ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರದ ಮಹತ್ವದ ಸಾಧನೆ
ಸರ್ಕಾರಿ ಮಕ್ಕಳ ಭವಿಷ್ಯಕ್ಕಾಗಿ ಬರೋಬ್ಬರಿ 19 ಸಾವಿರ ಕೋಟಿ ಹಣ ಖರ್ಚು
ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸೋ ತಾಯಂದಿರಿಗೆ ವರ್ಷಕ್ಕೆ 15 ಸಾವಿರ
ವಿಶಾಖಪಟ್ಟಣಂ: ಕಳೆದ ಮೂರು ವರ್ಷದಲ್ಲಿ ಅಮ್ಮ ವೊಡಿ ಸ್ಕೀಮ್ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬರೋಬ್ಬರಿ 19,617 ಕೋಟಿ ರೂ. ಖರ್ಚು ಮಾಡಿರುವುದಾಗಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಮಾತಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಅಮ್ಮ ವೊಡಿ (ಅಮ್ಮನ ಮಡಿಲು) ಯೋಜನೆಗೆ ಇಂದಿಗೆ ಮೂರು ವರ್ಷ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿರುವುದಕ್ಕಾಗಿ ತಾಯಂದಿರಿಗೆ ವರ್ಷಕ್ಕೆ 15 ಸಾವಿರ ನೀಡುತ್ತಿದ್ದೇವೆ. ಈ ಸ್ಕೀಮ್ ಬಿಪಿಎಲ್ ಕಾರ್ಡ್ ಹೊಂದಿರೋ ಮನೆಯವರಿಗೆ ಅನ್ವಯ ಆಗಲಿದೆ. 1-12ನೇ ತರಗತಿವರೆಗೂ ಸರ್ಕಾರಿ ಶಾಲೆಯಲ್ಲೇ ತಮ್ಮ ಮಕ್ಕಳನ್ನು ಓದಿಸೋ ಬಿಪಿಎಲ್ ಕಾರ್ಡ್ ಹೋಲ್ಡರ್ ಅಮ್ಮಂದಿರಿಗೆ 15 ಸಾವಿರ ನೀಡಲಾಗುತ್ತದೆ ಎಂದರು.
15 ಸಾವಿರ ಪ್ರೋತ್ಸಾಹ ಹಣ ಪಡೆಯಲು ಮಕ್ಕಳಿಗೆ ಕಡ್ಡಾಯವಾಗಿ ಶೇ. 75ರಷ್ಟು ಹಾಜರಾತಿ ಇರಬೇಕು. ಇನ್ನು, 15 ಸಾವಿರದಲ್ಲಿ 1,000 ರೂ. ಶಾಲೆ ಅಭಿವೃದ್ಧಿಗಾಗಿ ನೀಡಲಾಗುವುದು ಎಂದರು.
ಇದುವರೆಗೂ 84 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸ್ಕೀಮ್ ಅಡಿಯಲ್ಲಿ ಆರ್ಥಿಕ ಸಹಾಯ ಸಿಕ್ಕಿದೆ. ಇದರ ನೇರ ಫಲಾನುಭವಿಗಳು 44.5 ಲಕ್ಷಕ್ಕೂ ಹೆಚ್ಚು ತಾಯಂದಿರು ಇದ್ದಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ, ಬಡವರ ಮಕ್ಕಳನ್ನು ಓದಿಸಲು ಈ ಸ್ಕೀಮ್ ಜಾರಿಗೆ ತರಲಾಗಿದೆ. 2020 ಜನವರಿ ತಿಂಗಳಿನಿಂದಲೇ ಈ ಯೋಜನೆ ಜಾರಿಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ