newsfirstkannada.com

ಚಂದ್ರಯಾನ-4, ಚಂದ್ರಯಾನ-5 ಮಿಷನ್‌ಗೂ ರೆಡಿಯಾದ ಇಸ್ರೋ; ಗ್ರೇಟ್ ಸಕ್ಸಸ್‌ ಬೆನ್ನಲ್ಲೇ ಮತ್ತೊಂದು ಸಾಹಸ

Share :

25-08-2023

    ಚಂದ್ರಯಾನ-1ರ ಪ್ರಾಜೆಕ್ಟ್ ಡೈರೆಕ್ಟರ್ ಅಣ್ಣಾದೊರೈ ರೋಚಕ ಮಾಹಿತಿ

    ಚಂದ್ರಯಾನ-2ರ ಆರ್ಬಿಟರ್‌ನಿಂದ ವಿಕ್ರಮ್ ಲ್ಯಾಂಡರ್‌ಗೆ ಸಂದೇಶ

    ಬೆಂಗಳೂರಿನ ಇಸ್ರೋ ಕೇಂದ್ರದ ಸಂಪರ್ಕದಲ್ಲಿರುವ ವಿಕ್ರಮ್ ಲ್ಯಾಂಡರ್

ಚಂದಿರನ ದಕ್ಷಿಣ ಧ್ರುವದಲ್ಲಿ ಭಾರತ ತ್ರಿವಿಕ್ರಮನಾಗಿದ್ದು ಆಯ್ತು. ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನ ಈಗ ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ ಚಂದ್ರಯಾನ-3ಕ್ಕೆ ಇಸ್ರೋ ಯಶೋಗಾಥೆ ನಿಲ್ಲಲ್ಲ. ಚಂದ್ರಯಾನ-3 ಮಿಷನ್ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಮತ್ತಷ್ಟು ಚಂದ್ರಯಾನಗಳನ್ನು ನಡೆಸಲಿದ್ದಾರೆ. ಚಂದ್ರಯಾನ-1ರ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದ ಮೈಲಾಸ್ವಾಮಿ ಅಣ್ಣಾದೊರೈ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಂದ್ರಯಾನ-1ರ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದ ಮೈಲಾಸ್ವಾಮಿ ಅಣ್ಣಾದೊರೈ

ಮೈಲಾಸ್ವಾಮಿ ಅಣ್ಣಾದೊರೈ ಅವರ ಪ್ರಕಾರ ಚಂದ್ರಯಾನ-3ರ ಫಾಲೋ ಅಪ್ ಮಿಷನ್ ಅನ್ನು ಇಸ್ರೋ ನಡೆಸಲಿದೆ. ಅಂದ್ರೆ ಚಂದ್ರಯಾನ-4 ಮತ್ತು ಚಂದ್ರಯಾನ-5ರ ಮಿಷನ್ ಕೂಡ ನಡೆಯಲಿದೆ. ಸಹಜವಾಗಿಯೇ ಚಂದ್ರಯಾನ-3 ಯಶಸ್ವಿಯಾಗಿದ್ದರಿಂದ ಚಂದ್ರಯಾನ-4, ಚಂದ್ರಯಾನ-5 ನಡೆಯಲಿದೆ ಎಂದು ಮೈಲಾಸ್ವಾಮಿ ಅಣ್ಣಾದೊರೈ ತಿಳಿಸಿದ್ದಾರೆ.

‘ಗೂಢಚಾರಿಕೆ ಮಾಡ್ತೇನೆ ಎಂದ ಚಂದ್ರಯಾನ-2’
ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು, ಪ್ರಜ್ಞಾನ್ ರೋವರ್ ತನ್ನ ಕಾರ್ಯಾರಂಭ ಮಾಡಿದೆ. ಈ ಮಧ್ಯೆ ಚಂದ್ರಯಾನ-2ರ ಆರ್ಬಿಟರ್ ವಿಕ್ರಮ್ ಲ್ಯಾಂಡರ್‌ಗೆ ಒಂದು ಸಂದೇಶ ಕಳುಹಿಸಿದೆ. ನಾನು‌ ನಿಮ್ಮ ಮೇಲೆ ಗೂಢಚಾರಿಕೆ ಮಾಡುತ್ತೇನೆ. ಅಂದ್ರೆ ನಿಮ್ಮ ಮೇಲೆ ನಾನು ನಿಗಾ ಇಟ್ಟಿರುತ್ತೇನೆ ಎಂದು ಚಂದ್ರಯಾನ-2ರ ಆರ್ಬಿಟರ್ ವಿಕ್ರಮ್ ಲ್ಯಾಂಡರ್‌ಗೆ ಹೇಳಿದೆಯಂತೆ. ಸೋಷಿಯಲ್ ಮೀಡಿಯಾ Xನಲ್ಲಿ ಇಸ್ರೋ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಹೀಗೆ ನಿಗಾ ಇಟ್ಟಿರುವುದಷ್ಟೇ ಅಲ್ಲ ಚಂದ್ರಯಾನ-2 ಆರ್ಬಿಟರ್, ಚಂದ್ರಯಾನ-3ರ ಲ್ಯಾಂಡರ್ ಫೋಟೋವನ್ನು ತೆಗೆದಿದೆ. ಆರ್ಬಿಟರ್ ಹೈ ರೆಸಲ್ಯೂಷನ್ ಕ್ಯಾಮೆರಾದಿಂದ ಚಂದ್ರಯಾನ-3ರ ಲ್ಯಾಂಡರ್ ಪೋಟೋ ಸೆರೆ ಹಿಡಿಯಲಾಗಿದೆ. ಚಂದ್ರಯಾನ-3ರ ಲ್ಯಾಂಡರ್ ಲ್ಯಾಂಡಿಂಗ್ ಆದ ಬಳಿಕ ಚಂದ್ರಯಾನ-2 ಆರ್ಬಿಟರ್ ಈ ಪೋಟೋ ಸೆರೆ ಹಿಡಿದಿದ್ದು, ಇಸ್ರೋ ತನ್ನ ಅಧಿಕೃತ Xನಲ್ಲಿ ಹಂಚಿಕೊಂಡಿದೆ.

ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಬಳಿಕ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಬೆಂಗಳೂರಿನ ಇಸ್ರೋ ಕೇಂದ್ರದ ಸಂಪರ್ಕದಲ್ಲಿದೆ. ಹೀಗಾಗಿ ಇಸ್ರೋ ಸಂಸ್ಥೆ ಕ್ಷಣಕ್ಷಣದ ಮಾಹಿತಿಯನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳುತ್ತಿದೆ. ಇಂದು ಇಸ್ರೋದಿಂದ ಚಂದ್ರನ ಮೇಲ್ಮೈನ ಮತ್ತೊಂದು ‌ವಿಡಿಯೋ ಬಿಡುಗಡೆಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಸ್ಪರ್ಶಕ್ಕೂ ಮುನ್ನ ಸೆರೆ ಹಿಡಿದ ದೃಶ್ಯ ಇದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಚಂದ್ರಯಾನ-4, ಚಂದ್ರಯಾನ-5 ಮಿಷನ್‌ಗೂ ರೆಡಿಯಾದ ಇಸ್ರೋ; ಗ್ರೇಟ್ ಸಕ್ಸಸ್‌ ಬೆನ್ನಲ್ಲೇ ಮತ್ತೊಂದು ಸಾಹಸ

https://newsfirstlive.com/wp-content/uploads/2023/07/ISRO-1.jpg

Load More