newsfirstkannada.com

ಕೊನೆಯ 2 ಗಂಟೆಗಳ ನಿರ್ಧಾರವೇ ಅಂತಿಮ: ಆಮೇಲೆ ನಿಯಂತ್ರಣದಲ್ಲೇ ಇರಲ್ಲ! ‘ವಿಕ್ರಂ’ ವೇಗ ತಗ್ಗಿಸಲು ಮುಂದಾದ ಇಸ್ರೋ

Share :

22-08-2023

    ವಿಕ್ರಂ ಲ್ಯಾಂಡರ್​ನ ವೇಗ ನಿಯಂತ್ರಿಸಲು ಮುಂದಾಗಿರೋ ಇಸ್ರೋ

    ಇಸ್ರೋ ಸ್ಟೇಷನ್​ನಿಂದ ಚಂದ್ರಯಾನ-3 ನೌಕೆಗೆ ಕಮಾಂಡ್

    ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಸಾಫ್ಟ್ ಲ್ಯಾಂಡಿಂಗ್‌ಗೆ ಕ್ಷಣಗಣನೆ

ಭಾರತೀಯರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ದಿನ ಹತ್ತಿರ ಬಂದಿದೆ. ನಾಳೆ ವಿಕ್ರಂ ನೌಕೆ ಚಂದ್ರನ ಮೇಲೆ ಲ್ಯಾಂಡ್​ ಆಗಲಿದೆ. ಆದರೆ ಅದಕ್ಕೂ ಮುನ್ನ ವಿಕ್ರಂ ಲ್ಯಾಂಡರ್​ನ ವೇಗವನ್ನು ನಿಯಂತ್ರಿಸುವಲ್ಲಿ ಇಸ್ರೋ ಮುಂದಾಗಿದೆ.

ಸದ್ಯ ‌ಸೆಕೆಂಡ್ ಗೆ 1.69 ಕಿಲೋಮೀಟರ್ ವೇಗದಲ್ಲಿ ವಿಕ್ರಮ್ ಲ್ಯಾಂಡರ್ ಸಾಗುತ್ತಿದೆ. ವಿಕ್ರಮ್ ಲ್ಯಾಂಡರ್ ವೇಗವನ್ನು ಸೆಕೆಂಡ್​​ಗೆ ಒಂದು ಅಥವಾ ಎರಡು ಮೀಟರ್​​ಗೆ ಇಳಿಸುವ ಸಾಹಸವನ್ನು ಇಸ್ರೋ ಮಾಡುತ್ತಿದೆ. ಇದು ಬಹುದೊಡ್ಡ ಸವಾಲಿನ ಕೆಲಸವಾಗಿದೆ.

ನಾಳೆ ಸಂಜೆ 5.47 ರವರೆಗೆ ಇಸ್ರೋ ಸ್ಟೇಷನ್​ನಿಂದ ಚಂದ್ರಯಾನ-3 ನೌಕೆಗೆ ಕಮಾಂಡ್ ನೀಡಲಾಗುತ್ತದೆ. ಬಳಿಕ ವಿಕ್ರಂ ತಾನಾಗಿಯೇ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ. ಸದ್ಯ ವಿಜ್ಞಾನಿಗಳಿಂದ ಲ್ಯಾಂಡರ್ ಅನ್ನು ‌ನಿಯಂತ್ರಣದಲ್ಲಿರಿಸುವ ಕೆಲಸ ನಡೆಯುತ್ತಿದೆ.

ಇದು ಸವಾಲಿನ ಕೆಲಸ

ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಈ ಬಗ್ಗೆ ಮಾತನಾಡಿದ್ದು, ನಾಳೆ ಸಂಜೆ 5.47 ರ ಬಳಿಕ ವಿಕ್ರಂ ಇಸ್ರೋ ಸ್ಟೇಷನ್​​​​ಗಳ‌ ನಿಯಂತ್ರಣದಲ್ಲಿ ಇರಲ್ಲ. ಹಾಗಾಗಿ ಸರಿಯಾದ ಜಾಗದಲ್ಲಿ ವಿಕ್ರಂ ಲ್ಯಾಂಡ್​ ಮಾಡಲು ಇಸ್ರೋ ಮುಂದಾಗಿದೆ. ಕುಳಿ, ಗುಂಡಿ, ಬಂಡೆಗಲ್ಲು ಮಾದರಿ ಜಾಗ ಹೊರತುಪಡಿಸಿ ಉಳಿದೆಡೆ ಲ್ಯಾಂಡರ್ ಲ್ಯಾಂಡ್​ ಮಾಡುವ ಸವಾಲಿನ ಕೆಲಸ ಇಸ್ರೋ ಮೇಲಿದೆ ಎಂದು ಹೇಳಿದ್ದಾರೆ.

ಕೊನೆಯ 2 ಗಂಟೆಯಲ್ಲಿ ತೀರ್ಮಾನ

ಇಸ್ರೋ ಅಹಮದಾಬಾದ್ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನ ನಿರ್ದೇಶಕ ನಿಲೇಶ್ ದೇಸಾಯಿ ಮಾತನಾಡಿದ್ದು, ಚಂದ್ರಯಾನ-3 ಆಗಸ್ಟ್ 23 ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡಿಂಗ್ ಆಗುವ ನಿರೀಕ್ಷೆಯಿದೆ. ಆದರೆ ಕೊನೆಯ ಎರಡು ಗಂಟೆಯಲ್ಲಿ ಇಸ್ರೋ ವಿಜ್ಞಾನಿಗಳು ಲ್ಯಾಂಡಿಂಗ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.

ನಾಳೆ ಸಂಜೆ 6 ಗಂಟೆಗೆ ಚಂದ್ರಯಾನ ಲ್ಯಾಂಡಿಂಗ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎರಡು ಗಂಟೆ ಮುಂಚಿತವಾಗಿ ನಿರ್ಧಾರ ಕೈಗೊಳ್ಳಲಾಗುತ್ತೆ. ಲ್ಯಾಂಡರ್ ಮಾಡ್ಯೂಲ್ ಆರೋಗ್ಯ ಪರಿಸ್ಥಿತಿ ಆಧಾರದ ಮೇಲೆ ಲ್ಯಾಂಡಿಂಗ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಯಾವುದಾದರೂ ಪರಿಸ್ಥಿತಿ ಅನುಕೂಲಕರವಾಗಿಲ್ಲದೇ ಇದ್ದಲ್ಲಿ ಆಗಸ್ಟ್ 27 ರಂದು ಲ್ಯಾಂಡಿಂಗ್ ಮಾಡಲಿದ್ದಾರೆ ಎಂದು ನಿಲೇಶ್ ದೇಸಾಯಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಯ 2 ಗಂಟೆಗಳ ನಿರ್ಧಾರವೇ ಅಂತಿಮ: ಆಮೇಲೆ ನಿಯಂತ್ರಣದಲ್ಲೇ ಇರಲ್ಲ! ‘ವಿಕ್ರಂ’ ವೇಗ ತಗ್ಗಿಸಲು ಮುಂದಾದ ಇಸ್ರೋ

https://newsfirstlive.com/wp-content/uploads/2023/08/CHANDRAYAANA.jpg

Load More