ಶುಕ್ರಗ್ರಹಕ್ಕೆ ನೌಕೆ ಕಳುಹಿಸಲು ಇಸ್ರೋ ಸಂಸ್ಥೆ ಭಾರೀ ಸಿದ್ಧತೆ
40 ವರ್ಷ ಬಳಿಕ ಬಾಹ್ಯಾಕಾಶ ಕೇಂದ್ರದ ಸಾಹಸಯಾತ್ರೆ..!
ಗಗನಯಾನಿಗಳನ್ನ ಮಹಾಸಾಗರದಲ್ಲಿ ಇಳಿಸುವ ಯೋಜನೆ
ಚಂದ್ರನ ಅಂಗಳದಲ್ಲಿ ಯಶಸ್ಸಿನ ಪಯಣದ ಬಳಿಕ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ನಿದ್ರೆಗೆ ಜಾರಿದೆ. ಸೂರ್ಯನತ್ತ ಆದಿತ್ಯ ನುಗ್ಗುತ್ತಿದ್ದು, ಇತ್ತ ಇಸ್ರೋ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸಗಳು ಶುರುವಾಗಿವೆ. ಗಗನಯಾನ, ಮತ್ತೊಂದು ಚಂದ್ರಯಾನ, ಶುಕ್ರದರ್ಶನ. ಹೀಗೆ ಒಂದಾದ ಮೇಲೊಂದು ಯೋಜನೆಗಳಿಗೆ ಇಸ್ರೋ ವಿಜ್ಞಾನಿಗಳ ತಂಡ ತಾಲೀಮು ಆರಂಭಿಸಿದೆ..
ಜ್ಞಾನ, ವಿಜ್ಞಾನ, ತಂತ್ರಜ್ಞಾನ.. ಭಾರತದ ಕನಸುಗಳಿಗೆ ಇಸ್ರೋ ಭವಿಷ್ಯ ಯೋಜನೆ ರೂಪಿಸ್ತಿದೆ. ಶಶಿಯ ಶಿಖರದಲ್ಲಿ ಹುಣ್ಣಿಮೆಯ ಖುಷಿ ಕಂಡ ಇಸ್ರೋ, ಆದಿತ್ಯನ ಮೂಲಕ ಸೂರ್ಯ ಶಿಕಾರಿ ಆರಂಭಿಸಿದೆ. ಆದಿತ್ಯ ಎಲ್1 ಭೂಮಿಯ ಕಕ್ಷೆಗೆ ಸಂಬಂಧಿಸಿದ ಮೊದಲ ಕಾರ್ಯವಿಧಾನವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಯಶಸ್ಸಿನ ನಂತರ, ಇಸ್ರೋ ಇನ್ನೂ ಅನೇಕ ಯೋಜನೆಗಳನ್ನ ಕಾರ್ಯಗತಗೊಳಿಸಲು ಹೊರಟಿದೆ.
ಚಂದ್ರನ ಮೇಲೆ ಇಸ್ರೋ ಸಂಸ್ಥೆ ಹೆಚ್ಚು ಮೋಹ!
ಚಂದ್ರಯಾನ ಅನ್ನೋದು ದೇಶದ ಕನಸಿನ ಮತ್ತು ಪ್ರತಿಷ್ಠೆಯ ಯೋಜನೆಯಲ್ಲ, ಇದು ಭಾರತದ ಮಹತ್ವಾಕಾಂಕ್ಷಿ ಯೋಜನೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ವಿಕ್ರಮ, ಸದ್ಯ ವಿರಾಮಕ್ಕೆ ಜಾರಿದ್ದಾನೆ. 14 ದಿನಗಳ ಬಳಿಕ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಲಿದ್ದು, ನೀರಿಗಾಗಿ ಹುಡುಕಾಟ ನಡೆಸಲಿದೆ. ಇದಕ್ಕಾಗಿ ಜಪಾನ್ ಜೊತೆಗೆ ಬಿಗ್ ಪ್ರಾಜೆಕ್ಟ್ನಲ್ಲಿ ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ ಭಾಗಿ ಆಗ್ತಿದೆ.
ಜಪಾನ್‌ನ ಬಾಹ್ಯಾಕಾಶ ಸಂಸ್ಥೆ JAXA ಜೊತೆಗೆ ISRO ಚಂದ್ರನತ್ತ 2024-25ರಲ್ಲಿ ಮತ್ತೊಂದು ಮಿಷನ್ಗೆ ಸಿದ್ಧತೆ ನಡೆಸ್ತಿದೆ.. ಇದಕ್ಕೆ LUPEX ಅಂತ ಹೆಸರಿಡಲಾಗಿದೆ. ಚಂದ್ರನ ಧ್ರುವ ಪರಿಶೋಧನೆಯೇ ಮುಖ್ಯ ಯೋಜನೆ ಆಗಿದೆ. ಈ ಯಾತ್ರೆ, ಮಿಷನ್ ಚಂದ್ರಯಾನ- 2 ಮತ್ತು ಚಂದ್ರಯಾನ-3 ಗಿಂತ ಅತ್ಯಂತ ಕಷ್ಟಕರವಾಗಿರಲಿದೆ ಅನ್ನೋದು ಇಸ್ರೋ ಹೇಳಿಕೊಂಡಿದೆ.
ಚಂದ್ರನ ಮೇಲೊಂದು ಗೂಡು
ಚಂದ್ರನ ಮೇಲೆ ನೆಲೆಗಳನ್ನ ಸ್ಥಾಪಿಸುವ ಮಹೋನ್ನತ ಪ್ಲಾನ್
ಚಂದ್ರನ ಮೇಲೆ ನಿಲ್ದಾಣ ನಿರ್ಮಿಸಲು ಬಯಸಿದ ಇಸ್ರೋ
ಆದ್ರೆ, ಚಂದ್ರನಲ್ಲಿ ಸ್ಥಳ ಕಂಡು ಹಿಡಿಯೋದೇ ಸವಾಲಾಗಿದೆ
ಬಾಹ್ಯಾಕಾಶ ನಿಲ್ದಾಣದ ರೀತಿ ಚಂದ್ರನ ಮೇಲೆ ನಿಲ್ದಾಣ
ಮನುಷ್ಯರು ಸಹ ಉಳಿಯುವ ವಿಶೇಷ ಸೌಲಭ್ಯಕ್ಕೆ ಪ್ಲಾನ್
ಭಾರತದ ಇಸ್ರೋನ ಕಾರ್ಯಕ್ಕೆ ಜಪಾನ್ JAXA ಸಾಥ್
ಉಡಾವಣಾ ವಾಹನ, ರೋವರ್ ಒದಗಿಸುವ ಜಪಾನ್
ಅದರ ಲ್ಯಾಂಡರ್ ಮಾತ್ರ ತಯಾರಿಸಲಿದೆ ಭಾರತದ ಇಸ್ರೋ
ಭೂಮಿಗೆ ಮರಳಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನಕ್ಕೂ ಪ್ಲಾನ್
ಸೂರ್ಯನ ಬಳಿಕ ಶುಕ್ರನತ್ತ ಭಾರತದ ಚಿತ್ತ
ಮೇಲಿನದ್ದು ಚಂದ್ರನ ಕಥೆಯಾದ್ರೆ, ಮಂಗಳನ ಬಳಿಕ ಇಸ್ರೋ ಸಂಸ್ಥೆ, ಶುಕ್ರನಿಗೆ ಗುರಿ ಇಟ್ಟಿದೆ. ಕಳೆದ ಒಂದು ವರ್ಷದಿಂದ ಈ ಯೋಜನೆ ಸದ್ದಿಲ್ಲದೇ ಚಾಲ್ತಿಯಲ್ಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹಣ ಕೂಡ ಮೀಸಲಿರಿಸಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಈ ಮಿಷನ್ ಆರಂಭ ಆಗಲಿದೆ. ಶುಕ್ರವು ಭೂಮಿಯಂತಿದೆ ಎಂದು ನಂಬಲಾದ ಏಕೈಕ ಗ್ರಹ ಎನಿಸಿದೆ. ಆದ್ರೆ, ಶುಕ್ರನ ಮೇಲಿನ ಶಾಖ ಮತ್ತು ಒತ್ತಡದ ಪರಿಣಾಮ ಬಾಹ್ಯಾಕಾಶ ನೌಕೆಗೆ ಸವಾಲಾಗಲಿದೆ. ಅಕ್ಟೋಬರ್ 30, 1981ರಲ್ಲಿ ರಷ್ಯಾ ಕಳುಹಿಸಿದ್ದ ವೆನೆರಾ 13 ನೌಕೆ ಶುಕ್ರನ ಮೇಲ್ಮೈ ತಲುಪಿದ ಎರಡೇ ಗಂಟೆಯಲ್ಲಿ ಅಪ್ಪಳಿಸಿತ್ತು.
400 ಕಿ.ಮೀ ದೂರದವರೆಗೆ ಮಾನವನ ಗಗನಯಾನ
ಈ ಎಲ್ಲಾ ಯೋಜನೆಗಳಿಗೂ ಮೊದಲು ಮಿಷನ್ ಗಗನಯಾನನತ್ತ ಇಸ್ರೋ ಹೆಚ್ಚು ಗಮನ ನೆಟ್ಟಿದೆ. ಗಗನಯಾನದಲ್ಲಿ ಮೂವರು ಭಾರತೀಯರು ಬಾಹ್ಯಾಕಾಶದಲ್ಲಿ ತೇಲಲಿದ್ದಾರೆ.
ಗಗನಯಾನ.. ಇಸ್ರೋ ಮಹಾಯಾನ!
ಇಸ್ರೋ ಮುಂದೇ ಭವಿಷ್ಯದ ಹಲವು ಯೋಜನೆಗಳಿದ್ದು, ಒಂದೊಂದೇ ಕಾರ್ಯಗತಕ್ಕೆ ಪ್ಲಾನ್ ರೂಪಿಸಿದೆ. ಸದ್ಯಕ್ಕೆ ಮೊದಲು ಗಗನಯಾನ ಬಳಿಕ ಶುಕ್ರನ ದರ್ಶನ, ಆನಂತ್ರ ಚಂದ್ರನತ್ತ ಮತ್ತೊಂದು ಯಾತ್ರೆಗೆ ಇಸ್ರೋ ಸಿದ್ಧತೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ