ಇನ್ಮುಂದೆ ಗುಲಾಬಿ ನೋಟಿಗೆ ಟಾಟಾ ಬೈ ಬೈ
₹2000 ನೋಟ್ ಇದ್ದವರು ಏನ್ ಮಾಡಬೇಕು
ಗ್ರಾಹಕರಿಗೆ ಬಿಗ್ ಆಫರ್ ಕೊಟ್ಟ SBI ಬ್ಯಾಂಕ್
2000 ರೂಪಾಯಿ ಮುಖಬೆಲೆಯ ಪಿಂಕ್ ನೋಟ್ ಅನ್ನು RBI ಹಿಂಪಡೆದಿದೆ. ಗುಲಾಬಿ ನೋಟಿಗೆ ಟಾಟಾ ಬೈ ಬೈ ಹೇಳಲು ಡೇಟ್ ಕೂಡ ಫಿಕ್ಸ್ ಮಾಡಿದೆ. ಹಾಗಿದ್ರೆ 2000 ರೂಪಾಯಿ ನೋಟು ಇಟ್ಟುಕೊಂಡಿರೋರು ಏನ್ ಮಾಡಬೇಕು. ಎಕ್ಸ್‌ಚೇಂಜ್ ಮಾಡಿಕೊಳ್ಳೋದು ಹೇಗೆ. ಜನಸಾಮಾನ್ಯರ ಈ ಪ್ರಶ್ನೆಗೆ ಬ್ಯಾಂಕ್‌ಗಳೇ ಸುಲಭ ಪರಿಹಾರ ಕಂಡುಕೊಂಡಿವೆ.
ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟಿನ ಚಲಾವಣೆಯನ್ನ ಹಿಂದಕ್ಕೆ ಪಡೆದಿದೆ. ಇದರ ಜೊತೆಗೆ ಮೇ 23ರಿಂದ ಸೆಪ್ಟೆಂಬರ್ 30ರವರೆಗೂ ಪಿಂಕ್ ನೋಟುಗಳನ್ನ ಎಕ್ಸ್‌ಚೇಂಜ್ ಮಾಡಲು ಕಾಲಾವಕಾಶ ನೀಡಿದೆ. RBI ಈ ತೀರ್ಮಾನದಂತೆ ಬ್ಯಾಂಕ್‌ಗಳು ಕೂಡ ಮಂಗಳವಾರದಿಂದ 2000 ನೋಟು ಸ್ವೀಕರಿಸಿ ಬೇರೆ ನೋಟುಗಳನ್ನ ಗ್ರಾಹಕರಿಗೆ ನೀಡಲು ಸಜ್ಜಾಗಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2000 ರೂಪಾಯಿ ನೋಟುಗಳ ಬದಲಾವಣೆಗೆ ಸುಲಭ ಮಾರ್ಗಸೂಚಿಯನ್ನು ಪ್ರಕಟಿಸಿದೆ. SBI ಬ್ಯಾಂಕ್‌ನ ಶಾಖೆಗಳಲ್ಲಿ ಗ್ರಾಹಕರು 2000 ರೂಪಾಯಿ ನೋಟುಗಳನ್ನ ಆರಾಮಾಗಿ ಎಕ್ಸ್‌ಚೇಂಜ್ ಮಾಡಿಸಿಕೊಳ್ಳಬಹುದು. 20 ಸಾವಿರ ರೂಪಾಯಿವರೆಗೂ ನೋಟುಗಳ ಬದಲಾವಣೆಗೆ ಯಾವುದೇ ಐಡಿ ಪ್ರೂಫ್ ಬೇಕಿಲ್ಲ. ಯಾವುದೇ ಮನವಿ ಪತ್ರ ಭರ್ತಿ ಮಾಡುವಂತಿಲ್ಲ ಎಂದು ತಿಳಿಸಿದೆ.
ಮೇ 23ರಿಂದ ಗ್ರಾಹಕರು SBI ಬ್ಯಾಂಕ್‌ಗಳಿಗೆ ಭೇಟಿ ಕೊಟ್ಟು 2000 ನೋಟುಗಳನ್ನ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್ ಚಲನ್ ಭರ್ತಿ ಮಾಡುವಂತಿಲ್ಲ. ಗ್ರಾಹಕರು ಯಾವುದೇ ಐಡಿ ಪ್ರೂಫ್ ಕೂಡ ತೋರಿಸುವಂತಿಲ್ಲ. 2016ರಲ್ಲಿ ನೋಟ್ ಬ್ಯಾನ್ ಮಾಡಿದಾಗ ಗ್ರಾಹಕರು ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ನಿಂತು, ನಿಂತು ಸುಸ್ತಾಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿರೋ ಬ್ಯಾಂಕ್‌ಗಳು ಈ ಬಾರಿ ಸುಲಭ ಮಾರ್ಗಗಳನ್ನ ಕಂಡು ಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ