newsfirstkannada.com

ರಿಲೀಸ್​ಗೂ ಮೊದಲೇ ಹವಾ ಎಬ್ಬಿಸಿದ ಜೈಲರ್.. ಫಸ್ಟ್ ಡೇ ಫಸ್ಟ್ ಶೋ ರಜಿನಿ ನೋಡೋ ತಯಾರಿ ಹೇಗಿದೆ ಗೊತ್ತಾ?

Share :

09-08-2023

    ಫಸ್ಟ್ ಡೇ ಜೈಲರ್ ಸಿನಿಮಾದ ಟಿಕೆಟ್ ಸಿಗೋದು ಸುಲಭವಲ್ಲ!

    ಸೂಪರ್​ ಸ್ಟಾರ್​ ರಜಿನಿಕಾಂತ್ ಅಭಿಮಾನಿಗಳಿಗೆ ನಾಳೆ ಹಬ್ಬದೂಟ

    ತಮಿಳುನಾಡು, ಆಂಧ್ರದಲ್ಲಿ ಪ್ರೀ ರಿಲೀಸ್ ಅಬ್ಬರ ಬಲು ಜೋರು

ಸೂಪರ್​ ಸ್ಟಾರ್​ ರಜಿನಿಕಾಂತ್ ಅವರ ಅಭಿಮಾನಿಗಳಿಗೆ ನಾಳೆ ನಿಜಕ್ಕೂ ಹಬ್ಬ. ಏಕೆಂದರೆ ತಲೈವಾ ಹೊಸ ಸಿನಿಮಾ ಥಿಯೇಟರ್​ಗೆ ಬಂದರೆ ಸಾಕು ನೂಕು ನುಗ್ಗಲು, ಹೌಸ್​ ಫುಲ್ ಶೋ ಪಕ್ಕಾ. 72 ನೇ ವಯಸ್ಸಿನಲ್ಲೂ ತೆರೆ ಮೇಲೆ ಮಿಂಚುವ ರಜಿನಿ ಹೊಸ ಸ್ಟೈಲ್​, ಅದ್ಬುತ ನಟನೆಗೆ ಎಂಥವರೂ ಕೂಡ ಫಿದಾ ಆಗಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ​ ಫ್ಯಾನ್ಸ್ ಬಳಗ​​ ಸೂಪರ್​ ಸ್ಟಾರ್​ಗೆ ಇದ್ದಾರೆ. ಇದೀಗ ಇಷ್ಟು ದಿನ ತುದಿಗಾಲಿನ ಮೇಲೆ ಕಾದು ಕುಳಿತ ಸೂಪರ್​ ಸ್ಟಾರ್​ ರಜಿನಿಕಾಂತ್ ಫ್ಯಾನ್ಸ್​ಗೆ ನಾಳೆಗೋಸ್ಕರ ಕಾಯುತ್ತಿದ್ದಾರೆ.

ಹೌದು ನಾಳೆ ವಿಶ್ವದಾದ್ಯಂತ ಬಹುನಿರೀಕ್ಷಿತ ಜೈಲರ್​ ಸಿನಿಮಾ ರಿಲೀಸ್ ಆಗುತ್ತಿದೆ. ತಲೈವಾ ಹೊಸ ಲುಕ್​​ನಲ್ಲಿ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಜೈಲರ್ ಸಿನಿಮಾದ ಬಹುತೇಕ ಟಿಕೆಟ್​ಗಳು ಮಾರಾಟವಾಗಿವೆ. ಅದರಲ್ಲೂ ತಮಿಳು ನಾಡು ಮೂಲದ ಕಂಪನಿಯೊಂದು ತನ್ನ ಸಿಬ್ಬಂದಿಗೆ ಉಚಿತ ಟಿಕೆಟ್ ನೀಡುವುದಾಗಿ ಘೋಷಣೆ ಮಾಡಿದೆ. ಮತ್ತೊಂದು ಕಡೆ ಜೈಲರ್ ಚಿತ್ರವನ್ನು ನೋಡಲು UNO ಆಕ್ವಾ ಕೇರ್ ಕಂಪನಿಯ ಸಿಬ್ಬಂದಿಗೆ ರಜೆ ಘೋಷಿಸಿದ್ದಾರೆ. ಜೊತೆಗೆ ಬೆಂಗಳೂರು, ಚೆನ್ನೈ ಸೇರಿದಂತೆ 8 ಬ್ರ್ಯಾಂಚ್​ಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

ನಾಳೆ ವಿಶ್ವಾದ್ಯಂತ ಜೈಲರ್ ಸಿನಿಮಾ ರಿಲೀಸ್​ ಆಗುತ್ತಿದೆ. ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಜೈಲರ್ ಸಿನಿಮಾ ತೆರೆಗೆ ಅಪ್ಪಳಿಸಲಿದ್ದು, ರಜನಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ವೇಟ್​ ಮಾಡುತ್ತಿದ್ದಾರೆ. ತಮಿಳುನಾಡು, ಆಂಧ್ರದಲ್ಲಿ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿದ್ದು, ಒಟ್ಟಾರೆಯಾಗಿ 12 ಕೋಟಿ ರೂಪಾಯಿ ಕೇವಲ ಪ್ರೀ ರಿಲೀಸ್ ಬಿಸಿನೆಸ್ ಮಾಡಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಇನ್ನು, ಒಮೇನ್ ​ದೇಶದಲ್ಲಿ ‘ಜೈಲರ್’ ಫಸ್ಟ್​ ಡೇ ಫಸ್ಟ್​ ಶೋವನ್ನು ಮಸ್ಕತ್ ಮತ್ತು ಸೊಹಾರ್‌ನಲ್ಲಿ ನಸುಕಿನ ಜಾವ 4.30ಕ್ಕೆ​ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಒಮೇನ್ ​ದೇಶದಲ್ಲಿಯೂ ರಜನಿಕಾಂತ್ ಅವರ ಬಹುದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ ನಸುಕಿನ ಜಾವ 4.30ಕ್ಕೆ​ ರಿಲೀಸ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಬಿಡುಗಡೆಗೊಂಡ ಕಾವಲಯ್ಯ ಹಾಡು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್​ ಮಾಡಿತ್ತು. ಮಿಲ್ಕಿ ಬ್ಯೂಟಿ ತಮನ್ನಾ ಈ ಹಾಡಿಗೆ ಭರ್ಜರಿ ಡ್ಯಾನ್ಸ್​ ಕೂಡ ಮಾಡಿದ್ದರು. ಈ ಹಾಡು ಯೂಟ್ಯೂಬ್‌​ನಲ್ಲಿ 112 ಮಿಲಿಯನ್​​ ವೀವ್ಸ್​​ ಪಡೆದುಕೊಂಡಿದೆ. ದಿಲೀಪ್​ ಕುಮಾರ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಕಲಾನಿಧಿ ಮಾರನ್​ ಜೈಲರ್​ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್​ವುಡ್ ಖ್ಯಾತ ನಟ​ ಶಿವರಾಜ್​ಕುಮಾರ್​, ಮಾಲಿವುಡ್​ ಮೋಹನ್​ಲಾಲ್​, ವಿನಾಯಕನ್​, ರಮ್ಯಾ ಕೃಷ್ಣ ಸೇರಿ ಅನೇಕ ತಾರಾಗಣ ಸಿನಿಮಾದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಿಲೀಸ್​ಗೂ ಮೊದಲೇ ಹವಾ ಎಬ್ಬಿಸಿದ ಜೈಲರ್.. ಫಸ್ಟ್ ಡೇ ಫಸ್ಟ್ ಶೋ ರಜಿನಿ ನೋಡೋ ತಯಾರಿ ಹೇಗಿದೆ ಗೊತ್ತಾ?

https://newsfirstlive.com/wp-content/uploads/2023/08/jailar-2.jpg

Load More