Advertisment

ಅಲ್ಲಿ ಸಿಕ್ಕಿದ್ದ ಲಕ್ಷ ಲಕ್ಷ ದುಡ್ಡು ಯಾರದ್ದು.. ಇಂದು ದರ್ಶನ್ ವಿಚಾರಣೆಗೆ ರೆಡಿಯಾದ IT ಅಧಿಕಾರಿಗಳು

author-image
Bheemappa
Updated On
ಜೈಲಲ್ಲಿ ಅನ್ನ ತಿನ್ನುವುದು ಬಿಟ್ಟ ದರ್ಶನ್.. ಈ ಮಾತ್ರೆಗಳನ್ನ ಸೇವನೆ ಮಾಡುತ್ತಿರುವುದು ಏಕೆ?
Advertisment
  • ಶೆಡ್​ನಲ್ಲಿ ಎಲ್ಲ ಮುಗಿದ ಮೇಲೆ ದಾಸ ದುಡ್ಡನಲ್ಲೇ ಡೀಲ್​ ಮುಗಿಸಿದ್ದ
  • ಅಷ್ಟು ಹಣವನ್ನ ನೀವು ಬೇರೆಯವರಿಂದ ಪಡೆಯಲು ಕಾರಣವೇನು?
  • ಘಟನೆ ಮುಚ್ಚಿ ಹಾಕಲು ನಟ ದರ್ಶನ್​ ಹಣದ ಹೊಳೆ ಹರಿಸಿದ್ದಾರಾ.?

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್​ಗೆ ಕುರಿತು ಪೊಲೀಸ್ ತನಿಖೆ​ ಆಯಿತು. ಕೋರ್ಟ್​ ಆಯಿತು. ಇದೀಗ ಐಟಿ ಸಂಕಷ್ಟ ಎದುರಾಗಿದೆ. ನಟ ದರ್ಶನ್​ರ ಹಣದ ಮೂಲ ಪತ್ತೆಗೆ ಐಟಿ ಮುಂದಾಗಿದೆ. ಇಂದು ಬಳ್ಳಾರಿ ಜೈಲಿಗೆ ತೆರಳಿ 2 ದಿನ ವಿಚಾರಣೆ ನಡೆಸಲಿದ್ದಾರೆ.

Advertisment

publive-image

ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿರುವ ಐಟಿ ಅಧಿಕಾರಿಗಳು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ ನಟ ದರ್ಶನ್​ಗೆ ಒಂದರ ಮೇಲೊಂದು ಶಾಕ್​ ಎದುರಾಗ್ತಾನೆ ಇದೆ. ಬೇಲ್​ ಚಿಂತೆಯಲ್ಲೇ ಬಳ್ಳಾರಿ ಜೈಲಿನಲ್ಲಿ ಕಂಗಾಲಾಗಿರುವ ದರ್ಶನ್​ಗೆ ಶಾಕ್​ ಕೊಡಲು ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್​​ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?

ರೇಣುಕಾಸ್ವಾಮಿ ಕೇಸ್​ ಬಳಿಕ ಇದನ್ನು ಮುಚ್ಚಿ ಹಾಕಲು ನಟ ದರ್ಶನ್​ ಹಣದ ಹೊಳೆಯನ್ನೇ ಹರಿಸಿದ್ದ. ದುಡ್ಡಿನ ಆಸೆ ತೋರಿಸಿ, ಕೆಲವರನ್ನು ಸರೆಂಡರ್​ ಮಾಡಿಸಿದ್ರೆ, ಮತ್ತೆ ಕೆಲವರನ್ನು, ಸಾಕ್ಷ್ಯ ನಾಶಕ್ಕೆ ಬಳಿಸಿಕೊಂಡಿದ್ದ. ಇದೆಲ್ಲದಕ್ಕೂ ದಾಸ ದುಡ್ಡನಲ್ಲೇ ಡೀಲ್​ ಮುಗಿಸಿದ್ದ. ಹತ್ತಲ್ಲ, ಇಪ್ಪತಲ್ಲ, ಬರೋಬ್ಬರಿ 84 ಲಕ್ಷ ಹಣವನ್ನು ಪೊಲೀಸರು ಸೀಜ್​ ಮಾಡಿದ್ರು. ಈ ಹಣದ ಮೂಲ ಪತ್ತೆ ಹಚ್ಚಲು ಐಟಿ ಅಧಿಕಾರಿಗಳು ಎಂಟ್ರಿಕೊಡಲಿದ್ದಾರೆ.

Advertisment

ಇಂದು, ನಾಳೆ ದರ್ಶನ್​ ವಿಚಾರಣೆ ಸಾಧ್ಯತೆ

ಈಗಾಗಲೇ ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆಗಾಗಿ 57 ಸಿಸಿಹೆಚ್ ಕೋರ್ಟ್​ನಿಂದ ಅನುಮತಿ ಪಡೆದಿದ್ದಾರೆ. ಬಳ್ಳಾರಿ ಜೈಲಲ್ಲೇ ದರ್ಶನ್​ರನ್ನ 2 ದಿನ ವಿಚಾರಣೆ ಮಾಡಲಿದ್ದಾರೆ. ಇದೇ ವೇಳೆ ಹಣ ಕೊಟ್ಟಿರೋ ಮೋಹನ್ ರಾಜ್, ಹಾಗೂ ಡೆವಿಲ್ ನಿರ್ದೇಶಕ ಸೇರಿದಂತೆ ಕೆಲ ನಿರ್ಮಾಪಕರ ವಿಚಾರಣೆ ನಡೆಸುವ ಸಾದ್ಯತೆಗಳಿದೆ.

ಹೇಗಿರಲಿದೆ ಐಟಿ ವಿಚಾರಣೆ?

  • ಪೊಲೀಸರ ತನಿಖೆ ವೇಳೆ ಸಿಕ್ಕ ಹಣದ ಲೆಕ್ಕ ಕೇಳಲಿರುವ ಅಧಿಕಾರಿಗಳು
  • ಯಾವ ಮೂಲದಿಂದ ಹಣ ಪಡೆದಿದ್ದೀರಾ ಅದು ಯಾರಿಗೆ ಸೇರಿದ ಹಣ?
  • ಅಷ್ಟು ಹಣವನ್ನ ನೀವೂ ಬೇರೆಯವರಿಂದ ಪಡೆಯಲು ಕಾರಣವೇನು?
  • ದಾಖಲಾತಿ ನೀಡದೇ ಹಣದ ಮೂಲ ತಿಳಿಸದಿದ್ದರೆ ಮತ್ತಷ್ಟು ಸಂಕಷ್ಟ

ಇದನ್ನೂ ಓದಿ: ಪದವೀಧರರಿಗೆ ವಿಮಾ ವಲಯದಲ್ಲಿ ಉದ್ಯೋಗಾವಕಾಶ.. ಅರ್ಜಿ ಆರಂಭ, ಎಷ್ಟು ಹುದ್ದೆ ಖಾಲಿ ಇವೆ?

Advertisment

publive-image

ಪೊಲೀಸರ ತನಿಖೆ ವೇಳೆ ಆರೋಪಿಗಳಿಗೆ ದರ್ಶನ್ ನೀಡಿದ್ದ 30 ಲಕ್ಷ ಹಣ ಹಾಗೂ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ಲೆಕ್ಕ ಕೇಳಲಿದ್ದಾರೆ. ಬಳಿಕ ಯಾವ ಮೂಲದಿಂದ ಹಣ ಪಡೆದಿದ್ದೀರಾ ಅದು ಯಾರಿಗೆ ಸೇರಿದ ಹಣ? ಅಷ್ಟು ಹಣವನ್ನ ನೀವೂ ಬೇರೆಯವರಿಂದ ಪಡೆಯಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ದಾಖಲಾತಿ ನೀಡದೆ ಹಣದ ಮೂಲ ತಿಳಿಸದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಕೇಸ್​ನಲ್ಲಿ ಬಂಧಿಯಾಗಿರುವ ನಟ ದರ್ಶನ್ ಬೇಲ್ ಸಿಗದೆ ಕಂಗಲಾಗಿದ್ದಾರೆ. ಮತ್ತೊದೆಡೆ ದಾಸನಿಗೆ ಜೈಲಲ್ಲೇ ಶಾಕ್ ಕೊಡಲು ಐಟಿ ಆಫೀಸರ್ಸ್ ರೆಡಿ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment