newsfirstkannada.com

ಮತ್ತೆ ಬಿಜೆಪಿ ಸೇರ್ತಾರಾ ಶೆಟ್ಟರ್​​..!? ಅಮಿತ್ ಶಾ ಕರೆ ಬಗ್ಗೆ ಸ್ಪಷ್ಟನೆ ಕೊಟ್ಟ ಮಾಜಿ ಮುಖ್ಯಮಂತ್ರಿ -Video

Share :

27-08-2023

    ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸೇರಿರುವ ಶೆಟ್ಟರ್

    ರಾಜ್ಯ BJP ಲೀಡರ್​​ಲೆಸ್​ ಆಗಿದೆ, ರಾಜ್ಯಾಧ್ಯಕ್ಷರೇ ಇಲ್ಲ

    ಬಿಜೆಪಿ ಇನ್ನೂ ದಯನೀಯ ಪರಿಸ್ಥಿತಿಗೆ ಹೋಗುತ್ತದೆ

ಧಾರವಾಡ: ಕೇಂದ್ರ ಸಚಿವ ಅಮಿತ್ ಶಾರಿಂದ ಫೋನ್​ ಕರೆ ಬಂದ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಈವರೆಗೆ ಅಮಿತ್ ಶಾ ಆಗಲಿ ಅಥವಾ ಮತ್ತೊಬ್ಬರಾಗಲಿ ಯಾರೂ ಕರೆ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ನನಗೆ ಬಿಜೆಪಿ ಹೈಕಮಾಂಡ್​ನಿಂದ ಯಾವುದೇ ಕರೆ ಬಂದಿಲ್ಲ. ಹಾಗಿದ್ರೂ ಈ ಎಲ್ಲಾ ಚರ್ಚೆಗಳು ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ನನಗೆ ಕರೆ ಮಾಡಿದ್ರೆ ನಾನೇ ಮಾಧ್ಯಮಗಳಿಗೆ ತಿಳಿಸುತ್ತೇನೆ ಅಂತಾ ತಿಳಿಸಿದ್ದಾರೆ.

ಕರ್ನಾಟಕ ಬಿಜೆಪಿ ಲೀಡರ್ ಲೆಸ್ ಆಗಿದೆ, ರಾಜ್ಯಾಧ್ಯಕ್ಷರನ್ನು ಇನ್ನೂ ರಿಪ್ಲೇಸ್ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿಗೆ ಒಬ್ಬ ನಾಯಕ ಎಂಬುವುದೇ ಇಲ್ಲ. ಬೇರೆ ಬೇರೆ ಕಡೆ ಕಾಂಗ್ರೆಸ್ ನಾಯಕರನ್ನು ಬಿಜೆಪಿಯವರು ಭೇಟಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಇನ್ನೂ ದಯನೀಯ ಪರಿಸ್ಥಿತಿಗೆ ಹೋಗುತ್ತದೆ. ಬಿಜೆಪಿ ಒಳಗೆ ಸಾಕಷ್ಟು ಜನ ನೊಂದಿದ್ದಾರೆ ಸಂಕಟಪಡುತ್ತಿದ್ದಾರೆ. ಬಿಜೆಪಿಯನ್ನು ಬಿಟ್ಟು ಹೊರಗೆ ಬರಲು ಬಹಳಷ್ಟು ಜನ ತಯಾರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಬಿಜೆಪಿ ಸೇರ್ತಾರಾ ಶೆಟ್ಟರ್​​..!? ಅಮಿತ್ ಶಾ ಕರೆ ಬಗ್ಗೆ ಸ್ಪಷ್ಟನೆ ಕೊಟ್ಟ ಮಾಜಿ ಮುಖ್ಯಮಂತ್ರಿ -Video

https://newsfirstlive.com/wp-content/uploads/2023/08/JAGADISH.jpg

Load More