newsfirstkannada.com

ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ-ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Share :

03-11-2023

    ಶುಭ ಕಾರ್ಯಕ್ರಮಕ್ಕೂ ಮೊದಲು ಗಣೇಶನನ್ನು ಪ್ರಾರ್ಥನೆ ಮಾಡುತ್ತಾರೆ

    ಸಾಣೆಹಳ್ಳಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೆ ಶಿವಧ್ವಜದ ಮೂಲಕ ಪ್ರಾರಂಭ

    ಗಣಪತಿ ಪೂಜೆ ನಮ್ಮ ಸಂಪ್ರದಾಯದಲ್ಲಿ ಮುಂದುವರೆಸಿಕೊಂಡು ಬರಲಾಗುತ್ತಿದೆ

ಚಿತ್ರದುರ್ಗ: ಕಾರ್ಯಕ್ರಮ ಪ್ರಾರಂಭ ಮಾಡಿದರೆ ಗಣಪತಿಯ ಪ್ರಾರ್ಥನೆ ಶುರು ಮಾಡುತ್ತಾರೆ. ಆದ್ರೆ ಗಣೇಶನನ್ನು ಪೂಜಿಸುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಹೊಸದುರ್ಗದ ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳು ಶಿವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಯಾವುದೇ ಊರಲ್ಲಿ ಏನಾದರೂ ಒಳ್ಳೆಯ ಕಾರ್ಯಕ್ರಮ ನಡೆದರೆ ಗಣಪತಿ ಪೂಜೆಯಿಂದ ಆರಂಭ ಮಾಡುತ್ತೀರಿ. ಗಣಪತಿ ನಮ್ಮ ಸಂಸ್ಕೃತಿ ಅಲ್ಲ, ಆದರೂ ಕೂಡ ಬಹಳ ಜನ ಅದೇ ಪರಂಪರೆಯಲ್ಲಿ ಮುಂದುವರೆದಿದ್ದಾರೆ. ಏನಾದರೂ ಪ್ರಾರ್ಥನೆ ಮಾಡಿ ಎಂದು ಹೇಳಿದರೆ ಊರುಗಳಲ್ಲಿ ಗಣಪತಿ ಅಂತಾನೇ ಶುರುವಾಗಿಬಿಡುತ್ತೆ ಎಂದರು.

ಆದರೆ ನಮ್ಮ ಗುರುಗಳು ಎಲ್ಲ ಪರಂಪರೆಯನ್ನು ಬದಲಾಯಿಸಿ ಪ್ರಾರ್ಥನೆ ಎಂದರೆ ವಚನಗಳನ್ನೇ ಹಾಡಬೇಕು ಎನ್ನುವ ಪದ್ದತಿಯನ್ನು ಜಾರಿಗೆ ತಂದರು. ಇಡೀ ದೇಶ, ನಮ್ಮ ರಾಜ್ಯದಲ್ಲಿ ವಚನಗಳನ್ನು ಹಾಡಬಹುದು ಎಂದು ತೋರಿಸಿಕೊಟ್ಟವರು ನಮ್ಮ ಪೂಜ್ಯ ಶಿವಕುಮಾರ ಶಿವಾಚಾರ್ಯ ಸ್ವಾಮಿಜಿ. ಆ ಗುರುಗಳು ಯಾವುದೇ ಕಾರ್ಯಕ್ರಮ ಮಾಡಿದರೆ ಶಿವಧ್ವಜದ ಮೂಲಕ ಆರಂಭ ಮಾಡುತ್ತಿದ್ದರು. ಈಗಲೂ ಸಾಣೆಹಳ್ಳಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೆ ಅದು ಶಿವಧ್ವಜದ ಮೂಲಕ ಪ್ರಾರಂಭ ಆಗುತ್ತದೆ ಎಂದರು.

ಶಿವ ಎಂದರೆ ಕ್ಷೇಮ, ಹಿತ, ಮಂಗಳ ಎಂಬ ಅರ್ಥ ಬರುತ್ತವೆ. ಆ ಶಿವ ಧ್ವಜದ ಕೆಳಗೆ ನಿಂತವರು ಎಲ್ಲರ ಹಿತವನ್ನು ಬಯಸುತ್ತಾರೆ. ನಮಗೆ ಶಕ್ತಿಯನ್ನು ನೀಡಿ ಎಲ್ಲ ಜಾತಿಗಳನ್ನು ದೂರ ಮಾಡುತ್ತದೆ. ಶಿವ ಧ್ವಜ ದ್ರಾವಿಡರ ಸಂಕೇತವಾಗಿದೆ. ಧ್ವಜ ನಮ್ಮ ತನು, ಮನ, ಭಾವ ಎಲ್ಲವನ್ನು ತುಂಬಿಕೊಳ್ಳುತ್ತದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ-ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

https://newsfirstlive.com/wp-content/uploads/2023/11/CTR_SWAMIJI_GANAPATI.jpg

Load More