newsfirstkannada.com

Chandrayaan-3 Launch Successful: ಚಂದ್ರಯಾನ-3 ಪ್ರಾಜೆಕ್ಟ್​​​ಗೆ ಎಷ್ಟು ಹಣ ಖರ್ಚು..? ಲ್ಯಾಂಡರ್​, ರೋವರ್​ ಎಷ್ಟು ತೂಕ ಇವೆ?

Share :

14-07-2023

  ನೌಕೆಯ ಒಳಗಿನ ಭಾಗದಲ್ಲಿವೆ ಲ್ಯಾಂಡರ್, ರೋವರ್

  ಚಂದ್ರಯಾನ- 3ಗೆ ಒಟ್ಟು ಎಷ್ಟು ದುಡ್ಡು ವೆಚ್ಚ ಮಾಡಲಾಗಿದೆ?

  ಭಾರತೀಯರ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಉಪಗ್ರಹವನ್ನು ಯಶಸ್ವಿಯಾಗಿ ಇಂದು ಮಧ್ಯಾಹ್ನ ಆಕಾಶಕ್ಕೆ ಕಳುಹಿಸಲಾಯಿತು. ಇದರಿಂದ ಭಾರತದ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲುಗಲ್ಲು ಸ್ಥಾಪನೆ ಮಾಡಿದಂತೆ ಆಗಿದೆ. ಇವತ್ತು ಕಳುಹಿಸಲಾಗಿರುವ ಚಂದ್ರಯಾನ-3 ಅನ್ನು ಇಡೀ ಭಾರತೀಯರೆಲ್ಲ ನೋಡಿ ಖುಷಿಪಟ್ಟರು. ಅದು ಇನ್ನು ಆಗಸದಲ್ಲೇ 43 ದಿನಗಳ ಕಾಲ ಪ್ರಯಾಣ ಬೆಳಸಿ ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡ್​ ಆಗಲಿದೆ. ಇದೆಲ್ಲ ಗೊತ್ತಿರುವ ಸಂಗತಿನೇ. ಆದ್ರೆ ಈ ಉಡಾವಣೆ ಮಾಡುವುದಕ್ಕೆ ಭಾರತ ಸರ್ಕಾರ ಎಷ್ಟೆಲ್ಲ ಹಣ ಖರ್ಚು ಮಾಡಿದೆ. ಈ ಯಂತ್ರಗಳು ಎಷ್ಟು ಭಾರವಾಗಿರುತ್ತವೆ ಅನ್ನೋ ಮಾಹಿತಿ ಇಲ್ಲಿದೆ.

ಸದ್ಯ ನಭದಲ್ಲಿ ಸಂಚಾರ ಮಾಡುತ್ತಿರುವ ಚಂದ್ರಯಾನ -3 ಉಪಗ್ರಹವು ಒಟ್ಟು 3,921 ಕೆ.ಜಿ ತೂಕವಿದೆ. ಇದರಲ್ಲಿನ ಪ್ರಪೋಲಷನ್ ಮಾಡೆಲ್ 2,148 ಕೆ.ಜಿ ಭಾರವಾಗಿದೆ. ಈ ಉಪಗ್ರಹದ ಒಳ ಭಾಗದಲ್ಲಿ ಜೋಡಿಸಲಾಗಿರುವ ಲ್ಯಾಂಡರ್ (ವಿಕ್ರಮ್​), ರೋವರ್ (ಪ್ರಗ್ಯಾನ್) ಹಾಗೂ ಮಾಡೆಲ್ 1,752 ಕೆ.ಜಿ ತೂಕವನ್ನು ಹೊಂದಿವೆ.

ಇದನ್ನು ಓದಿ: ಇದು ನಮ್ಮ ಬಾಹ್ಯಾಕಾಶದ ಹೆಮ್ಮೆಯ ‘ಬಾಹುಬಲಿ’; ಫೇಲ್ ಆದ ದಾಖಲೆಯೇ ಇಲ್ಲ.. ಚಂದ್ರಯಾನ ನೌಕೆ ಹೊತ್ತೊಯ್ಯಲಿರುವ LVM-3 ನಿಮಗೆಷ್ಟು ಗೊತ್ತು?

ಇನ್ನು ಭಾರತ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ ಎಂದು ನೋಡುವುದಾದರೆ, ಚಂದ್ರಯಾನ- 3ಗೆ ಒಟ್ಟು ₹615 ಕೋಟಿ ರೂಪಾಯಿ ಹಣ ವೆಚ್ಚ ಮಾಡಲಾಗಿದೆ. ಉಪಗ್ರಹದ ಒಳ ಭಾಗದದಲ್ಲಿ ಜೋಡಿಸಲಾಗಿರುವ ವಿಕ್ರಮ್​ ನಮತ್ತು ಪ್ರಗ್ಯಾನ್​, ಪ್ರಪೋಲಷನ್​ಗೆ ₹250 ಕೋಟಿ ಖರ್ಚು ಮಾಡಲಾಗಿದೆ. ಇನ್ನು ಉಪಗ್ರಹ ಉಡಾವಣೆಗಾಗಿಯೇ ₹365 ಕೋಟಿ ರೂಪಾಯಿ ಹಣ ಖರ್ಚಾಗಿದೆ. ಒಟ್ಟಾರೆ ಭಾರತೀಯರ ಕನಸಿನ ಚಂದ್ರಯಾನ -3ಗೆ ₹615 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3 Launch Successful: ಚಂದ್ರಯಾನ-3 ಪ್ರಾಜೆಕ್ಟ್​​​ಗೆ ಎಷ್ಟು ಹಣ ಖರ್ಚು..? ಲ್ಯಾಂಡರ್​, ರೋವರ್​ ಎಷ್ಟು ತೂಕ ಇವೆ?

https://newsfirstlive.com/wp-content/uploads/2023/07/CHANDRAYAAN_3_LAUNCH.jpg

Load More