newsfirstkannada.com

ಅಮಿತಾಬ್​ ಬಚ್ಚನ್ ಹೆಸರೇಳಲು ಪತ್ನಿ ಜಯಾಗೆ ನಾಚಿಕೆನಾ.. ರಾಜ್ಯಸಭೆಯಲ್ಲಿ ಅಧ್ಯಕ್ಷರು ತಮಾಷೆ ಮಾಡಿದ್ದೇಕೆ?

Share :

Published August 2, 2024 at 9:42pm

    ಅಮಿತಾಬ್​ ಬಚ್ಚನ್ ಹೆಸರೇಳ್ತಿದ್ದಂತೆ ಜೋರಾಗಿ ನಕ್ಕ ಧನಕರ್

    ಗಂಡನ ಹೆಸರು ಹೇಳಲು ಸದಸ್ಯೆ ಜಯಾ ಹಿಂದೇಟು ಹಾಕಿದ್ದೇಕೆ?

    ತಮ್ಮ ಹೆಸರನ್ನ ಹೇಳುವಾಗ ಅಮಿತಾಬ್ ಹೆಸರನ್ನ ಏಕೆ ಹೇಳಲಿಲ್ಲ?

ನವದೆಹಲಿ: ರಾಜ್ಯಸಭೆಯಲ್ಲಿ ಹಾಸ್ಯಕರ ಸಂಗತಿಯೊಂದು ನಡೆದಿದ್ದು ಸದಸ್ಯೆ ಜಯಾ ಬಚ್ಚನ್ ತನ್ನ ಪತಿ ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಹೆಸರೇಳುತ್ತಿದ್ದಂತೆ ಅಧ್ಯಕ್ಷ ಜಗದೀಪ್ ಧನಕರ್ ಜೋರಾಗಿ ನಕ್ಕಿದ್ದಾರೆ. ಈ ನಗುವಿನ ಹಿಂದೆ ಜಯಾ ಬಚ್ಚನ್ ಅವರ ಸ್ವಾರಸ್ಯಕರವಾದ ಸಂಗತಿಯೊಂದು ಇದೆ.

ಇದನ್ನೂ ಓದಿ: ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!

ಇಂದು ರಾಜ್ಯಸಭೆಯಲ್ಲಿ ಎಲ್ಲ ಸದಸ್ಯರು ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದರು. ಸಭೆಯಲ್ಲಿ ಕಾಂಗ್ರೆಸ್​ನ ಸಂಸದ ಜೈರಾಮ್​ ರಮೇಶ್​, ಎಎಪಿಯ ರಾಘವ್​ ಚಡ್ಡ ಸೇರಿದಂತೆ ಇತರರು ಇದ್ದರು. ಈ ವೇಳೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ತಮ್ಮ ಪರಿಚಯ ಮಾಡಿಕೊಳ್ಳುವಾಗ ನಾನು ‘ಜಯಾ ಅಮಿತಾಬ್ ಬಚ್ಚನ್’ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಜೋರಾಗಿ ನಕ್ಕಿದ್ದಾರೆ. ಇದಕ್ಕೆ ಹಾಸ್ಯವಾಗಿ ಮಾತನಾಡಿದ ಜಯಾ ಬಚ್ಚನ್​ ಅವರು, ಇವತ್ತು ಊಟ ಮಾಡಿದ್ದೀರಾ ತಾನೇ?. ಪದೇ ಪದೇ ಜಯರಾಂ ಹೆಸರನ್ನು ಯಾಕೆ ತೆಗೆದುಕೊಳ್ಳುತ್ತಿದ್ದೀರಿ. ಅವರ ಹೆಸರು ತೆಗೆದುಕೊಳ್ಳದಿದ್ದರೇ ನಿಮಗೆ ಹೊಟ್ಟೆಯಲ್ಲಿ ಊಟ ಜೀರ್ಣ ಆಗಲ್ಲ ಎಂದು ಕೇಳಿದ್ದಾರೆ. ಇದಕ್ಕೆ ತಮಾಷೆಯಾಗೇ ಟಾಂಗ್​ ಕೊಟ್ಟ ಅಧ್ಯಕ್ಷರು, ಊಟದ ಸಮಯದಲ್ಲಿ ಊಟ ಮಾಡಲಿಲ್ಲ. ಆದರೆ ಜಯರಾಂ ಜೊತೆ ಊಟ ಮಾಡಿದ್ದೀನಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೊಂದು ಮೆಡಲ್​ಗೆ ಮನು ಭಾಕರ್ ಮುತ್ತಿಕ್ಕುವುದು ಗ್ಯಾರಂಟಿ.. ಚಿನ್ನದ ಪದಕ​ ಸಾಧನೆ ಮಾಡ್ತಾರಾ?

ರಾಜ್ಯಸಭೆಯಲ್ಲಿ ಜಯಾ ಅವರು ತನ್ನ ಪತಿ ಅಮಿತಾಬ್ ಬಚ್ಚನ್ ಹೆಸರು ಹೇಳುತ್ತಿದ್ದಂತೆ ಅಧ್ಯಕ್ಷ ಜಗದೀಪ್ ಧನಕರ್ ನಕ್ಕಿರುವ ಹಿಂದೆ ಕಾರಣ ಇದೆ. ಅದು ಏನೆಂದರೆ ರಾಜ್ಯಸಭೆಯಲ್ಲಿ ಇದೇ ಜುಲೈ 30 ರಂದು ತಮ್ಮ ಭಾಷಣದ ವೇಳೆ ಹೆಸರನ್ನು ಹೇಳುವಾಗ ‘ಜಯಾ ಬಚ್ಚನ್’​ ಎಂದು ಹೇಳಿದ್ದರು. ಈ ವೇಳೆ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ನಾರಾಯಣ ಸಿಂಗ್ ಅವರು, ಜಯಾ ಅಮಿತಾಬ್ ಬಚ್ಚನ್ ಎಂದು ಉಲ್ಲೇಖವಿದೆ. ಅದೇ ರೀತಿ ಹೇಳಿ ಎಂದಿದ್ದರು.

ಇದನ್ನೂ ಓದಿ: ಇಂಟರ್’ನೆಟ್’ನಲ್ಲಿ ಅತಿಹೆಚ್ಚು ಸರ್ಚ್‌ಗೆ ಒಳಗಾದ ಮನು ಭಾಕರ್​​ ಜಾತಿ; ಇದೆಂಥಾ ಮನಸ್ಥಿತಿ!

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಜಯಾ ಅವರು, ಇದು ಹೊಸ ಸಂಗತಿ ಆಗಿದೆ. ಪ್ರತಿ ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಯಾಕೆ ಅವರ ಹೆಸರಿಂದಲೇ ಗುರ್ತಿಸಿಕೊಳ್ಳಬೇಕು. ನಮ್ಮನ್ನು ನಾವು ಗುರುತಿಸಿಕೊಳ್ಳಲಾಗ್ತಿಲ್ಲ. ಮಹಿಳೆಯರು ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳನ್ನು ಹೊಂದಿಲ್ವಾ ಎಂದು ಪ್ರಶ್ನೆ ಮಾಡಿದ್ದರು. ಆದರೆ ಈಗ ಪರಿಚಯ ಮಾಡಿಕೊಳ್ಳುವಾಗ ‘ಜಯಾ ಅಮಿತಾಬ್ ಬಚ್ಚನ್’ ಎಂದು ಹೇಳಿದ್ದಕ್ಕೆ ರಾಜ್ಯಸಭೆಯಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮಿತಾಬ್​ ಬಚ್ಚನ್ ಹೆಸರೇಳಲು ಪತ್ನಿ ಜಯಾಗೆ ನಾಚಿಕೆನಾ.. ರಾಜ್ಯಸಭೆಯಲ್ಲಿ ಅಧ್ಯಕ್ಷರು ತಮಾಷೆ ಮಾಡಿದ್ದೇಕೆ?

https://newsfirstlive.com/wp-content/uploads/2024/08/JAYA_BACHCHAN.jpg

Load More