newsfirstkannada.com

ಚಂದ್ರಯಾನ- 3 ಪ್ರಯಾಣದ ಬಗ್ಗೆ ಅಪ್​ಡೇಟ್​ ಕೊಟ್ಟ ISRO.. ಈಗ ಎಷ್ಟು ದೂರದಲ್ಲಿದೆ ಲ್ಯಾಂಡರ್​​ ವಿಕ್ರಂ?

Share :

16-07-2023

    ದಕ್ಷಿಣ ಧ್ರುವದಲ್ಲಿ ಆಗಸ್ಟ್​ 23 ರಂದು ಲ್ಯಾಂಡ್ ಆಗಲಿದೆ

    ಚಂದ್ರನೆಡೆಗೆ ಇನ್ನು ಪ್ರಯಾಣ ಮಾಡುತ್ತಿರುವ ಲ್ಯಾಂಡರ್​ ವಿಕ್ರಂ

    ಸದ್ಯ ಎಷ್ಟು ಸಾವಿರ ಕಿಲೋ ಮೀಟರ್ ದೂರ ಹೋಗಿದೆ?

ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಜುಲೈ 14 ರಂದು ಭೂಮಿಯಿಂದ ಚಂದ್ರನೆಡೆಗೆ ಚಂದ್ರಯಾನ- 3 ಮಿಷನನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮಿಷನ್​ ಆಗಸದಲ್ಲಿ ಇನ್ನು ಪ್ರಯಾಣ ಮಾಡುತ್ತಿದೆ. ಈ ಬಗ್ಗೆ ಇಸ್ರೋ ಸಂಸ್ಥೆ ತನ್ನ ಅಧಿಕೃತ ಟ್ವೀಟರ್​ ಅಕೌಂಟ್​ನಲ್ಲಿ ಮಿಷನ್ ಬಗ್ಗೆ ಅಪ್​ಡೇಟ್ ಅನ್ನು ಹಂಚಿಕೊಂಡಿದೆ.

ಆಗಸದಲ್ಲಿ ಸಾಗುತ್ತಿರುವ ಸ್ಪೇಸ್​ಕ್ರಾಫ್ಟ್​ ಯಾವುದೇ ಸಮಸ್ಯೆ ಇಲ್ಲದೇ ಚೆನ್ನಾಗಿ ಪ್ರಯಾಣ ಮಾಡುತ್ತಿದೆ. ಬೆಂಗಳೂರಿನಲ್ಲಿನ ISTRAC/ISRO ಮಿಷನ್ ಅನ್ನು ಮೊದಲ ಕಕ್ಷೆಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದೆ. ಚಂದ್ರನ ದಕ್ಷಿಣ ಧ್ರುವದತ್ತ ಟ್ರಾವೆಲ್​ನಲ್ಲಿರುವ ಸ್ಪೇಸ್​ಕ್ರಾಫ್ಟ್​ ಸದ್ಯ 41,762 ಕಿ.ಮೀ x 173 ಕಿ.ಮೀ ಕಕ್ಷೆಯಲ್ಲಿದೆ. ಇದು ಆಗಸ್ಟ್​ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬಹುದು ಎಂದು ಇಸ್ರೋ ಸಂಸ್ಥೆ ಟ್ವೀಟರ್​ ಮೂಲಕ ಮಾಹಿತಿ ನೀಡಿದೆ.

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3  ಯಶಸ್ವಿಯಾಗಿ ಜುಲೈ 14 ರಂದು ಆಕಾಶಕ್ಕೆ ಕಳುಹಿಸಲಾಯಿತು. ಇದರಿಂದ ಭಾರತದ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲುಗಲ್ಲು ಸ್ಥಾಪನೆ ಮಾಡಿತು. ಅಂದು ಚಂದ್ರಯಾನ-3 ಯಡಾವಣೆಯನ್ನು ಭಾರತೀಯರೆಲ್ಲ ನೋಡಿ ಖುಷಿಪಟ್ಟರು. ಇವತ್ತಿಗೆ ಉಡಾವಣೆ ಮಾಡಿ ಎರಡು ದಿನಗಳು ಆಗುತ್ತಿವೆ. ಹೀಗಾಗಿ ಚಂದ್ರಯಾನ- 3 ಇನ್ನು ಆಗಸದಲ್ಲಿ 41 ದಿನಗಳ ಕಾಲ ಸುದೀರ್ಘ ಪ್ರಯಾಣ ಬೆಳಸಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ- 3 ಪ್ರಯಾಣದ ಬಗ್ಗೆ ಅಪ್​ಡೇಟ್​ ಕೊಟ್ಟ ISRO.. ಈಗ ಎಷ್ಟು ದೂರದಲ್ಲಿದೆ ಲ್ಯಾಂಡರ್​​ ವಿಕ್ರಂ?

https://newsfirstlive.com/wp-content/uploads/2023/07/CHANDRAYAANA_3-1.jpg

Load More