newsfirstkannada.com

ಚಂದ್ರಯಾನ-3 ಬಗ್ಗೆ ವಂಗ್ಯವಾಡಿದ್ದ ಪ್ರಕಾಶ್​ ರಾಜ್​ಗೆ ನಟ ಜಗ್ಗೇಶ್​​ ಫುಲ್​​ ಕ್ಲಾಸ್​​; ಏನಂದ್ರು..?

Share :

23-08-2023

    ಚಂದ್ರಯಾನ-3 ಮಿಷನ್​​ ಬಗ್ಗೆ ವ್ಯಂಗ್ಯಭರಿತ ಟ್ವೀಟ್​​

    ಚಂದ್ರನ ಅಂಗಳದಲ್ಲಿ ಮಹತ್ವದ ಹೆಜ್ಜೆ ಇಟ್ಟ ವಿಕ್ರಮ್​​

    ನಟ ಪ್ರಕಾಶ್ ರಾಜ್​ಗೆ ತಿರುಗೇಟು ಕೊಟ್ಟ ಜಗ್ಗೇಶ್​

ಬಹುಭಾಷಾ ನಟ ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್ ಚಹಾ ಮಾಡುತ್ತಿರೋ ಫೋಟೋ ಹಾಕಿದ್ದಕ್ಕೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಚಂದ್ರಯಾನ 3 ಯೋಜನೆ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಮಾಡಿ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಭಾರೀ ವೈರಲ್ ಆಗಿತ್ತು. ಜೊತೆಗೆ ಆ ಟ್ವೀಟ್​​ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇಡೀ ಭಾರತವೇ ಹೆಮ್ಮೆ ಪಡುತ್ತಿರುವಾಗ ಪ್ರಕಾಶ್ ರಾಜ್ ಈ ರೀತಿ ವ್ಯಂಗ್ಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

ವಿಶ್ವದಲ್ಲೇ ಭಾರತ ತಾನು ಅಗ್ರಗಣ್ಯ ಸ್ಥಾನದಲ್ಲಿದ್ದೇನೆ ಎಂದು ನಿರೂಪಿಸಿರುವ ಮಹತ್ತರ ದಿನ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ಸಂಸದರ ಜೊತೆ ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ನಾವು ಸ್ವಾತಂತ್ರ್ಯವನ್ನು ಪಡೆದು 75 ವರ್ಷ ದಾಟಿ ಅಮೃತ ಕಾಲದ ಕಡೆಗೆ ಸಾಗುತ್ತಿದ್ದೇವೆ. ಇಡೀ ವಿಶ್ವ ನಮ್ಮನ್ನು ಬಹಳ ತೀಕ್ಷ್ಣವಾಗಿ ಕಂಡಂತಹ ದಿನ. ಅಂತಹ ಜಗತ್ತಿನ ಮುಂದೆ ಅಗ್ರಗಣ್ಯವಾಗಿ ನಿಲ್ಲುವಂತಹ ಕೆಲಸ ಮಾಡಬೇಕು. ಕಳೆದ ಭಾರೀ ಚಂದ್ರಯಾನ ಫೇಲ್ಯೂ ಆದಾಗ, ಆ ಸಂದರ್ಭದಲ್ಲಿ ವಿಜ್ಞಾನಿ ಅತ್ತಾಗ ಮೋದಿ ಅವರು ಭುಜ ತಟ್ಟಿ ಮುಂದೆ ಸಾಗಿ ಎಂದು ಹೇಳಿದ್ದರು. ಆದರೆ ಇದರ ಬಗ್ಗೆ ಕೆಲವರು ಹಿಂದೆ ಕುಚೇಷ್ಟೇ ಮಾಡಿದ್ದಾರೆ. ಅವರು ನಾಗರಿಕರೋ ಅಥವಾ ಅನಾಗರಿಕರೋ ಎಂದು ಗೊತ್ತಾಗುತ್ತಿಲ್ಲ. ಇದರ ಬಗ್ಗೆ ಅರಿವು ಮೂಡಬೇಕು. ತುಂಬಾ ಜನ ಓದಿದ್ದಾರೆ. ಆದರೆ ಅವರೆಲ್ಲ ದಡ್ಡರು ಎಂದು ಹೇಳುವ ಮೂಲಕ ನಟ ಪ್ರಕಾಶ್ ರಾಜ್​ಗೆ ತಿರುಗೇಟು ಕೊಟ್ಟಿದ್ದಾರೆ.

ಸದ್ಯ ಭಾರತದ ಚಂದ್ರಯಾನ 3 ಯಶಸ್ವಿಗಾಗಿ ಇಡೀ ದೇಶವೇ ಎದುರು ನೋಡುತ್ತಿತ್ತು. ಈಗ ಯಾವುದೇ ಅಡೆತಡೆಗಳು ಬಾರದಂತೆ ನಿರ್ವಿಘ್ನವಾಗಿ ಚಂದ್ರಯಾನಕ್ಕೆ ಯಶಸ್ಸು ಸಿಕ್ಕಿದೆ. ಇಂದು 140 ಕೋಟಿ ಭಾರತೀಯರ ಕನಸು ನನಸಾದ ಕ್ಷಣ. ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿ ಆಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತಿಹಾಸ ನಿರ್ಮಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಬಗ್ಗೆ ವಂಗ್ಯವಾಡಿದ್ದ ಪ್ರಕಾಶ್​ ರಾಜ್​ಗೆ ನಟ ಜಗ್ಗೇಶ್​​ ಫುಲ್​​ ಕ್ಲಾಸ್​​; ಏನಂದ್ರು..?

https://newsfirstlive.com/wp-content/uploads/2023/08/actor-jagesh.jpg

Load More