DIGಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ ಮಾಡಿರುವ ಪತ್ನಿ ವಿಜಯಲಕ್ಷ್ಮಿ
ಜೈಲಿನ ಡಾಕ್ಟರ್ ಮೂಲಕ ಮೆಡಿಕಲ್ ರಿಪೋರ್ಟ್ ಪರಿಶೀಲನೆ
ಜೈಲಿನಲ್ಲಿ ಕೆಲವು ಮಾತ್ರೆಗಳಿಗೂ ಮನವಿ ಮಾಡಿರುವ ಆರೋಪಿ ದರ್ಶನ್!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆದ 3 ದಿನದ ಬಳಿಕ ಆರೋಪಿ ದರ್ಶನ್ ಅವರ ಮೆಡಿಕಲ್ ಚೆಕಪ್ ಮಾಡಿಸಲಾಗುತ್ತಿದೆ.
ಇದನ್ನೂ ಓದಿ: ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!
ಬಳ್ಳಾರಿ ಸೆಂಟ್ರಲ್ ಜೈಲು ಸೇರಿದ ಬಳಿಕ ದರ್ಶನ್ ಅವರು ಬೆನ್ನು ನೋವಿನ ಸರ್ಜಿಕಲ್ ಚೇರ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳು ಇಂದು ದರ್ಶನ್ ಅವರ ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಜೈಲಿನ ಡಾಕ್ಟರ್ ಮೂಲಕ ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.
ಜೈಲಲ್ಲೇ ಬೆನ್ನು ನೋವಿನ ಚೆಕಪ್!
ನಿನ್ನೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ದರ್ಶನ್ಗೆ ಬೆನ್ನು ನೋವು ಇರುವ ಹಿನ್ನೆಲೆಯಲ್ಲಿ ಡಿಐಜಿ ಅವರಿಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದರು. ದರ್ಶನ್ ಕುಟುಂಬಸ್ಥರ ಮನವಿ ಹಿನ್ನೆಲೆಯಲ್ಲಿ ಇದೀಗ ಜೈಲಾಧಿಕಾರಿಗಳು ಆ ಮೆಡಿಕಲ್ ರಿಪೋರ್ಟ್ ಅನ್ನು ಪರಿಶೀಲನೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
ದರ್ಶನ್ ಬೆನ್ನು ನೋವಿನ ತೀವ್ರತೆ ಬಗ್ಗೆ ಸಲ್ಲಿಸಿರುವ ಮೆಡಿಕಲ್ ರಿಪೋರ್ಟ್ ಅನ್ನು ಜೈಲಿನ ಡಾಕ್ಟರ್‌ಗಳೇ ಪರಿಶೀಲನೆ ನಡೆಸಲಿದ್ದಾರೆ. ವೈದ್ಯಕೀಯ ತಪಾಸಣೆಯ ಬಳಿಕ ಮೆಡಿಕಲ್ ರಿಪೋರ್ಟ್ ಅನ್ನು DIG ಅವರಿಗೆ ಸಲ್ಲಿಕೆ ಮಾಡಲಿದ್ದಾರೆ.
ಜೈಲಿನ ಒಳಗೆ ದರ್ಶನ್ ಅವರಿಗೂ ಸಾಮಾನ್ಯ ಕೈದಿಗಳ ರೀತಿಯಲ್ಲೆ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಕೂರಲು ಸರ್ಜಿಕಲ್ ಚೇರ್ ಜೊತೆಗೆ ಆರೋಪಿ ದರ್ಶನ್ ಅವರು ಕೆಲವು ಮಾತ್ರೆಗಳಿಗೂ ಮನವಿ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಇಲ್ಲಿ ಸರ್ಕಾರಿ ಮೆಡಿಸಿನ್‌ಗಳು ಅಷ್ಟೇ ಸಿಗೋದು. ಡಾಕ್ಟರ್ ಚೆಕಪ್ ಬಳಿಕ ಮೆಡಿಕಲ್ ರಿಪೋರ್ಟ್ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮೂರು ದಿನದ ಬಳಿಕ ಮತ್ತದೇ ಟೀ ಶರ್ಟ್!
ಕೊಲೆ ಆರೋಪಿ ದರ್ಶನ್ ಅವರನ್ನು ಕಳೆದ ಆಗಸ್ಟ್ 29ರಂದು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ಅಂದು ಪೂಮಾ ಬ್ರ್ಯಾಂಡ್ ಟೀ ಶರ್ಟ್ ತೊಟ್ಟು ಬಂದಿದ್ದ ದರ್ಶನ್ ಅವರು 3 ದಿನದ ಬಳಿಕವೂ ಮತ್ತದೇ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ