿಸಿದ ಬರೋಬ್ಬರಿ 36 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಕಳೆದ ಏಪ್ರಿಲ್‌ನಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ನಿಂದ ಸಿಂಗಾಪುರದ 2 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ