ತವರಿನಲ್ಲಿ ಆಡಲು ಕಾಯುತ್ತಿದ್ದಾರೆ ವಿರಾಟ್ ಕೊಹ್ಲಿ
ವಾಂಖೆಡೆ ಅಂಗಳದಲ್ಲಿ ಆಡೋದೆ ಕೊಹ್ಲಿಯ ಆಸೆಯಂತೆ
ಧೋನಿಯ ಏಕದಿನ ವಿಶ್ವಕಪ್ ಕೊರಗಿಗೆ ಬ್ರೇಕ್ ಹಾಕಿತ್ತು ಆ ಗೀತೆ
ಕ್ರಿಕೆಟ್ ಲೋಕದಲ್ಲೀಗ ವಿಶ್ವಕಪ್ ಟೂರ್ನಿಯದ್ದೇ ಸದ್ದು. ಟೂರ್ನಿ ಆರಂಭಕ್ಕೆ ಇನ್ನೂ 98 ದಿನ ಬಾಕಿಯಿದೆ. ಆದ್ರೆ ಟೂರ್ನಿಯ ಕ್ರೇಜ್ ಈಗಲೇ ಶುರುವಾಗಿದೆ. ಪ್ರತಿಷ್ಟಿತ ಟೂರ್ನಿ ನಮ್ಮ ದೇಶದಲ್ಲಿ ನಡೆಯುತ್ತೆ ಅನ್ನೋ ಹೆಮ್ಮೆಯ ಭಾವ ಅಭಿಮಾನಿಗಳಲ್ಲಿ ಮೂಡಿದೆ. 12 ವರ್ಷಗಳ ಹಿಂದೆ ಆದಂತೆ, ಈ ವರ್ಷವೂ ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡುತ್ತೆ ಅನ್ನೋ ವಿಶ್ವಾಸ ಫ್ಯಾನ್ಸ್ದ್ದಾಗಿದೆ. ಕ್ರಿಕೆಟರ್ಸ್ ಕೂಡ ಮಹತ್ವದ ಟೂರ್ನಿಯಲ್ಲಿ ಆಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ತವರಿನಂಗಳದಲ್ಲಿ ತೊಡೆ ತಟ್ಟಲು ಕಪ್ತಾನ್ ರೆಡಿ.!
ಐಸಿಸಿ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕಪ್ ಗೆಲ್ಲೋ ಪಣತೊಟ್ಟಿದ್ದಾರೆ. ಶೆಡ್ಯೂಲ್ ಅನೌನ್ಸ್ ಆದ ಬೆನ್ನಲ್ಲೆ ಮಾತನಾಡಿರೋ ಕ್ಯಾಪ್ಟನ್, ತವರು ಮುಂಬೈನ ವಾಂಖೆಡೆಯಲ್ಲಿ ಅಬ್ಬರಿಸೋ ಕನಸನ್ನ ಬಿಚ್ಚಿಟ್ಟಿದ್ದಾರೆ. ಲೀಗ್ ಹಂತದ ಒಂದು ಪಂದ್ಯ ಈಗಾಗಲೇ ಮುಂಬೈನಲ್ಲಿ ಆಯೋಜನೆಯಾಗಿದೆ. ಇದ್ರ ಜೊತೆಗೆ ಟೀಮ್ ಇಂಡಿಯಾ ಸೆಮೀಸ್ ಪ್ರವೇಶಿಸಿದ್ರೆ, ಆ ಪಂದ್ಯವೂ ವಾಂಖೆಡೆಯಲ್ಲೇ ನಡೆಯಲಿದೆ. ಹೀಗಾಗಿ ಟ್ರೋಫಿ ಗೆಲುವಿಗೆ ಪಣತೊಟ್ಟಿರೋ ರೋಹಿತ್, ತವರಲ್ಲಿ ಅಬ್ಬರಿಸೋ ಸೂಚನೆ ನೀಡಿದ್ದಾರೆ.
ಬೆಂಗಳೂರಲ್ಲ.. ಮುಂಬೈನಲ್ಲಿ ಆಡೋಕೆ ಕಾಯ್ತಿದ್ದಾರಂತೆ ಕೊಹ್ಲಿ.!
ದೆಹಲಿಯ ವಿರಾಟ್ ಕೊಹ್ಲಿ ಪಾಲಿಗೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನವೇ 2ನೇ ಹೋಮ್ಗ್ರೌಂಡ್. ಕೊಹ್ಲಿಯ ಕ್ರಿಕೆಟ್ ಜರ್ನಿಗೆ ತಿರುಗು ನೀಡಿದ್ದೆ ಚಿನ್ನಸ್ವಾಮಿ ಅಂಗಳ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಸೇರಿದ ಮೇಲಂತೂ ಕೊಹ್ಲಿಗೆ ಬೆಂಗಳೂರು ಎಲ್ಲವನ್ನೂ ಕೊಟ್ಟಿದೆ. ಸ್ವಂತ ತವರು ದೆಹಲಿಗಿಂತ ಬೆಂಗಳೂರಿನಲ್ಲೆ ಕೊಹ್ಲಿಗೆ ಹೆಚ್ಚು ಪ್ರೀತಿ ಸಿಕ್ಕಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ ಮೈದಾನಕ್ಕಿಳಿದ್ರೆ, ಸ್ಟೇಡಿಯಂನಲ್ಲಿ ಕೊಹ್ಲಿ.. ಕೊಹ್ಲಿ ಆರ್ತನಾದ ಮೊಳಗುತ್ತೆ. ನಂಬರ್ 18ರ ಜೆರ್ಸಿಗಳು ಕಣ್ಣಿಗೆ ಬಡೀತಾವೆ. ಆದ್ರೆ, ದೆಹಲಿ, ಬೆಂಗಳೂರು ಎರಡನ್ನೂ ಬಿಟ್ಟು ಮುಂಬೈನಲ್ಲಿ ಆಡೋಕೆ ಕೊಹ್ಲಿ ಕಾಯ್ತಿದ್ದಾರಂತೆ. ಈ ವಿಶ್ವಕಪ್ನಲ್ಲಿ ಮುಂಬೈನ ವಾಂಖೆಡೆ ಅಂಗಳದಲ್ಲಿ ಆಡೋದೆ ಕೊಹ್ಲಿಯ ಬಹುದೊಡ್ಡ ಆಸೆಯಂತೆ.
ಮುಂಬೈನಲ್ಲಾಡೋಕೆ ಎಲ್ಲರಿಗೂ ಇಷ್ಟ.!
ಹೌದು. ಮುಂಬೈನಲ್ಲಾಡೋಕೆ ಎಲ್ಲರಿಗೂ ಇಷ್ಟ. ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಮುಂಬೈನ ವಾಂಖೆಡೆ ಮೈದಾನಕ್ಕೆ ವಿಶಿಷ್ಟ ಸ್ಥಾನವಿದೆ. 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ್ದ ಸುಮಧುರ ನೆನಪಿದೆ. ಈ ಅವಿಸ್ಮರಣೀಯ ಗೆಲುವೇ ಈಗ ತಂಡದಲ್ಲಿರೋ ಎಷ್ಟೋ ಆಟಗಾರರ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ಹೀಗಾಗಿ ಐತಿಹಾಸಿಕ ಸಾಧನೆ ಮಾಡಿದ ಮೈದಾನದಲ್ಲಿ ಪಂದ್ಯವನ್ನಾಡಬೇಕು ಅನ್ನೋದು ಎಲ್ಲರ ಹಂಬಲವಾಗಿದೆ.
ಇಡೀ ದೇಶವನ್ನ ಬಡಿದೆಬ್ಬಿಸಿತ್ತು ಆ ಒಂದು ಗೀತೆ.!
2011ರ ವಿಶ್ವಕಪ್ ಎಂದಾಕ್ಷಣ ಎಲ್ಲರಿಗೂ ಧೋನಿಯ ವಿನ್ನಿಂಗ್ ಸಿಕ್ಸರ್, ರವಿ ಶಾಸ್ತ್ರಿಯ ಕಾಮೆಂಟರಿ ನೆನಪಾಗುತ್ತೆ. ಆದ್ರೆ, ಅದಕ್ಕೂ 20 ನಿಮಿಷಗಳ ಮುನ್ನ ಒಂದು ಇನ್ಸಿಡೆಂಟ್ ನಡೆದಿತ್ತು. ಅದು ಇಡೀ ದೇಶವನ್ನೇ ಬಡಿದೆಬ್ಬಿಸಿತ್ತು.
ಅಬ್ಬಾ…! ಈಗಲೂ ಇದು GOOSEBUMPS MOMENT..! ಸುಮಾರು 30 ಸಾವಿರಕ್ಕೂ ಹೆಚ್ಚು ಜನ ತುಂಬಿದ್ದ ಇಡೀ ಮೈದಾನ ವಂದೇ ಮಾತರಂ ಗೀತೆಯನ್ನ ಒಕ್ಕೊರಲಿನಿಂದ ಹಾಡಿದ್ರೆ, ಎಂತವರ ಎದೆಯಲ್ಲೂ ದೇಶ ಪ್ರೇಮದ ಕಿಚ್ಚು ಹೊತ್ತಿ ಕೊಳ್ಳಲೇಬೇಕು. ಅಂತಾದ್ರಲ್ಲಿ ದೇಶಕ್ಕಾಗಿ ಟೊಂಕಕಟ್ಟಿ ಆಡುತ್ತಿದ್ದ ಆಟಗಾರರಿಗೆ ಏನಾಗಿರಬೇಡ. ಕೊನೆಯದಾಗಿ ಸಿಕ್ಸರ್ ಸಿಡಿಸಿದ್ದಕ್ಕೂ 20 ನಿಮಿಷಗಳ ಮುಂಚಿನ ಘಟನೆ ನನಗೆ ಬೆಸ್ಟ್ ಫೀಲ್ ನೀಡ್ತು. ನಮಗೆ ಹೆಚ್ಚು ರನ್ ಬೇಕಿರಲಿಲ್ಲ. ಜೊತೆಯಾಟ ಚೆನ್ನಾಗಿ ಹೋಗ್ತಾ ಇತ್ತು. ಆಗ ಸ್ಟೇಡಿಯಂ ಪೂರ್ತಿ ವಂದೇ ಮಾತರಂ ಹಾಡಲು ಆರಂಭಿಸಿತು. ಆ ವಾತಾವರಣವನ್ನ ಮರುಸೃಷ್ಟಿಸೋದು ಕಷ್ಟ ಎಂದು ಧೋನಿ ಹೇಳಿದ್ದಾರೆ.
ಬರೋಬ್ಬರಿ 28 ವರ್ಷಗಳ ಏಕದಿನ ವಿಶ್ವಕಪ್ನ ಕೊರಗಿಗೆ ಬ್ರೇಕ್ ಹಾಕಿದ ನಾಯಕನ ಮಾತಲ್ಲೇ ಕೇಳಿದ್ರಲ್ವಾ. ಅಂದು ಮೈದಾನದಲ್ಲಿ ಫ್ಯಾನ್ಸ್ ಹಾಡಿದ ಆ ಹಾಡು ಇಂದಿಗೂ ಧೋನಿ ಪಾಲಿಗೆ ಆ ವಿಶ್ವಕಪ್ನ ಬೆಸ್ಟ್ MOMENT. ಇಂಟರ್ನ್ಯಾಷನಲ್ ಕ್ರಿಕೆಟ್ನಿಂದ ದೂರ ಸರಿದ ಧೋನಿಗೆ ಆ ನೆನಪು ಹಚ್ಚ ಹಸಿರಾಗಿ ಕಾಡ್ತಿದೆ. ಇನ್ನು, ಅದನ್ನೆ ಸ್ಪೂರ್ತಿಯನ್ನಾಗಿಸಿಕೊಂಡು ಈಗ ಟೀಮ್ ಇಂಡಿಯಾದಲ್ಲಿರೋ ಆಟಗಾರಿಗೆ ಆ ಅವಿಸ್ಮರಣೀಯ ಕ್ಷಣ ಸ್ಫೂರ್ತಿಯ ಚಿಲುಮೆಯಾಗೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ