newsfirstkannada.com

Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

Share :

04-07-2023

  ಅವತಾರ್-2 ಚಿತ್ರಗಿಂತಲೂ ಕಡಿಮೆ ಖರ್ಚಿನಲ್ಲಿ ಚಂದ್ರಯಾನ-3

  ಹಳೆಯ ತಪ್ಪುಗಳನ್ನು ತಿದ್ದುಕೊಂಡು ಹೊಸ ಯಾತ್ರೆ ಆರಂಭ

  ಈ ಚಂದ್ರಯಾನ-3ಯಿಂದ ಏನೆಲ್ಲ ಅಧ್ಯಯನ ಮಾಡಲಾಗುತ್ತದೆ?

ಪ್ರೇಮಿಗಳ ಪ್ರೀತಿಯ ಚಂದ್ರ.. ಮಕ್ಕಳ ಪಾಲಿನ ‘ಚಂದಮಾಮ’.. ಕವಿಗಳ ಕಣ್ಣಿನ ಬಾನ ಚಂದಿರ.. ಬ್ರಹ್ಮಾಂಡಲದಲ್ಲಿರುವ ಚಂದ್ರನಿಗೆ ಅದೋನೋ ಆಕರ್ಷಣೆಯ ‘ಪವರ್ ಸೆಂಟರ್’. ಕತ್ತಲಾಗುತ್ತಿದ್ದಂತೆ ಚಂದಮಾಮನ ತೋರಿಸಿ, ಮಕ್ಕಳಿಗೆ ತುತ್ತು ನೀಡಿ ಚಂದ್ರಲೋಕದ ಕಲ್ಪನೆಯ ಕಥಾಲೋಕಕ್ಕೆ ಚಿಣ್ಣರನ್ನು ಕರೆದುಕೊಂಡು ಹೋಗುವವಳು ಅಮ್ಮ. ವೈಜ್ಞಾನಿಕವಾಗಿ ಚಂದಿರನ ಅಂಗಳದಲ್ಲಿ ಏನಿದೆಯೆಂದು ಜಗತ್ತಿಗೆ ತೋರಿಸಬೇಕು ಅಂತಾ ನಮ್ಮ ವಿಜ್ಞಾನಿಗಳು. ಅಂದು ಅಮ್ಮ ಕೈತುತ್ತು ಕೊಡುವಾಗ ಸೃಷ್ಟಿಸಿದ ಚಂದ್ರ ಲೋಕದ ಪರಿಣಾಮವೋ ಏನೋ ಗೊತ್ತಿಲ್ಲ. ನಮ್ಮ ವಿಜ್ಞಾನಿಗಳಿಗೆ ಚಂದ್ರನ ಅಂಗಳದ ಕುತೂಹಲ ತುಸು ದೊಡ್ಡದೇ ಇದೆ. ಚಂದಿರನ ಹೆಸರಲ್ಲಿ ಹೊಟ್ಟೆ ತುಂಬಿಸುವ ಅಮ್ಮನೂ, ವೈಜ್ಞಾನಿಕವಾಗಿ ಬೆಳಕು ಚೆಲ್ಲಲು ಹೊರಟಿರುವ ವಿಜ್ಞಾನಿಗಳೂ ಇಂದು ‘ನಮ್ಮ ಹೆಮ್ಮೆ’!

ಹೌದು, ಕಳೆದೆರಡು ಯಾನಗಳಲ್ಲಿ ಆಗಿದ್ದ ತಪ್ಪುಗಳನ್ನು ತಿದ್ದುಕೊಂಡಿರುವ ಇಸ್ರೋದ (Indian Space Research Organisation) ನಮ್ಮ ವಿಜ್ಞಾನಿಗಳು ನಭೋ ಮಂಡಲದಲ್ಲಿ ಹೊಸ ಮೈಲಿಗಲ್ಲು ಬರೆಯಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ಭಾರತ ಗರ್ವದಿಂದ ಕಾದು ಕೂತಿದ್ದರೆ, ಇಡೀ ವಿಶ್ವ ಕುತೂಹಲದಿಂದ ವೀಕ್ಷಣೆ ಮಾಡುತ್ತಿದೆ. ಜುಲೈ 12 ರಿಂದ ನಮ್ಮ ಮುಂದಿನ ನಿಲ್ದಾಣ’ ಚಂದಿನ ಅಂಗಳವಾಗಿದೆ. ಇಸ್ರೋ ವಿಜ್ಞಾನಿಗಳ ಬಹುನಿರೀಕ್ಷಿತ ಪ್ರಾಜೆಕ್ಟ್ ‘ಚಂದ್ರಯಾನ-3’ ಸಾಕಾರಗೊಳ್ಳಲಿದೆ.

ಗಗನಕ್ಕೆ ನಗೆಯಲಿದೆ GSLV-Mk3 ರಾಕೆಟ್

ಅಂದರೆ ಚಂದ್ರಯಾನ -3ಗೆ ಮುಹೂರ್ತ ಇಟ್ಟಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 13, ಮಧ್ಯಾಹ್ನ ಮಾಡ್ಯೂಲ್​ಗಳನ್ನು (Modules) ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ. ಚಂದ್ರನ ಅಂಗಳಕ್ಕೆ ತಲುಪುವ ಗುರಿಯೊಂದಿಗೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ ವಿ -ಎಂಕೆ3 (GSLV-Mk3 ) ಎಂಬ ಲಾಂಚಿಂಗ್ ವೆಹಿಕಲ್ ಗಗನಕ್ಕೆ ನಗೆಯಲಿದೆ.

ಮಿಷನ್​ನ ಒಟ್ಟು ತೂಕ 3900 ಕೆಜಿಯಾಗಿದ್ದು, ಒಟ್ಟು ಮೂರು ಕಮ್ಯುನಿಕೇಷನ್ಸ್ ಘಟಕಗಳನ್ನು ಹೊಂದಿದೆ. ಪ್ರೊಪುಲ್ಷನ್ ಮಾಡ್ಯೂಲ್ (propulsion module), ಲ್ಯಾಂಡರ್ (Lander payloads), ರೋವರ್ (Rover payloads) ಎಂಬ ಮೂರು ಮಷಿನ್ ಗಳು ಚಂದ್ರಯಾನ-3ರಲ್ಲಿ ಪ್ರಮುಖ ಪಾತ್ರವಹಿಸಲಿವೆ. ಪ್ರೊಪುಲ್ಷನ್ ಮಾಡ್ಯೂಲ್ ಅಂದರೆ, ಅಂತರಿಕ್ಷ ನೌಕೆಯು ನಭದತ್ತ ಚಿಮ್ಮುವಲ್ಲಿ ಸಹಾಯ ಮಾಡಲಿದೆ. ಇದರ ತೂಕವು ಬರೋಬ್ಬರಿ 2148 ಕೆಜಿ ಹೊಂದಿದೆ.

ಲ್ಯಾಂಡರ್ ಪೇಲೋಡ್ಸ್​:

ಹೆಸರೇ ಹೇಳುವಂತೆ ಇದು ಚಂದ್ರನ ಮೇಲ್ಮೈ ಭಾಗದಲ್ಲಿ ಇಳಿಯುವ ಮಷಿನ್ ಆಗಿದೆ. ಶ್ರೀಹರಿಕೋಟದಿಂದ ಉಡಾವಣೆಯಾದ ನೌಕೆಯಿಂದ ಬೇರ್ಪಟ್ಟು ಚಂದ್ರನಿದ್ದಲ್ಲಿಗೆ ತಲುಪುತ್ತಿದ್ದಂತೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಇದು ಬರೋಬ್ಬರಿ 1752 ಕೆಜಿಯನ್ನು ಹೊಂದಿದೆ.

ರೋವರ್ ಪೇಲೋಡ್ಸ್​:

ಕೊನೆಯದಾಗಿ ಚಂದ್ರನ ಸ್ಪರ್ಷ ಮಾಡೋದೇ ಈ ರೋವರ್. ಇದು 26 ಕೆಜಿ ಭಾರ ಹೊಂದಿದ್ದು. ಚಂದ್ರನ ಸುತ್ತ ತಿರುಗುತ್ತ ಮಾಹಿತಿಗಳನ್ನು ಸಂಗ್ರಹಿಸುವ ಯಂತ್ರವಾಗಿದೆ. ಈ ಮಷಿನ್ ನೀಡುವ ಮಾಹಿತಿಗಳ ಆಧಾರದ ಮೇಲೆ ವಿಜ್ಞಾನಿಗಳು ಹೊಸ, ಹೊಸ ಸಂಶೋಧನೆಗೆ ಮುಂದಾಗಲಿದ್ದಾರೆ.

ಲ್ಯಾಂಡರ್-ರೋವರ್ ಕೆಲಸ ಏನು?

ChaSTE: (Chandra’s Surface Thermophysical Experiment) ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್​ಗೆ ಸಹಾಯ ಮಾಡುವ ಈ ಲ್ಯಾಂಡರ್​​ ಪ್ಲೇಲೋಡ್​ಗೆ ಚಂದ್ರನ ಮೇಲ್ಮೈನ ಥರ್ಮೋಫಿಸಿಕಲ್ ಮಾಡೆಲ್ ಅಳವಡಿಸಲಾಗಿದೆ. ಇದು ಚಂದ್ರನ ಮೇಲ್ಮೈ ತಾಪಮಾನವನ್ನು ತಿಳಿದುಕೊಳ್ಳಲಿದೆ. ಇದನ್ನು ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಪಿಆರ್ ಎಲ್ ಲ್ಯಾಬ್ ಸಿದ್ಧಪಡಿಸಲಾಗಿದೆ. ಚಂದ್ರನ ಕಿರಣಗಳ ಅಧ್ಯಯನಕ್ಕಾಗಿ ಪ್ಯಾಸೀವ್ ಲೇಸರ್ ರೆಟ್ರೋರೇಪ್ಲೆಕ್ಟರ್​​​ ಒತ್ತು ನೀಡಲಾಗಿದೆ.

ILSA: (Instrument for Lunar Seismic Activity) ಇದನ್ನು ಇನ್ ಸ್ಟ್ರುಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ ಅಂತಾ ಕರೆಯುತ್ತಾರೆ. ಇದು ಚಂದ್ರನ ಮೇಲ್ಮೈನ ಕಂಪನಗಳ ಬಗ್ಗೆ ಮಾಹಿತಿ ನೀಡಲಿದ್ಯಂತೆ. ಲ್ಯಾಗ್ಮುಯಿರ್ ಪ್ರೋಬ್ (Langmuir Probe): ಈ ಯಂತ್ರವನ್ನೂ ಕೂಡ ಲ್ಯಾಂಡರ್​ನಲ್ಲಿಯೇ ಅಳವಡಿಸಲಾಗಿದ್ದು, ಇದು ಚಂದ್ರನ ಮೇಲಿನ ಸಾಂದ್ರತೆ ಮತ್ತು ಅದರಲ್ಲಿನ ವ್ಯತ್ಯಾಸವನ್ನು ಪತ್ತೆಹಚ್ಚಲಿದೆ.

APXS (Alpha Particle X-ray): ಇದು ರೋವರ್ ಪೆಲೋಡ್​​ಗೆ ಸಂಬಂಧಿಸಿದ್ದಾಗಿದೆ. ರೋವರ್​​ನಲ್ಲಿ ಅಲ್ಫಾ ಪಾರ್ಟಿಕಲ್ ಎಕ್ಸ್ ರೇ ಸ್ಟೋಕೊಮೀಟರ್ ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ ಅಳವಡಿಕೆಯಾಗಿದೆ. ಲ್ಯಾಂಡಿಂಗ್ ಸ್ಥಳದಲ್ಲಿನ ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನಿಸಲಿದೆ. ಇನ್ನು ಪ್ರೊಪುಲ್ಷನ್ ಮಾಡೆಲ್ ಚಂದ್ರನ ಕಕ್ಷೆಯಲ್ಲಿ ಅಂದರೆ ಸುಮಾರು 100 ಕಿಲೋ ಮೀಟರ್ ದೂರವೇ ಉಳಿಯಲಿದ್ದು, ಅದರು ಉಪಗ್ರಹ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.

GSLV-Mk3 ಮೇಕ್ ಇನ್ ಇಂಡಿಯಾ ಕಲ್ಪನೆ

ಚಂದ್ರನ ಅಂಗಳ ತಲುಪಲು ಇಸ್ರೋದ ವಿಜ್ಞಾನಿಗಳು ಹಗಲು ರಾತ್ರಿ ಎನ್ನದೇ, ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ನಿನ್ನೆಯವರೆಗೆ GSLV-Mk3 ರಾಕೆಟ್​ಗೆ ಪೆಲೋಡ್​ಗಳನ್ನು ಜೋಡಿಸುವ ಕಾರ್ಯಗಳು ಮುಕ್ತಾಯಗೊಂಡಿದೆ ಎಂದು ಇಸ್ರೋ ತಿಳಿಸಿದೆ. ನೌಕೆಗಳನ್ನು ಹೊತ್ತು ನಭಕ್ಕೆ ಚಿಮ್ಮುವ GSLV-Mk3 ವಾಹಕದ ವಿಶೇಷತೆ ಏನಂದರೆ, ಅದು ಸ್ವದೇಶಿ ನಿರ್ಮಿತ. ಮೇಕ್ ಇನ್ ಇಂಡಿಯಾ ಕಲ್ಪನೆ ಅಡಿಯಲ್ಲಿ ನಿರ್ಮಾಣವಾಗಿದೆ.

ಚಂದ್ರನಲ್ಲಿ ತಲುಪಲು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (Geosynchronous Satellite Launch Vehicle Mark III) ಕೂಡ ಮಹತ್ವದ್ದಾಗಿದೆ. ಇದು ನಾಲ್ಕು ಹಂತಗಳನ್ನು ದಾಟಲಿದ್ದು, 3 ಮತ್ತು ಕೊನೆಯ ಹಂತ ತುಂಬಾನೇ ನಿರ್ಣಾಯಕವಾಗಲಿದೆ. ಬಾಹ್ಯಾಕಾಶದಲ್ಲಿ ವೇಗ ತುಂಬಿಕೊಳ್ಳಲು ಇಂಧನದ ಕ್ಷಮತೆ ಇರಬೇಕಾಗಿದ್ದು, ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಇಸ್ರೋ ಮಾಡಿಕೊಂಡಿದೆ. ಇದರ ಪ್ರತಿ ಹಂತಕ್ಕೂ ಕ್ರಯೊಜೆನಿಕ್ ಹಂತ ಎಂದು ಕರೆಯಲಾಗುತ್ತದೆ.

ಒಟ್ಟಾರೆ, ದೊಡ್ಡ ದೊಡ್ಡ ಹಾಲಿವುಡ್​ ಸಿನಿಮಾಗಳಿಗಿಂತಲೂ ಕಡಿಮೆ ವೆಚ್ಚದಲ್ಲಿ ಭಾರತ ಚಂದ್ರನಡೆಗೆ ಹೋಗಲು ಸಿದ್ಧವಾಗಿ ನಿಂತಿದೆ. ಚಂದ್ರಯಾನ-3 ಪ್ರಾಜೆಕ್ಟ್​ನ ಒಟ್ಟು ಮೊತ್ತ 600 ಕೋಟಿ ಅಷ್ಟೇ. ಕಳೆದ ವರ್ಷ ರಿಲೀಸ್ ಆಗಿರುವ ಅವತಾರ್ -2 ಚಿತ್ರಕ್ಕೆ ಬರೋಬ್ಬರಿ 1,837 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಹಾಗೆ ನೋಡಲು ಹೋದರೆ ನಮ್ಮ ವಿಜ್ಞಾನಿಗಳು ಕಡಿಮೆ ಕರ್ಚಿನಲ್ಲಿ ಚಿಕ್ಕದಾಗಿ ಚೊಕ್ಕದಾಗಿ ವಿಶ್ವಕ್ಕೆ ಭಾರತದ ತಾಕತ್ತು ಪ್ರದರ್ಶಿಸಲು ಮುಂದಾಗಿದ್ದಾರೆ. ಸೋವಿಯತ್ ಒಕ್ಕೂಟ, ಅಮೆರಿಕ, ಚೀನಾ, ರಷ್ಯಾ ಜೊತೆ ಚಂದ್ರಯಾನ ವಿಚಾರದಲ್ಲಿ ಭಾರತ ಕೂಡ ಸ್ಪರ್ಧೆಗೆ ಇಳಿದಿದೆ. ಸಕರಾತ್ಮಕ ಬೆಳವಣಿಗೆ ಅಂದರೆ, ಇಸ್ರೋದ ಹೆಮ್ಮೆಯ ವಿಜ್ಞಾನಿಗಳು ರಷ್ಯಾಗಿಂತ ಮೊದಲೇ ಭಾರತ ಚಂದಿರಿನ ಅಂಗಳದಲ್ಲಿ ಕಾಲಿಡಲಿದೆ. ಭಾರತಮಾತೆಯ ಪುತ್ರರು, ಕಳುಹಿಸುವ ರಾಯಭಾರಿಯನ್ನು ಚಂದಮಾಮ ಪ್ರೀತಿಯಿಂದ ಸ್ವಾಗತಿಸಲಿದ್ದಾನೆ. ಚಂದ್ರಯಾನ-3 ಸಫಲತೆಗಾಗಿ ನಮ್ಮ ವಿಜ್ಞಾನಿಗಳಿಗೆ ನಿಮ್ಮೆಲ್ಲ ಆಶೀರ್ವಾದ ಬೇಕಿದೆ ಅಷ್ಟೇ.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

https://newsfirstlive.com/wp-content/uploads/2023/07/CHANDRAYANA-4.jpg

Load More