ಟೆಕ್ನಾಲಜಿಯ ದುರ್ಬಳಕೆ ಅಪಾಯಕಾರಿ, ಅತ್ಯಂತ ಭಯಾನಕವಾಗಿದೆ
ನಾನು ಶಾಲೆ ಹಾಗೂ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಈ ರೀತಿ ಅನುಭವ
ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ
ಬಹುಭಾಷಾ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಟೆಕ್ನಾಲಜಿ ಎಷ್ಟೊಂದು ಅಪಾಯಕಾರಿ. ಇದರ ಬಗ್ಗೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ.
ಈ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. X ಜಾಲತಾಣದಲ್ಲಿ ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ, ಡೀಪ್ ಫೇಕ್ ವಿಡಿಯೋ ಬಗ್ಗೆ ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಬಗ್ಗೆ ಮಾತನಾಡಲು ನನಗೆ ತುಂಬಾ ನೋವಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಈ ರೀತಿಯ ಡೀಪ್ ಫೇಕ್ ತಂತ್ರಜ್ಞಾನ ಭಯಾನಕವಾದದ್ದು. ಇದು ನನಗೆ ಮಾತ್ರವಲ್ಲ ಇದರ ದುಷ್ಪರಿಣಾಮಕ್ಕೆ ಒಳಗಾಗಿರುವ ಪ್ರತಿಯೊಬ್ಬರಿಗೂ ಅನುಭವವಾಗಿದೆ. ಟೆಕ್ನಾಲಜಿಯ ದುರ್ಬಳಕೆ ಅಪಾಯಕಾರಿಯಾಗಿದೆ.
ಮಹಿಳೆಯಾಗಿ, ನಟಿಯಾಗಿ ನನ್ನ ರಕ್ಷಣೆ ಮತ್ತು ಬೆಂಬಲಕ್ಕೆ ನಿಂತಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಈ ರೀತಿಯ ಕೆಟ್ಟ ಅನುಭವ ನಾನು ಶಾಲೆ ಹಾಗೂ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಆಗಿದ್ದರೆ ಏನಾಗುತ್ತಿತ್ತೋ.. ಈ ಕೆಟ್ಟ ಪ್ರವೃತ್ತಿಯನ್ನು ನಿಭಾಯಿಸುವುದು ಹೇಗೆ ಅನ್ನೋದೇ ಗೊತ್ತಾಗುತ್ತಿಲ್ಲ.
ನಾವು ಈ ರೀತಿಯ ಕೆಟ್ಟ ಪ್ರವೃತ್ತಿಗೆ ಬ್ರೇಕ್ ಹಾಕಬೇಕಿದೆ. ನಮ್ಮಲ್ಲಿ ಹೆಚ್ಚಿನವರು ಇಂತಹ ಡೀಪ್ ಫೇಕ್‌ಗೆ ಒಳಗಾಗುವುದಕ್ಕೆ ಮೊದಲು ತುರ್ತಾಗಿ ಇದನ್ನು ಪರಿಹರಿಸಬೇಕಾಗಿದೆ ಎಂದು ರಶ್ಮಿಕಾ ಮಂದಣ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: WATCH: ರಶ್ಮಿಕಾ ಮಂದಣ್ಣ ವೈರಲ್ ವಿಡಿಯೋಗೆ ಸಿಟ್ಟಾದ ಅಮಿತಾಬ್ ಬಚ್ಚನ್; ಅಸಲಿ ವಿಷಯ ಏನು?
ರಶ್ಮಿಕಾ ಮಂದಣ್ಣಗೆ ಡೀಪ್ ಫೇಕ್ ಕಂಟಕ!
ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಆ ವಿಡಿಯೋದಲ್ಲಿರೋ ಯುವತಿ ಇಂಗ್ಲೆಂಡ್ ಮೂಲದ ಭಾರತೀಯ ಯುವತಿ ಝಾರಾ ಪಟೇಲ್ ಅವರಾಗಿದ್ದಾರೆ. ಈಕೆ ಕಳೆದ ಅಕ್ಟೋಬರ್ 9ರಂದು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಕದ್ದಿರುವ ಕಿಡಿಗೇಡಿಗಳು ಝಾರಾ ಪಟೇಲ್ ಮುಖಕ್ಕೆ ರಶ್ಮಿಕಾ ಮಂದಣ್ಣ ಅವರು ಫೋಟೋ ಫೇಕ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ