newsfirstkannada.com

ರಿಲೀಸ್​ಗೆ ಮುನ್ನ ಜೈಲರ್​​ಗೆ ಶುರುವಾಯ್ತು ಕಂಟಕ; ಇಲ್ಲಿದೆ ಟಾಪ್​​ ಸಿನಿಮಾ ಸುದ್ದಿಗಳು!

Share :

Published July 17, 2023 at 9:06pm

    ಪಠಾಣ್ ಕಲೆಕ್ಷನ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಟಿ ಕಾಜೋಲ್​

    ಮೇಘನಾ ರಾಜ್ ‘ತತ್ಸಮ ತದ್ಭವ’ ಸಿನಿಮಾದ ಟೀಸರ್​ ರಿಲೀಸ್..!

    ಸೂಪರ್​ ಸ್ಟಾರ್​ ರಜನಿಕಾಂತ್ ನಟನೆಯ ಜೈಲರ್ ಚಿತ್ರಕ್ಕೆ ಕಂಟಕ..!

‘ತತ್ಸಮ ತದ್ಭವ’ ಟೀಸರ್​ ರಿಲೀಸ್

ಮೇಘನಾ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ತತ್ಸಮ ತದ್ಭವ ಸಿನಿಮಾದ ಟೀಸರ್​ ರಿಲೀಸ್ ಆಗಿದೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನ ವಿಶಾಲ್ ಆತ್ರೆಯಾ ನಿರ್ದೇಶನ ಮಾಡ್ತಿದ್ದು, ಪನ್ನಾಗಭರಣ ಅಂಡ್ ಟೀಮ್ ನಿರ್ಮಾಣ ಮಾಡಿದೆ. ವಿಶೇಷ ಪಾತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದು, ಸದ್ಯ ಚಿತ್ರದ ಟೀಸರ್​ ಗಮನ ಸೆಳೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ‘ತತ್ಸಮ ತದ್ಭವ’ ಆಗಸ್ಟ್​ ತಿಂಗಳು ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ.

‘ಕಾವಾಲಯ್ಯ’ ಹೊಸ ರೆಕಾರ್ಡ್​

ತಮನ್ನಾ ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಕಾಣಿಸಿಕೊಂಡಿರುವ ಕಾವಾಲಯ್ಯ ಹಾಡು ಹೊಸ ದಾಖಲೆ ಮಾಡಿದೆ. ಎರಡು ವಾರಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದ ಕಾವಾಲಯ್ಯ ಸಾಂಗ್ ಸೋಶಿಯಲ್ ಮೀಡಿಯಾದ​ ಸೆನ್ಸೇಷನ್ ಕ್ರಿಯೇಟ್ ಆಗಿದ್ದು, ಇನ್​ಸ್ಟಾಗ್ರಾಮ್​​ ರೀಲ್ಸ್​ನಲ್ಲಿ ಅತಿ ವೇಗವಾಗಿ 1 ಲಕ್ಷ ರೀಲ್ಸ್​ ಪೋಸ್ಟ್​ ಆಗಿರುವ ಸಾಂಗ್ ಎನಿಸಿಕೊಂಡಿದೆಯಂತೆ. ಕೇವಲ 9 ದಿನದಲ್ಲಿ ಕಾವಾಲಯ್ಯ ಹಾಡಿನ 1 ಲಕ್ಷ ರೀಲ್ಸ್​ ಅಪ್​ಲೌಡ್​ ಆಗಿದೆಯಂತೆ.

‘ಜೈಲರ್​​’ಗೆ ಎದುರಾಯ್ತು ಸಮಸ್ಯೆ

ಸೂಪರ್​ಸ್ಟಾರ್​ ರಜಿನಿಕಾಂತ್ ನಟನೆಯ ಜೈಲರ್ ಚಿತ್ರಕ್ಕೆ ಟೈಟಲ್ ಸಮಸ್ಯೆ ಎದುರಾಗಿದೆ. ಸನ್ ಪಿಚ್ಚರ್ಸ್​ ನಿರ್ಮಾಣದ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ತಯಾರಾಗಿರುವ ಜೈಲರ್ ಆಗಸ್ಟ್ 10ಕ್ಕೆ ಥಿಯೇಟರ್​ಗೆ ಬರ್ತಿದೆ. ಈ ನಡುವೆ ಕೇರಳದ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ ಜೈಲರ್ ಟೈಟಲ್ ನನ್ನದು, ಈ ಹೆಸರಿನಲ್ಲಿ ಸಿನಿಮಾ ಮಾಡ್ತಿದ್ದೇನೆ, ಮಲಯಾಳಂ ಭಾಷೆಯಲ್ಲಿ ಹೆಸರು ಬದಲಿಸಿ ಬಿಡುಗಡೆ ಮಾಡಲಿ ಅಂತ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಶಾರುಖ್ ಖಾನ್ ಕಾಲೆಳೆದ ಕಾಜೋಲ್!

ಪಠಾಣ್ ಸಿನಿಮಾದ ಕಲೆಕ್ಷನ್​ ಬಗ್ಗೆ ಬಾಲಿವುಡ್ ನಟಿ ಕಾಜೋಲ್​ ಅನುಮಾನ ವ್ಯಕ್ತಪಡಿಸಿದ್ದಾರೆ. ಜನವರಿಯಲ್ಲಿ ತೆರೆಗೆ ಬಂದಿದ್ದ ಪಠಾಣ್ ಸಿನಿಮಾ ವರ್ಲ್ಡ್​ವೈಡ್​ 1000 ಕೋಟಿ ಗಳಿಸಿರುವ ವರದಿಯಾಗಿದೆ. ಇತ್ತೀಚೆಗಿನ ಸಂದರ್ಶನದಲ್ಲಿ ‘ಶಾರುಖ್ ಖಾನ್ ಅವರಿಗೆ ಏನಾದರೂ ಕೇಳಬೇಕು ಅಂತ ನಿಮಗೆ ಅನಿಸ್ತಿದ್ಯಾ?’ ಎಂದು ನಿರೂಪಕರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಕಾಜೋಲ್ ‘ಪಠಾಣ್ ಸಿನಿಮಾ ನಿಜವಾಗಿಯೂ ಕಲೆಕ್ಷನ್ ಎಷ್ಟು ಮಾಡಿತು? ಎಂದು ವ್ಯಂಗ್ಯ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರಿಲೀಸ್​ಗೆ ಮುನ್ನ ಜೈಲರ್​​ಗೆ ಶುರುವಾಯ್ತು ಕಂಟಕ; ಇಲ್ಲಿದೆ ಟಾಪ್​​ ಸಿನಿಮಾ ಸುದ್ದಿಗಳು!

https://newsfirstlive.com/wp-content/uploads/2023/07/jailer-movie-1.jpg

Load More