newsfirstkannada.com

ವಿಂಡೀಸ್​ ಪ್ರವಾಸಕ್ಕೂ ಮುನ್ನ ಕುಲದೇವತೆಯ ದರ್ಶನ ಪಡೆದ ಜಡೇಜಾ.. ಮೋದಿಗೂ ಈ ದೇವರು ಅಂದ್ರೆ ಭಕ್ತಿ ಜಾಸ್ತಿ

Share :

29-06-2023

    ಪ್ರಧಾನಿ ಮೋದಿಯ ನೆಚ್ಚಿನ ದೇವರ ದರ್ಶನ ಪಡೆದ ಜಡೇಜಾ

    ಸ್ಟಾರ್​ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಕುಲದೇವರು ಯಾರು?

    ನಂಬಿದವರನ್ನ ಕೈಬಿಡಲ್ಲ ಅಂತೆ ಈ ದೇವರು! ಜಡೇಜಾ ಬೇಡಿಕೊಂಡಿದ್ದೇನು?

ಜುಲೈ 12 ಟೀಮ್ ಇಂಡಿಯಾ-ವೆಸ್ಟ್​ಇಂಡೀಸ್​​​​ ನಡುವೆ ಟೆಸ್ಟ್​ ದಂಗಲ್​​​​​​ ಆರಂಭಗೊಳ್ಳಲಿದೆ. ಒಂದು ತಿಂಗಳ ವಿಶ್ರಾಂತಿ ಪಡೆದ ರೋಹಿತ್​​ ಶರ್ಮಾ & ಗ್ಯಾಂಗ್​ ಸದ್ಯ ಫುಲ್​​ ಫ್ರೆಶ್​ ಮೂಡ್​​ನಲ್ಲಿದ್ದಾರೆ. ಇದೇ ಮೂಡ್​​ನಲ್ಲಿ ಕೆರಿಬಿಯನ್ನರ ಅವರದ್ದೇ ನೆಲದಲ್ಲಿ ಬೇಟೆಯಾಡಲು ಪಣತೊಟ್ಟಿದೆ. ಇದಕ್ಕೆ ಆಟಗಾರರ ಡೆಡಿಕೇಶನ್​ ಒಂದೇ ಸಾಕಾಗಲ್ಲ. ದೇವರ ಬಲವು ಅಗತ್ಯ. ಹಾಗಾಗಿ ವಿಂಡೀಸ್ ಟೂರ್​​ಗೂ ಮುನ್ನ ರೋಹಿತ್​​ ಬಾಯ್ಸ್ ಟೆಂಪಲ್​​ ರನ್​​ ಶುರುವಿಟ್ಟುಕೊಂಡಿದ್ದಾರೆ.

ವಿಂಡೀಸ್​ ಪ್ರವಾಸಕ್ಕೂ ಮುನ್ನ ಜಡೇಜಾ ಟೆಂಪಲ್ ರನ್​​​..!

WTC ಫೈನಲ್​ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದ ಕೆಲ ಆಟಗಾರರು ತವರಿಗೆ ವಾಪಾಸ್ಸಾಗಿದ್ದಾರೆ ಆ ಪೈಕಿ ಸ್ಟಾರ್​ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಒಬ್ಬರು. ಸದ್ಯ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ಖ್ಯಾತ ಸ್ಪಿನ್ನರ್ ವಿಂಡೀಸ್​ ಪ್ರವಾಸಕ್ಕೂ ಕುಲದೇವತೆಯ ಮೊರೆ ಹೋಗಿದ್ದಾರೆ.

ಹೌದು, ಕೆರಿಬಿಯನ್ನರ ನಾಡಿಗೆ ಹಾರುವ ಮುನ್ನ ಜಡ್ಡು ಗುಜರಾತ್​​ನ ಕುಚ್​​ನಲ್ಲಿರುವ ಮಾತಾ ಆಶಾಪುರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ರಿವಾಬಾ ಜೊತೆ ತೆರಳಿದ ಜಡೇಜಾ ಆಶಾಪುರ ಮಾತೆಯ ದರ್ಶನ ಪಡೆದು ಪುನೀತರಾಗಿದ್ದಾರೆ. ಆಶಾಪುರ ಮಾತಾ ರವೀಂದ್ರ ಜಡೇಜಾ ಅವರ ಕುಲದೇವರು. ದೇಗುಲ ಭೇಟಿಯ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟಪಡಿಸಿದ್ದು, ಇವೇ ನನ್ನ ನಂಬಿಕೆ, ನನ್ನ ಶಕ್ತಿ ಎಂದು ಬರೆದುಕೊಂಡಿದ್ದಾರೆ.

ನಂಬಿದವರನ್ನ ಕೈಬಿಡಲ್ಲ ಮಾತಾ ಆಶಾಪುರ..!

ಜಡೇಜಾರ ಕುಲದೇವತೆ ಮಾತಾ ಆಶಾಪುರ ನಂಬಿದವರನ್ನ ಕೈಬಿಡಲ್ಲ ಅನ್ನೋ ನಂಬಿಕೆ ಇದೆ. ಈಗಾಗಿ ಜಡ್ಡು ಹಿಂದೆ ಅನೇಕ ಬಾರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಸ್ಟಾರ್ ಆಲ್​ರೌಂಡರ್ ಯಾವಗೆಲ್ಲಾ ಈ ಪವರ್​ಫುಲ್​​​​​​ ದೇವಿಯ ದರ್ಶನ ಪಡೆದಿದ್ದಾರೋ ಆ ಬಳಿಕ ಆನ್​​ ಫೀಲ್ಡ್​​ನಲ್ಲಿ ಅಬ್ಬರಿಸಿದ್ದಾರೆ. ಜುಲೈ 12 ರಿಂದ ವಿಂಡೀಸ್ ಟೂರ್ ಆರಂಭಗೊಳ್ತಿದೆ. ಇದಕ್ಕೂ ಮನೆದೇವರ ದರ್ಶನ ಪಡೆದ ಜಡ್ಡು ಕೆರಿಬಿಯನ್ನರ ನಾಡಲ್ಲಿ ಕಮಾಲ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಆಶಾಪುರ ಪ್ರಧಾನಿ ಮೋದಿ ಅವರ ನೆಚ್ಚಿನ ದೇವರು

ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ದೈವಭಕ್ತ ಅನ್ನೋದು ಎಲ್ಲರಿಗೂ ಗೊತ್ತಿದೆ. ನಮೋ ಇಷ್ಟಪಟ್ಟು ಪೂಜಿಸುವ ದೇವರುಗಳಲ್ಲಿ ಕುಚ್​ನ ಮಾತ ಆಶಾಪೂರ ಕೂಡ ಒಂದು. 2017ರಲ್ಲಿ ನರೇಂದ್ರ ಮೋದಿ ಈ ದೇವಸ್ಥಾನಕ್ಕೆ ಭೇಟಿ ಮಾತಾ ಆಶೀರ್ವಾದ ಪಡೆದಿದ್ರು.

ನಾನ್​ಸ್ಟಾಪ್​ ಕ್ರಿಕೆಟ್ ಆಡಲಿದ್ದಾರೆ ಸ್ಟಾರ್​ ಆಲ್​ರೌಂಡರ್​​​

ಹೌದು, ಸದ್ಯ ಮಾತಾ ಆಶಾಪುರ ದೇಗುಲಕ್ಕೆ ಭೇಟಿ ಕೊಟ್ಟಿರೋ ಜಡೇಜಾ ಮುಂದಿಮ ಮೂರುವರೇ ತಿಂಗಳು ನಾನ್​​ಸ್ಟಾಪ್​ ಕ್ರಿಕೆಟ್ ಆಡಲಿದ್ದಾರೆ. ವಿಂಡೀಸ್​ ಟೂರ್​​ನಿಂದ ಶುರುವಾಗಿ ಏಕದಿನ ವಿಶ್ವಕಪ್​​ ಮುಗಿಯುವ ತನಕ ಸತತ ಕ್ರಿಕೆಟ್ ಆಡಲಿದ್ದಾರೆ. ಜಡೇಜಾ ಮೂರು ಮಾದರಿಯ ಖಾಯಂ ಆಟಗಾರ. ಏಷ್ಯಾಕಪ್​​​​-ವಿಶ್ವಕಪ್​​ನಂತ ಪ್ರಮುಖ ಟೂರ್ನಿಗಳಲ್ಲಿ ಜಡ್ಡು ರೋಲ್ ದೊಡ್ಡದು. ಹೀಗಾಗಿನೇ ಅವರು ವಿಂಡೀಸ್​ ಪ್ರವಾಸಕ್ಕೂ ಮುನ್ನ ಕುಲದೇವತೆ ಮಾತಾ ಆಶಾಪುರ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ವಿಂಡೀಸ್​ ಸಂಹರಿಸಲು ಸಜ್ಜಾಗಿರೋ ರವೀಂದ್ರ ಜಡೇಜಾಗೆ ಕುಲದೇವರ ಆಶೀರ್ವಾದ ಸಿಗುತ್ತಾ ? ಜಡ್ಡು ಬ್ಯಾಟಿಂಗ್​​​-ಬೌಲಿಂಗ್​​ನಲ್ಲಿ ಧೂಳೆಬ್ಬಿಸ್ತಾರಾ ? ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಂಡೀಸ್​ ಪ್ರವಾಸಕ್ಕೂ ಮುನ್ನ ಕುಲದೇವತೆಯ ದರ್ಶನ ಪಡೆದ ಜಡೇಜಾ.. ಮೋದಿಗೂ ಈ ದೇವರು ಅಂದ್ರೆ ಭಕ್ತಿ ಜಾಸ್ತಿ

https://newsfirstlive.com/wp-content/uploads/2023/06/Jadeja-4.jpg

Load More