newsfirstkannada.com

ಜಡ್ಡು ಜಾದೂ​ಗೆ ಸೌತ್​ ಆಫ್ರಿಕಾ ಧೂಳಿಪಟ.. ಸ್ಪಿನ್​ ಮಾಂತ್ರಿಕನ ದಾಳಿಗೆ ಲೆಫ್ಟ್​ ರೈಟ್​ ಹೊರಟ ಹರಿಣಗಳು

Share :

06-11-2023

  ಜಡೇಜಾ ಮೋಡಿಗೆ ಬಲಿಯಾದ ಸೌತ್​ ಆಫ್ರಿಕನ್ಸ್​

  ಈಡನ್​ ಗಾರ್ಡನ್​ನಲ್ಲಿ ಜಡೇಜಾ ಮ್ಯಾಜಿಕ್ ಮೋಡಿ

  ದಕ್ಷಿಣ ಆಫ್ರಿಕಾದ ಬ್ಯಾಟ್ಸ್​​ಮನ್​ಗಳಿಗೆ ಕಾಡಿದ ಜಡೇಜಾ

ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಆರ್ಭಟಿಸಿದ ವಿರಾಟ್ ಸೌತ್​ ಆಫ್ರಿಕನ್ನರ ಬೆವರಿಳಿಸಿದ್ರು. ಅಲ್ಲಿಗೆ ಎಲ್ಲಾ ಮುಗಿಲಿಲ್ಲಾ. ಬೌಲಿಂಗ್​ನಲ್ಲಿ ಮ್ಯಾಜಿಕ್​ ಮಾಡಿದ ರವೀಂದ್ರ ಜಡೇಜಾ ಸೌತ್​ ಆಫ್ರಿಕನ್ನರು ಊಹೆಯನ್ನೂ ಮಾಡಿರಲಿಲ್ಲ. ಅಂತಾ ಸೋಲಿನ ರುಚಿ ತೋರಿಸಿದ್ರು. ನೆಕ್ಸ್ಟ್​ ಲೆವೆಲ್​ ದಾಳಿ ಸಂಘಟಿಸಿದ ಜಡೇಜಾ, ಹರಿಣಗಳ ಹುಟ್ಟಡಗಿಸಿಬಿಟ್ರು.

327 ರನ್​ಗಳ ಟಾರ್ಗೆಟ್​ ಬಲಿಷ್ಟ ಸೌತ್​ ಆಫ್ರಿಕಾಗೆ ಸವಾಲಿನದ್ದಾಗಿರಲಿಲ್ಲ. ತಂಡದ ಬ್ಯಾಟ್ಸ್​ಮನ್​ಗಳೆಲ್ಲಾ ಟೂರ್ನಿಯಲ್ಲಿ ರೆಡ್​ ಹಾಟ್​ ಫಾರ್ಮ್​ನಲ್ಲಿ ಮಿಂಚಿದವರೇ ಆಗಿದ್ರು. ಹಾಗಿದ್ರೂ, ನಿನ್ನೆ ಆಫ್ರಿಕನ್ನ ಲೆಕ್ಕಾಚಾರ ತಲೆ ಕೆಳಗಾಗಿತು. ಮಾಂತ್ರಿಕ ರವೀಂದ್ರ ಜಡೇಜಾ ಮೋಡಿ ಸಿಲುಕಿದ ಹರಿಣಗಳ ಪಡೆ ವಿಲ ವಿಲ ಒದ್ದಾಡಿತು. ಸರ್​​ ಜಡೇಜಾ ಆಟಕ್ಕೆ ಸೈಲೆಂಟಾಗಿ ಐವರು ಆಟಗಾರರು ಪೆವಿಲಿಯನ್​ ಸೇರಿದ್ರು.

ವಿಕೆಟ್​ ನಂ.1: ಟೆಂಬಾ ಬವುಮಾ

2ನೇ ಓವರ್​​ನಲ್ಲೆ ಫಸ್ಟ್​ ವಿಕೆಟ್​ ಕಳೆದುಕೊಂಡಿದ್ದ ಸೌತ್​ ಆಫ್ರಿಕಾಗೆ ಚೇತರಿಸಿಕೊಳ್ಳೋಕೆ ಜಡೇಜಾ ಅವಕಾಶವನ್ನೇ ನೀಡಲಿಲ್ಲ. 8.3ನೇ ಓವರ್​ನಲ್ಲಿ ಕ್ಯಾಪ್ಟನ್​ ಆಫ್​ ಶಿಪ್​ ಟೆಂಬಾ ಬವುಮಾಗೆ ಡಗೌಟ್​ ದಾರಿ ತೋರಿಸಿದ್ರು.

ವಿಕೆಟ್​ ನಂ.2: ಹೆನ್ರಿಚ್​ ಕ್ಲಾಸೆನ್​

12.5ನೇ ಓವರ್​ ಅದು. ಹೆನ್ರಿಚ್​ ಕ್ಲಾಸೆನ್​​ ಸ್ವೀಪ್​ ಮಾಡೋಕೆ ಹೋಗಿ ಬಲೆಗೆ ಬಿದ್ರು. ಆದ್ರೂ ಅಂಪೈರ್​ ಔಟ್​ ಕೊಡಲಿಲ್ಲ. ನಮ್ಮ ಕ್ಯಾಪ್ಟನ್​ ರೋಹಿತ್​ ಶರ್ಮಾ ಬಿಡಬೇಕಲ್ಲ. ರಿವ್ಯೂ ತಗೊಂಡೆ ಬಿಟ್ರು. ಸಕ್ಸಸ್​ ಕೂಡ ಆದ್ರು.

ವಿಕೆಟ್​ ನಂ.3: ಡೇವಿಡ್​ ಮಿಲ್ಲರ್​

ಅದ್ಭುತವಾದ ಫಾರ್ಮ್​ನಲ್ಲಿ ಟೂರ್ನಿಯಲ್ಲಿ ಬ್ಯಾಟ್​ ಬೀಸ್ತಿರೋ ಕಿಲ್ಲರ್​ ಮಿಲ್ಲರ್​ ಆಟ ಸರ್​ ಜಡೇಜಾ ಮುಂದೆ ನಡೆಯಲೇ ಇಲ್ಲ. 16.3ನೇ ಓವರ್​ನಲ್ಲಿ ಬಾಲ್​ ಜಡ್ಜ್​ ಮಾಡೋಕೆ ಆಗದೇ ಕಕ್ಕಾಬಿಕ್ಕಿಯಾದ ಮಿಲ್ಲರ್​, ಕ್ಲೀನ್​ ಬೋಲ್ಡ್​ ಆದ್ರು.

ವಿಕೆಟ್​ ನಂ.4: ಕೇಶವ್​ ಮಹಾರಾಜ್​

ಬೌಲಿಂಗ್​ ವೇಳೆ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ಗಳನ್ನ ಕಾಡಿದ್ದ ಕೇಶವ್​ ಮಹಾರಾಜ್​ಗೆ ಜಡೇಜಾ ಸರಿಯಾಗೇ ಟಕ್ಕರ್​ ಕೊಟ್ರು. ಕೇಶವ್​ ಮಹಾರಾಜ್​ಗೆ ಪೆವಿಲಿಯನ್​ ದಾರಿ ತೋರಿಸೋಕೆ ತುಂಬಾ ಟೈಮ್​ ತೆಗೆದುಕೊಳ್ಳಲೇ ಇಲ್ಲ. 11ನೇ ಎಸೆತಕ್ಕೆ ಕೇಶವ್​ ಮಹಾರಾಜ ಆಟ ಅಂತ್ಯವಾತ್ತು.

ವಿಕೆಟ್​ ನಂ.5: ಕಗೀಸೋ ರಬಾಡ

ಜಡೇಜಾ ಕರಿಯರ್​ನ ಅವಿಸ್ಮರಣೀಯ ವಿಕೆಟ್​ ಇದು. 26.2ನೇ ಓವರ್​ನಲ್ಲಿ ಜಡ್ಡು ಹಾಕಿದ ಎಸೆತವನ್ನ ಜಡೇಜಾಗೆ ವಾಪಾಸ್​ ಕ್ಯಾಚ್​ ನೀಡಿ ರಬಾಡ ಪೆವಿಲಿಯನ್​ ಸೇರಿದ್ರು.

ಇಷ್ಟೇ ಅಲ್ಲ, ರಬಾಡ ವಿಕೆಟ್​ನೊಂದಿಗೆ ವಿಶ್ವಕಪ್​ನಲ್ಲಿ ಚೊಚ್ಚಲ ಫೈವ್​ ವಿಕೆಟ್​ ಹೌಲ್​ ಗಳಿಸಿದ ಸಾಧನೆಯನ್ನೂ ಜಡೇಜಾ ಮಾಡಿದ್ರು. ಈ ಮೂಲಕ ತನ್ನ ಕರಿಯರ್​​ನಲ್ಲಿ ಮಹತ್ವದ ಸಾಧನೆ ಮಾಡಿದ್ದಲ್ಲದೇ, ಟೀಮ್​ ಇಂಡಿಯಾದ ಗೆಲುವಿಗೂ ಕಾರಣರಾದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಜಡ್ಡು ಜಾದೂ​ಗೆ ಸೌತ್​ ಆಫ್ರಿಕಾ ಧೂಳಿಪಟ.. ಸ್ಪಿನ್​ ಮಾಂತ್ರಿಕನ ದಾಳಿಗೆ ಲೆಫ್ಟ್​ ರೈಟ್​ ಹೊರಟ ಹರಿಣಗಳು

https://newsfirstlive.com/wp-content/uploads/2023/11/Jadeja-1.jpg

Load More