ಕಲ್ಯಾಣ ಕ್ಷೇತ್ರದ ಕಲಬುರಗಿ, ರಾಯಚೂರಿಗಾಗಿ ರಣತಂತ್ರ
ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತ ಅಸ್ತ್ರ ಹೂಡಿದ ಹಸ್ತ
ಶೆಟ್ಟರ್ ಮೂಲಕ ಲೋಕಸಭೆ ಎಲೆಕ್ಷನ್ ಗೆಲ್ಲಲು ರಣತಂತ್ರ
ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಿಎಂ ಶೆಟ್ಟರ್, ಸಚಿವ ಬೋಸರಾಜು, ತಿಪ್ಪಣ್ಣಪ್ಪ ಕಮಕನೂರು ಕಣಕ್ಕಿಳಿದಿದ್ದಾರೆ. ಈ ವೇಳೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಂಬಿಪಿ, ಮಧು ಬಂಗಾರಪ್ಪ ಸೇರಿ ಹಲವರು ಉಪಸ್ಥಿತರಿದ್ರು. ಈ ಮೂವರನ್ನ ಅಖಾಡಕ್ಕಿಳಿಸುವ ಹಿಂದೆ ಕಾಂಗ್ರೆಸ್ ಲೋಕಸಭೆಯತ್ತ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.
ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ವಿಧಾನ ಪರಿಷತ್ಗೆ ಅಳೆದುತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡ್ತಿದೆ. ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಉಪ ಚುನಾವಣೆ ಹಿನ್ನೆಲೆ ಲೋಕಸಭೆಗೆ ಗೋಲ್ ಹೊಡೆದಿದೆ. ಜಾತಿವಾರು ಮತ್ತು ಪ್ರದೇಶವಾರು ಲೆಕ್ಕಾಚಾರ ಹಾಕಿ ಮಣೆ ಹಾಕ್ತಿದೆ. ಈ 3 ಕ್ಷೇತ್ರಗಳಲ್ಲಿ ಎರಡು ಕಲ್ಯಾಣ ಕರ್ನಾಟಕ, ಒಂದು ಕಿತ್ತೂರು ಭಾಗಕ್ಕೆ ಟಿಕೆಟ್ ಕೊಟ್ಟಿದೆ.
ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತ ಅಸ್ತ್ರ ಹೂಡಿದ ಹಸ್ತ!
ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ನಿರೀಕ್ಷೆಯಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಭೋಸರಾಜುಗೆ ಟಿಕೆಟ್ ನೀಡಿದೆ. ತಿಪ್ಪಣ್ಣಪ್ಪ ಕಮಕನೂರ್ ಈ ಬಾರಿ ಅಚ್ಚರಿ ಅಭ್ಯರ್ಥಿ ಆಗಿದ್ದಾರೆ. ಸವದಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೆಟ್ಟರ್, ಆರ್. ಶಂಕರ್ರಿಂದ ತೆರವಾದ ಸ್ಥಾನಕ್ಕೆ ಕಮಕನೂರ್ಗೆ ಅವಕಾಶ ಲಭಿಸಿದೆ. ಚಿಂಚನಸೂರ್ ಸ್ಥಾನಕ್ಕೆ ಹಾಲಿ ಸಚಿವ ಬೋಸರಾಜುಗೆ ಅವಕಾಶ ಕಲ್ಪಿಸಿದೆ.
ಜೂನ್ 30ರಂದು ನಡೆಯುಲಿರುವ ಚುನಾವಣೆಗೆ ಮಾಜಿ ಸಿಎಂ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು, ಸಚಿವ ಭೋಸರಾಜು ನಾಮಪತ್ರ ಸಲ್ಲಿಸಿದ್ರು. ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ನಾಮಪತ್ರ ಸ್ವೀಕರಿಸಿದ್ರು. ವಿಧಾನಸಭೆಯಲ್ಲಿ ಪೂರ್ಣ ಬಹುಮತ ಹೊಂದಿರುವ ಕಾರಣ ಮೂರು ಸ್ಥಾನಗಳು ಕಾಂಗ್ರೆಸ್ ಪಾಲಾಗುವುದು ಖಚಿತವಾಗಿದೆ. ಹೀಗಾಗಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳನ್ನ ಕಣಕ್ಕಿಳಿಸದಿರಲು ನಿರ್ಧರಿಸಿವೆ.
ಶೆಟ್ಟರ್ ಮೂಲಕ ಲೋಕಸಭೆ ಎಲೆಕ್ಷನ್ ಗೆಲ್ಲಲು ರಣತಂತ್ರ!
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಿತ್ತೂರು ಕರ್ನಾಟಕದ ಪ್ರಭಾವಿ ನಾಯಕ.. ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಸೋತಿರುವ ಶೆಟ್ಟರ್ರನ್ನ ತಾವು ಕೈಬಿಟ್ಟಿಲ್ಲ ಅನ್ನೋ ಸಂದೇಶ ಕಾಂಗ್ರೆಸ್ ರವಾನಿಸಿದೆ.. ವಿಧಾನಸಭೆಯಲ್ಲಿ ಲಿಂಗಾಯತ ಮತ ವಿಭಜನೆಯಿಂದ ಕಾಂಗ್ರೆಸ್ ಭರ್ಜರಿ ಮೆಜಾರಿಟಿ ಪಡೆದಿದೆ.. ಹಾಗಾಗಿ ಪ್ರಭಾವಿ ಲಿಂಗಾಯತ ನಾಯಕನನ್ನ ಲೋಕಸಭೆ ಪ್ರಚಾರದಲ್ಲಿ ಪ್ರಬಲವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್ ಹೆಣೆದಂತಿದೆ.. ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ-ಹಾವೇರಿ, ಬಾಗಲಕೋಟೆಯಲ್ಲಿ ಶೆಟ್ಟರ್ ಚಕ್ರವ್ಯೂಹ ಹೆಣೆಯಲಿದ್ದಾರೆ.
ಸಚಿವ ಬೋಸರಾಜುಗೆ ವರ್ಷದ ಹೊಣೆಗಾರಿಕೆ
ಚಿಂಚನಸೂರ್ರಿಂದ ತೆರವಾದ ಸ್ಥಾನಕ್ಕೆ ಸಚಿವ ಬೋಸರಾಜು ಸ್ಪರ್ಧಿಸಿದ್ದು, ಕೇವಲ ಒಂದು ವರ್ಷದ ಅವಧಿಗೆ ಅವಕಾಶ ಇದೆ. ತೆಲಂಗಾಣ ಕಾಂಗ್ರೆಸ್ನ ಉಸ್ತುವಾರಿ ಆಗಿರುವ ಬೋಸರಾಜುಗೆ ಡಿಸೆಂಬರ್ನಲ್ಲಿ ನಡೆಯುವ ಚುನಾವಣೆಯಲ್ಲಿ ಕೈಗೆ ಬಲ ತುಂಬುವ ಜವಾಬ್ದಾರಿ ಇದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರ ಗೆಲ್ಲಿಸಲು ಟಾಸ್ಕ್ ನೀಡಲಾಗಿದೆ.
ಕಲಬುರಗಿಯಲ್ಲಿ ಮತಭದ್ರಕ್ಕೆ ‘ಕೈ’ಹಾಕಿದ ಖರ್ಗೆ
ಚಿಂಚನಸೂರ್ಗೆ ಅನಾರೋಗ್ಯದ ಕಾರಣ ಅವಕಾಶ ಕೈತಪ್ಪಿದೆ. ಅದೇ ಕೋಲಿ ಸಮಾಜದ ಗೌರವಾಧ್ಯಕ್ಷರಾಗಿರುವ ತಿಪ್ಪಣ್ಣಪ್ಪ ಕಮಕನೂರುಗೆ ಅವಕಾಶ ನೀಡಲಾಗಿದೆ. ಇದರ ಹಿಂದೆ ಖರ್ಗೆ ಹಿತಾಸಕ್ತಿ ಇದ್ದು, ತಮ್ಮ ಶಿಷ್ಯನಿಗೆ ಮಣೆ ಹಾಕಿದ್ದು, ಲೋಕಸಭಾ ಎಲೆಕ್ಷನ್ ಗೆಲ್ಲಲು ತಂತ್ರ ಹಣೆದಿದ್ದಾರೆ. ಕಲಬುರ್ಗಿ ಕ್ಷೇತ್ರದಲ್ಲಿ ಕೋಲಿ ಸಮಾಜದ ಮತಗಳು ನಿರ್ಣಾಯಕ ಆಗಿದ್ದು, ಈಗ ತಿಪ್ಪಣ್ಣಪ್ಪ ಮೂಲಕ ಮತಕ್ರೋಢೀಕರಣದ ಲೆಕ್ಕಾಚಾರ ಹೊಂದಿದ್ದಾರೆ.
ಒಟ್ಟಾರೆ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವು ಗುರಿ ಹೊಂದಿರುವ ಕಾಂಗ್ರೆಸ್ ಸದ್ಯ ಈ ಮೂರು ಸ್ಥಾನಗಳನ್ನ ಫಿಲ್ ಮಾಡಿದೆ. ಇದೇ ತಿಂಗಳಲ್ಲಿ ತೆರವಾಗುವ ನಾಮ ನಿರ್ದೇಶನದ ಮೂರು ಸ್ಥಾನಗಳು ದಕ್ಷಿಣ ಭಾಗಕ್ಕೆ ದಕ್ಕುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ