Advertisment

ಡಿಸೆಂಬರ್ 12ಕ್ಕೆ ರಜಿನಿಕಾಂತ್​ಗೆ 74ನೇ ಹುಟ್ಟುಹಬ್ಬದ ಸಂಭ್ರಮ; ಜೈಲರ್ ಟೀಂ ಕೊಡಲಿರುವ ಗಿಫ್ಟ್ ಏನು ಗೊತ್ತಾ?

author-image
Gopal Kulkarni
Updated On
ಡಿಸೆಂಬರ್ 12ಕ್ಕೆ ರಜಿನಿಕಾಂತ್​ಗೆ 74ನೇ ಹುಟ್ಟುಹಬ್ಬದ ಸಂಭ್ರಮ; ಜೈಲರ್ ಟೀಂ ಕೊಡಲಿರುವ ಗಿಫ್ಟ್ ಏನು ಗೊತ್ತಾ?
Advertisment
  • ಡಿಸೆಂಬರ್ 12ಕ್ಕೆ ರಜಿನಿಕಾಂತ್​ಗೆ 74ನೇ ಹುಟ್ಟು ಹಬ್ಬದ ಸಂಭ್ರಮ
  • ಜೈಲರ್ ಸಿನಿಮಾದ ಪ್ರೋಮೋ ಅಂದೇ ಬಿಡುಗಡೆಯಾಗಲಿದೆಯಾ?
  • ಕೂಲಿ ಸಿನಿಮಾ ತಂಡ ಮಾಡಿಕೊಂಡಿರುವ ಪ್ಲಾನ್ ಏನು ಗೊತ್ತಾ?

ಸೂಪರ್​ಸ್ಟಾರ್ ರಜಿನಿಕಾಂತ್​ ಡಿಸೆಂಬರ್ 12 ರಂದು ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಂದ ಕಾಲಿವುಡ್ ಸಿನಿಮಾ ಅಂಗಳದ ಮಾಹಿತಿ ಪ್ರಕಾರ ಜೈಲರ್​ ಟೀಂನಿಂದ ಅಂದು ಜೈಲರ್ 2 ಸಿನಿಮಾದ ಪ್ರೋಮೋ ಶೂಟ್​ ಮಿಣುಕು ದೃಶ್ಯವನ್ನು ಬಿಡುಗಡೆ ಮಾಡುವುದಾಗಿ ಹೇಳಿಲಾಗಿದೆ.

Advertisment

ಸಿನಿಮಾ ತಂಡ ಈ ಬಗ್ಗೆ ಅಧಿಕೃತವಾಗಿ ಇನ್ನೂ ಕೂಡ ಏನು ಹೇಳಿಲ್ಲ. ಆದ್ರೆ ಒಂದು ಎಕ್ಸ್​​ ಖಾತೆಯಲ್ಲಿ ಬಂದ ಪೋಸ್ಟ್ ಈ ಒಂದು ವಿಷಯವನ್ನು ಬಹಿರಂಗಗೊಳಿಸಿದೆ. ಡಿಸೆಂಬರ್ 5 ರಂದು ಸಿನಿಮಾದ ಪ್ರೋಮೋ ಶೂಟ್ ನಡೆಯಲಿದ್ದು. ಡಿಸೆಂಬರ್ 12, ರಜಿನಿ ಬರ್ತ್​ಡೇ ದಿನದಂದು ಸಿನಿಮಾ ಅದೇ ಪ್ರೋಮೋವನ್ನು ಬಿಡುಗಡೆ ಮಾಡಲು ನಿರ್ದೇಶಕ ನೆಲ್ಸನ್ ದಿಲಿಪ್​ಕುಮಾರ್ ನಿರ್ಧಾರ ಮಾಡಿದ್ದಾರೆ ಎಂದು ಲಕ್ಷ್ಮಿಕಾಂತ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:47ನೇ ವಯಸ್ಸಿನಲ್ಲಿ ಮದುವೆ ಆದ ಬಾಹುಬಾಲಿ ಖ್ಯಾತಿಯ ನಟ; ಹುಡುಗಿ ನಿಮಗೂ ಗೊತ್ತು!

ಇನ್ನು ರಜಿನಿಕಾಂತ್ ಕೂಲಿ ಸಿನಿಮಾದಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ಕೂಲಿ ಸಿನಿಮಾ ತಂಡವೂ ಕೂಡ ಡಿಸೆಂಬರ್ 12 ರಂದು ರಜಿನಿಕಾಂತ್ ಅಭಿಮಾನಿಗಳಿಗೆ ವಿಶೇಷವಾದದ್ದೇನಾದರೂ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisment

publive-image

ಇದೇ ವರ್ಷ ರಜಿನಿಯ ಎರಡು ಸಿನಿಮಾಗಳು ಅನೌನ್ಸ್ ಆಗಿವೆ. ಒಂದು ಕೂಲಿ ಹಾಗೂ ಜೈಲರ್ ಸಿಕ್ವೇಲ್ ಸಿನಿಮಾವನ್ನು ತಯಾರಿಸಲು ಜೈಲರ್ ಟೀಂ ಸಿದ್ಧತೆ ನಡೆಸಿದೆ. 2023ರಲ್ಲಿ ತೆರೆಕಂಡ ಜೈಲರ್ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಹಲ್​ಚಲ್ ಸೃಷ್ಟಿಸಿತ್ತು. ನಿವೃತ್ತ ಪೊಲೀಸ್ ಅಧಿಕಾರಿಯಾಗಿ ರಜಿನಿ ಇದರಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ವಿಶ್ವಾದ್ಯಂತ ಒಟ್ಟು 600 ಕೋಟಿ ರೂಪಾಯಿಯನ್ನು ಬಾಚಿಕೊಂಡಿತ್ತು.

publive-image

ಈಗಾಗಲೇ ಜೈಲರ್ 2 ಸಿನಿಮಾ ಶುರುವಾಗುವ ಮುನ್ಸೂಚನೆ ಕೊಟ್ಟಿರುವ ಸನ್ ಪಿಕ್ಚರ್, ಇಂದು ಜೈಲರ್ 2 ಟೆಸ್ಟ್ ನಡೆದಿದ್ದು, ಇಷ್ಟರಲ್ಲಿಯೇ ಅಧಿಕೃತವಾಗಿ ಸಿನಿಮಾ ಸೆಟ್ಟೇರಲಿದೆ ಎಂದು ಕೂಡ ಹೇಳಲಾಗಿದೆ.ಸಿನಿಮಾದಲ್ಲಿ ಶಿವರಾಜ್​ಕುಮಾರ್, ಮೋಹನ್ ಲಾಲ್, ಜಾಕಿಶ್ರಾಫ್ ಪಾತ್ರಗಳು ಕಂಟಿನ್ಯೂ ಆಗುವ ಸೂಚನೆಯನ್ನೂ ಸಿನಿಮಾ ತಂಡ ನೀಡಿದ್ದು. ಡಿಸೆಂಬರ್​ 2025ಕ್ಕೆ ಜೈಲರ್ 2 ಸಿನಿಮಾ ತೆರೆಕಾಣುವ ಎಲ್ಲಾ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment