Advertisment

ಅಡಿಲೆಡ್​ ಟೆಸ್ಟ್​ನಲ್ಲೂ ಟೀಂ ಇಂಡಿಯಾದ ಇಬ್ಬರು ಹಿರಿಯ ಆಟಗಾರರಿಗೆ ಕೊಕ್

author-image
Ganesh
Updated On
ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​; R ಅಶ್ವಿನ್​​ ಬೆನ್ನಲ್ಲೇ ನಿವೃತ್ತಿಗೆ ಮುಂದಾದ ಹಿರಿಯ ಆಟಗಾರರು!
Advertisment
  • ಡಿಸೆಂಬರ್ 6 ರಂದು ಅಡಿಲೆಡ್​ನಲ್ಲಿ 2ನೇ ಟೆಸ್ಟ್ ಪಂದ್ಯ
  • ಮೊದಲ ಟೆಸ್ಟ್​ ಗೆದ್ದುಕೊಂಡಿರುವ ಟೀಂ ಇಂಡಿಯಾ
  • ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್​ ಟೆಸ್ಟ್ ಸರಣಿ

ಬಾರ್ಡರ್ ಗವಾಸ್ಕರ್​ ಟೂರ್ನಿ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಎರಡನೇ ಪಂದ್ಯವು ಡಿಸೆಂಬರ್ 6 ರಂದು ನಡೆಯಲಿದ್ದು, ಈ ಟೆಸ್ಟ್​​ನಲ್ಲೂ ಹಿರಿಯ ಆಲ್​ರೌಂಡರ್​​ಗಳಾದ ರವೀಂದ್ರ ಜಡೇಜಾ ಮತ್ತು ಅಶ್ವಿನ್​​ಗೆ ಕೊಕ್ ಪಕ್ಕಾ ಎಂದು ಚೆತೇಶ್ವರ್ ಪೂಜಾರ ಹೇಳಿದ್ದಾರೆ.

Advertisment

ಇದನ್ನೂ ಓದಿ:ಮತ್ತೊಬ್ಬ ಪೂಜಾರ, ರಹಾನೆ ಆಗ್ತಾರಾ ಅಯ್ಯರ್​..! ಟೀಂ ಇಂಡಿಯಾದಲ್ಲಿ ಗಂಭೀರ ಚರ್ಚೆ..!

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ಪೂಜಾರ, ವೀಕ್ಷಕ ವಿವರಣೆ ಮಾಡಲು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅಡಿಲೆಡ್​ನಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್-11 ಬಗ್ಗೆ ಮಾತನಾಡಿರುವ ಪೂಜಾರ, ಅಶ್ವಿನ್ ಜಡೇಜಾಗೆ ಸ್ಥಾನ ಸಿಗೋದು ಕಷ್ಟ ಎಂದಿದ್ದಾರೆ.

ಅದಕ್ಕೆ ಕಾರಣವನ್ನೂ ವಿವರಿಸಿರುವ ಪೂಜಾರ.. ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಬೌಲಿಂಗ್ ದಾಳಿ ಯಶಸ್ಸು ಕಂಡಿದೆ. ಬುಮ್ರಾ ತುಂಬಾ ಚೆನ್ನಾಗಿ ಸ್ಪೆಲ್ ಮಾಡ್ತಿದ್ದಾರೆ. ಸಿರಾಜ್ ಕೂಡ ಅದ್ಭುತ. ಹರ್ಷಿತ್ ಕೂಡ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದಾರೆ. ಹರ್ಷಿತ್ ತಮ್ಮ ಚೊಚ್ಚಲ ಪಂದ್ಯದಲ್ಲಿ ತೋರಿಸಿದ ಪ್ರದರ್ಶನವನ್ನು ನೀವು ಒಪ್ಪಿಕೊಳ್ಳಲೇಬೇಕು. ವಾಷಿಂಗ್ಟನ್ ಸುಂದರ್​ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೌಶಲ್ಯವನ್ನೂ ಹೊಂದಿದ್ದಾರೆ.

Advertisment

ಇದನ್ನೂ ಓದಿ:ವೆಂಕಟೇಶ್ ಅಯ್ಯರ್​​ಗೆ KKR ಬಿಗ್​ ಶಾಕ್.. ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್​​​ಗೆ ಕ್ಯಾಪ್ಟನ್ಸಿ ಪಟ್ಟ..!

ನಿತೀಶ್ ಕುಮಾರ್ ಸ್ವಲ್ಪ ಬೌಲ್ ಮಾಡಿದ್ದಾರೆ. ಆದ್ದರಿಂದ ವಾಷಿಂಗ್ಟನ್ ಸುಂದರ್ ಜೊತೆಗೆ ಆ ನಾಲ್ಕು ವೇಗದ ಬೌಲರ್‌ಗಳು ಸರಿಯಾದ ಆಯ್ಕೆಗಳು ಎಂದು ಭಾವಿಸುತ್ತೇನೆ. ವಾಷಿಂಗ್ಟನ್ ನಮ್ಮ ಮೊದಲ ಆಯ್ಕೆ ಆಗಿರಬೇಕು. ಏಕೆಂದರೆ ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು, ಎರಡನೇ ಟೆಸ್ಟ್ ಪಂದ್ಯದಲ್ಲೂ ಅವರ ಅಗತ್ಯತೆ ಇದೆ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment