newsfirstkannada.com

BREAKING: ವಿಧಾನಪರಿಷತ್ ಚುನಾವಣೆಯಲ್ಲಿ ಶೆಟ್ಟರ್ ಸೇರಿ ಕಾಂಗ್ರೆಸ್‌ನ ಮೂವರು ಅವಿರೋಧ ಆಯ್ಕೆ

Share :

23-06-2023

    ಜಗದೀಶ್ ಶೆಟ್ಟರ್‌ ಅವರಿಗೆ ನೂತನ ವಿಧಾನಪರಿಷತ್ ಸದಸ್ಯ ಸ್ಥಾನ

    N.S ಬೋಸ್‌ರಾಜ್, ತಿಪ್ಪಣ್ಣ ಕಮಕನೂರ್‌ ಅವಿರೋಧವಾಗಿ ಆಯ್ಕೆ

    ಸೋಲಿನ ಹಿನ್ನೆಲೆ ಬಿಜೆಪಿ ಯಾವುದೇ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿಲ್ಲ

ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಗದೀಶ್ ಶೆಟ್ಟರ್, ಎನ್.ಎಸ್. ಬೋಸ್‌ರಾಜ್ ಹಾಗೂ ತಿಪ್ಪಣ್ಣ ಕಮಕನೂರ್‌ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರು. 3 ವಿಧಾನಪರಿಷತ್ ಸ್ಥಾನಕ್ಕೆ ಜೂನ್ 30 ರಂದು ವಿಧಾನಪರಿಷತ್ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್‌ನಿಂದ ಮೂವರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಇದ್ದಿದ್ದರಿಂದ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಫಲಿತಾಂಶ ಪ್ರಕಟಿಸಿದ್ದಾರೆ.

ಪರಿಷತ್ ಫೈಟ್‌ನಿಂದ ಹಿಂದೆ ಸರಿದ ಬಿಜೆಪಿ
ವಿಧಾನಪರಿಷತ್‌ನಲ್ಲಿ ಖಾಲಿಯಿದ್ದ ಮೂರು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್, ಎನ್.ಎಸ್. ಬೋಸ್‌ರಾಜ್ ಹಾಗೂ ತಿಪ್ಪಣ್ಣ ಕಮಕನೂರ್‌ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಉಪಚುನಾವಣೆಯಲ್ಲಿ ಸೋಲಿನ ಭೀತಿಯ ಹಿನ್ನೆಲೆಯಲ್ಲಿ ಬಿಜೆಪಿ ಯಾವುದೇ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿರಲಿಲ್ಲ. ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಪದ್ಮರಾಜನ್ ಅವರ ನಾಮಪತ್ರ ತಿರಸ್ಕೃತವಾಗಿತ್ತು.

ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸೇರಿ ಈ ಮೂವರಿಗೆ ಕಾಂಗ್ರೆಸ್​ MLC ಟಿಕೆಟ್​​

ಕೊನೆಯದಾಗಿ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ಮಾತ್ರ ಕಣದಲ್ಲಿ‌ ಇದ್ದಿದ್ದರಿಂದ ಪರಿಷತ್ ಉಪ ಚುನಾವಣೆ ನಡೆಯದೇ ಮೂವರು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರು, ಆರ್.ಶಂಕರ್‌ನಿಂದ ತೆರವಾಗಿದ್ದ ಎಂಎಲ್‌ಸಿ ಸ್ಥಾನಗಳಿಗೆ ಜೂನ್ 30ರಂದು ಉಪಚುನಾವಣೆ ನಿಗದಿಯಾಗಿತ್ತು. ಲಕ್ಷ್ಮಣ್ ಸವದಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗಿದ್ದಾರೆ. ಆರ್. ಶಂಕರ್ ಅವರಿಂದ ತೆರವಾದ ಸ್ಥಾನಕ್ಕೆ ತಿಪ್ಪಣ್ಣ ಕಮಕನೂರ್, ಬಾಬುರಾವ್ ಚಿಂಚನಸೂರ್‌ರಿಂದ ತೆರವಾದ ಕೇವಲ ಒಂದು ವರ್ಷದ ಸ್ಥಾನಕ್ಕೆ ಸಚಿವ ಬೋಸರಾಜುಗೆ ಅವಕಾಶ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BREAKING: ವಿಧಾನಪರಿಷತ್ ಚುನಾವಣೆಯಲ್ಲಿ ಶೆಟ್ಟರ್ ಸೇರಿ ಕಾಂಗ್ರೆಸ್‌ನ ಮೂವರು ಅವಿರೋಧ ಆಯ್ಕೆ

https://newsfirstlive.com/wp-content/uploads/2023/06/Congress-MLC-Ticket.jpg

Load More