ರಾಕಿಂಗ್ ಸ್ಟಾರ್ ಯಶ್ಗೆ ಕ್ಷಮೆ ಕೇಳಿದ ತಮಿಳು ನಟ ಜೈ ಆಕಾಶ್!
ಯಶ್ ಸಿನಿಮಾ ಜರ್ನಿ ಬಗ್ಗೆ ಹಗುರವಾಗಿ ಮಾತಾಡಿದ ಜೈ ಆಕಾಶ್
ತಮಿಳು ನಟ ಜೈ ಆಕಾಶ್ ವಿರುದ್ಧ ಯಶ್ ಅಭಿಮಾನಿಗಳು ಕಿಡಿ
ಸ್ಯಾಂಡಲ್ವುಡ್ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ಗೆ ತಮಿಳು ನಟ ಕ್ಷಮೆ ಕೇಳಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ನಟ ಯಶ್ ಸಿನಿಮಾ ಜರ್ನಿ ಬಗ್ಗೆ ತಮಿಳು ನಟ ಜೈ ಆಕಾಶ್ ಹಗುರವಾಗಿ ಮಾತನಾಡಿದ್ದರು. ಯಶ್ ತನಗೆ ಸಿನಿಮಾ ಅವಕಾಶ ಇಲ್ಲವೆಂದು ನನ್ನ ಬಳಿ ಕಣ್ಣೀರಿಟ್ಟಿದ್ದರು. ನಾನು ಯಶ್ಗೆ ಊಟ ಹಾಕಿ ಕಳಿಸಿದ್ದೆ ಎಂದು ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ನಟನ ಈ ಹೇಳಿಕೆಯ ಬೆನ್ನಲ್ಲೇ ಯಾಶ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.
View this post on Instagram
ಇದೀಗ ನಟ ಜೈ ಆಕಾಶ್ ವಿಡಿಯೋ ಮಾಡುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ. ನಾನು ಯಶ್ ಜಂಬದ ಹುಡುಗಿ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವು. ನನ್ನ ತಮ್ಮನಾಗಿ ಯಶ್ ಸಿನಿಮಾದಲ್ಲಿ ನಟಿಸಿದ್ದರು. ಪತ್ರಕರ್ತರ ಪ್ರಶ್ನೆಗಳಿಗೆ ಮಾತನಾಡಿದ ವಿಡಿಯೋವನ್ನು ಹೀಗೆ ಕಟ್ ಮಾಡಿ ವೈರಲ್ ಮಾಡಿದ್ದಾರೆ. ಯಶ್ ನನಗೆ ತಮ್ಮ ಇದ್ದಂತೆ. ನಾನು ಯಶ್ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಹೀಗಾಗಿ ನಾನು ಯಶ್ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ