newsfirstkannada.com

ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 10 ಕೋಟಿ; ಸುದೀಪ್​​, ಕುಮಾರ್​ ಮಧ್ಯೆ ನಡೆದಿದ್ದೇನು? ಎಂದು ಬಿಚ್ಚಿಟ್ಟ ಜಾಕ್​ ಮಂಜು

Share :

10-07-2023

    ತಾರಕಕ್ಕೇರಿದ ಕುಮಾರ್​​, ಕಿಚ್ಚ ಸುದೀಪ್​ ಮಧ್ಯದ ಗಲಾಟೆ

    ಅಖಾಡಕ್ಕೆ ಸುದೀಪ್​ ಆಪ್ತ ನಿರ್ಮಾಪಕ ಜಾಕ್​ ಮಂಜು ಎಂಟ್ರಿ

    ಈ ಘಟನೆ ಬಗ್ಗೆ ನಿರ್ಮಾಪಕ ಜಾಕ್​ ಮಂಜು ಹೇಳಿದ್ದೇನು ಗೊತ್ತಾ?

ಬೆಂಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ಕೋಟಿ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕ ವರ್ಸಸ್​ ಕಿಚ್ಚ ಅನ್ನೋ ಸಮರಕ್ಕೆ ಮುನ್ನುಡಿ ಬರೆದಿದೆ. ಆದ್ರೆ, ಈ ಹತ್ತು ಕೋಟಿ ಹಣ ಕೊಟ್ಟೇ ಇಲ್ಲವಂತೆ. ಹೀಗೆ ಹೇಳಿದ್ದು ಮತ್ಯಾರು ಅಲ್ಲ, ಬದಲಿಗೆ ಖುದ್ದು ನಟ ಕಿಚ್ಚ ಸುದೀಪ್​ ಅವರ ಸ್ನೇಹಿತ, ನಿರ್ಮಾಪಕ ಜಾಕ್​ ಮಂಜು.

ಯೆಸ್​​, ನಿರ್ಮಾಪಕ ಎನ್. ​ಕುಮಾರ್​ ಸುದೀಪ್ ಅವರಿಗೆ ಒಂದೇ ಒಂದು ರೂಪಾಯಿ ಹಣ ಕೊಟ್ಟಿಲ್ಲ ಎಂದು ಜಾಕ್​ ಮಂಜು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ವಿರುದ್ಧದ ಆರೋಪಗಳು ಆಧಾರ ರಹಿತ. ನಾವೇ ಕುಮಾರ್ ಅವರ ಮೇಲೆ ಅನುಕಂಪದಿಂದ ಐದು ಕೋಟಿ ಕೊಡಲು ಇಚ್ಛೆಯನ್ನು ವ್ಯಕ್ತಪಡಿಸಿದ್ದೆವು ಎಂದು ನಡೆದ ವ್ಯವಹಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕೋರ್ಟ್ ಮೂಲಕವೇ ಎಲ್ಲ ಇತ್ಯರ್ಥ ಎಂದ ಜಾಕ್​ ಮಂಜು

ಕುಮಾರ್ ಜೊತೆ ಸಿನಿಮಾ ಮಾಡಲು ಸುದೀಪ್ ಅವರು ಬಹಳ ಪ್ರಯತ್ನ ಪಟ್ಟಿದ್ದಾರೆ. ಅದ್ಯಾಕೆ ಸುದೀಪ್​​ ಅವರೇ ನನ್ನ ನಷ್ಟಕ್ಕೆ ಕಾರಣ ಎಂದು ಕುಮಾರ್​ ಹೇಳುತ್ತಿದ್ದಾರೋ ಗೊತ್ತಿಲ್ಲ. ಕೋರ್ಟ್ ಮೂಲಕವೇ ಎಲ್ಲವನ್ನೂ ಇತ್ಯರ್ಥ ಮಾಡಿಕೊಳುತ್ತೇವೆ ಎಂದರು ಜಾಕ್​ ಮಂಜು.

ನಿರ್ಮಾಪಕರು ಹಣ ಕೊಟ್ಟಿದ್ದೀವಿ ಎನ್ನುತ್ತಿದ್ದಾರೆ. ಸುದೀಪ್​​ ಮತ್ತು ಆಪ್ತರು ಅವರು ಹಣ ಕೊಟ್ಟಿಲ್ಲ, ನಾವೇ 5 ಕೋಟಿ ಸಹಾಯ ಮಾಡಬೇಕು ಎಂದು ಇದ್ದೆವು ಎಂದಿದ್ದಾರೆ. ಒಟ್ನಲ್ಲಿ ಈ ಗೊಂದಲ ಮಾತಲ್ಲಿ ಬಗೆಹರಿಯೋ ಲಕ್ಷಣ ಕಾಣುತ್ತಿಲ್ಲ. ನಟ ಸುದೀಪ್​ ಕಾನೂನು ಸಮರಕ್ಕೆ ಇಳಿದಾಗಿದೆ. ಇಬ್ಬರಲ್ಲಿ ಯಾರು ಹೇಳುತ್ತಿರೋದು ಸತ್ಯ ಎಂಬುದು ಇನ್ನೂ ಬಯಲಾಗಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 10 ಕೋಟಿ; ಸುದೀಪ್​​, ಕುಮಾರ್​ ಮಧ್ಯೆ ನಡೆದಿದ್ದೇನು? ಎಂದು ಬಿಚ್ಚಿಟ್ಟ ಜಾಕ್​ ಮಂಜು

https://newsfirstlive.com/wp-content/uploads/2023/07/Sudeep-1.jpg

Load More