newsfirstkannada.com

Chandrayaan-3 Mission: ಚಂದಮಾಮಾನ ಅಂಗಳದಲ್ಲಿ ಮಗುವಾದ ಪ್ರಗ್ಯಾನ್ ರೋವರ್; ಇಸ್ರೋ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ

Share :

31-08-2023

    4 ಮೀಟರ್ ಆಳದ ಗುಂಡಿಯಿಂದ ಪಾರಾಗಿದ್ದ ಪ್ರಗ್ಯಾನ್ ರೋವರ್

    ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಮೇಲೆ ರೋವರ್ ಓಡಾಟ ಹೇಗಿದೆ?

    ತನ್ನ ಸೇಫ್‌ ರೂಟ್‌ಗಾಗಿ ಹುಡುಕಾಟ ನಡೆಸಿದ ಪ್ರಗ್ಯಾನ್ ರೋವರ್‌

ಇಸ್ರೋ ಕಳುಹಿಸಿದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಲ್ಯಾಂಡ್ ಆಗಿ ಇಂದಿಗೆ 8 ದಿನಗಳು ಕಳೆದಿದೆ. ನಿರಂತರ ಅಧ್ಯಯನದಲ್ಲಿ ಸಕ್ರಿಯವಾಗಿರುವ ಪ್ರಗ್ಯಾನ್ ರೋವರ್ ಮಹತ್ವದ ಫೋಟೋ ಹಾಗೂ ಮಾಹಿತಿಗಳನ್ನು ಇಸ್ರೋ ವಿಜ್ಞಾನಿಗಳಿಗೆ ರವಾನೆ ಮಾಡುತ್ತಿದೆ. ಇಸ್ರೋ ಕೂಡ ಪ್ರಗ್ಯಾನ್ ರೋವರ್ ಕಳುಹಿಸಿದ ಕೆಲವು ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇಂದೂ ಕೂಡ ಇಸ್ರೋ ತನ್ನ ಅಧಿಕೃತ Xನಲ್ಲಿ ಪ್ರಗ್ಯಾನ್ ರೋವರ್ ಓಡಾಟದ ಲೇಟೆಸ್ಟ್ ವಿಡಿಯೋವನ್ನು ಶೇರ್ ಮಾಡಿದೆ.

ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದಿರುವ ಪ್ರಗ್ಯಾನ್ ರೋವರ್ ಸದ್ಯ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಮೇಲೆ ಓಡಾಟ ನಡೆಸುತ್ತಿದೆ. ಸದ್ಯ ಇಸ್ರೋ ರಿಲೀಸ್ ಮಾಡಿರೋ ವಿಡಿಯೋದಲ್ಲಿ ಪ್ರಗ್ಯಾನ್ ರೋವರ್‌ ತನ್ನ ಸೇಫ್‌ ರೂಟ್‌ಗಾಗಿ ಹುಡುಕಾಟ ನಡೆಸುತ್ತಿರೋದು ಕಂಡು ಬಂದಿದೆ. ಇದನ್ನು ನೋಡಿದಾಗ ಚಂದಮಾಮಾನ ಅಂಗಳದಲ್ಲಿ ಮಗು ಆಟವಾಡುವಾಗ ತಾಯಿ ಪ್ರೀತಿಯಿಂದ ನೋಡಿದ ಭಾವನೆ ಬರುತ್ತದೆ. ಅಲ್ಲವೇ? ಎಂದು ಇಸ್ರೋ ಬಣ್ಣಿಸಿದೆ. ವಿಕ್ರಮ್‌ ಲ್ಯಾಂಡರ್‌ನ ಇಮೇಜರ್ ಕ್ಯಾಮೆರಾದಿಂದ ಈ ವಿಡಿಯೋ ಅನ್ನು ರೆಕಾರ್ಡ್ ಮಾಡಲಾಗಿದೆ.

ಇದನ್ನೂ ಓದಿ: ಚಂದ್ರನ ಮೇಲೆ ಎದುರಾಗಿತ್ತು ‘ಗುಂಡಿ’ ಗಂಡಾಂತರ; ಸ್ವಲ್ಪದರಲ್ಲೇ ಪ್ರಗ್ಯಾನ್ ರೋವರ್ ಬಚಾವ್ ಆಗಿದ್ದು ಹೇಗೆ?

ಇನ್ನು, ವಿಕ್ರಮ್ ಲ್ಯಾಂಡರ್‌ನಿಂದ ಕೆಳಗಿಳಿದ ಪ್ರಗ್ಯಾನ್ ರೋವರ್ ಬಹಳ ದೊಡ್ಡ ಗಂಡಾಂತರದಿಂದ ಪಾರಾಗಿತ್ತು. ಲ್ಯಾಂಡರ್‌ನಿಂದ ಹೊರ ಬರುತ್ತಿದ್ದಂತೆ ಪ್ರಗ್ಯಾನ್ ರೋವರ್‌ಗೆ 4 ಮೀಟರ್ ಸುತ್ತಳತೆಯ ಗುಂಡಿಯೇ ಎದುರಾಗಿತ್ತು. ಪ್ರಗ್ಯಾನ್ ರೋವರ್‌ಗೆ ಎದುರಾದ ಆ ಕುಳಿಯ ಫೋಟೋವನ್ನು ಇಸ್ರೋ ಸಾಮಾಜಿಕ ಜಾಲತಾಣ Xನಲ್ಲಿ ಶೇರ್ ಮಾಡಿಕೊಂಡಿತ್ತು. ಇದಾದ ಮೇಲೆ ಸೇಫ್ ರೂಟ್ ಆಯ್ಕೆ ಮಾಡಿಕೊಂಡ ಪ್ರಗ್ಯಾನ್ ರೋವರ್ ಇದೀಗ ಚಂದ್ರನ ಮೇಲೆ ತನ್ನ ಅಧ್ಯಯನವನ್ನು ಮುಂದುವರೆಸಿದೆ. ಇನ್ನು 6 ದಿನಗಳ ಕಾಲ ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Chandrayaan-3 Mission: ಚಂದಮಾಮಾನ ಅಂಗಳದಲ್ಲಿ ಮಗುವಾದ ಪ್ರಗ್ಯಾನ್ ರೋವರ್; ಇಸ್ರೋ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ

https://newsfirstlive.com/wp-content/uploads/2023/08/Pragyan-Rover-1.jpg

Load More