newsfirstkannada.com

‘ಲಿಯೋ’ ಪಾರ್ಟ್ 2​ ಪಕ್ಕಾನಾ.. ಕೌಸಲ್ಯಾ ಸುಪ್ರಜಾ ರಾಮನಿಗೆ ಕಷ್ಟ ತಂದಿಟ್ಟ ಜೈಲರ್; ಇಲ್ಲಿವೆ ಟಾಪ್ 5​ ಸಿನಿ ಸುದ್ದಿಗಳು

Share :

09-08-2023

    "ಸಪ್ತ ಸಾಗರದಾಚೆ ಎಲ್ಲೋ" ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ

    ಪಬ್ ಸಾಂಗ್​ನಲ್ಲಿ ಅಣ್ಣಾವ್ರ ಮೊಮ್ಮಗಳು ಧನ್ಯ ರಾಮಕುಮಾರ್

    ಡಾನ್-3ನಲ್ಲಿ ಶಾರೂಖ್ ಜಾಗದಲ್ಲಿ ರಣ್ವೀರ್ ಸಿಂಗ್ ಕಮಾಲ್

ಕೌಸಲ್ಯಾ ಸುಪ್ರಜಾ ರಾಮನಿಗೆ ಕಷ್ಟ ತಂದಿಟ್ಟ ಜೈಲರ್!

ಡಾರ್ಲಿಂಗ್ ಕೃಷ್ಣ ನಟನೆಯ ಕೌಸಲ್ಯಾ ಸುಪ್ರಜಾ ರಾಮ ಚಿತ್ರ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಜೈಲರ್ ಸಿನಿಮಾ ಆಗಸ್ಟ್​ 10ಕ್ಕೆ ರಿಲೀಸ್ ಆಗ್ತಿದ್ದು, ರಾಜ್ಯದಲ್ಲಿ ಕೌಸಲ್ಯಾ ಸುಪ್ರಜಾ ರಾಮ ಚಿತ್ರವನ್ನ ಥಿಯೇಟರ್​ನಿಂದ ಎತ್ತಂಗಡಿ ಮಾಡಲಾಗ್ತಿದೆಯಂತೆ. ಈ ಕುರಿತು ನಿರ್ದೇಶಕ ಶಶಾಂಕ್ ಬೇಸರ ವ್ಯಕ್ತಪಡಿಸಿ ಸಿನಿಮಾ ಅನ್ನು ಉಳಿಸಿ ಅಂತಾ ಮನವಿ ಮಾಡಿದ್ದಾರೆ.

‘ಲಿಯೋ’ ಪಾರ್ಟ್ 2​ ಖಚಿತ!

ತಮಿಳು ನಟ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಯಾರಾಗ್ತಿರುವ ಲಿಯೋ ಮೇಕಿಂಗ್​ನಿಂದಲೇ ಭಾರಿ ಕುತೂಹಲ ಸೃಷ್ಟಿಸಿದೆ. ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಸೆಪ್ಟೆಂಬರ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಆದ್ರೀಗ ಲಿಯೋ ಸಿನಿಮಾ ಎರಡು ಭಾಗಗಳಾಗಿ ಬರಲಿದೆ ಎಂಬ ಸುದ್ದಿ ಥ್ರಿಲ್ ಹೆಚ್ಚಿಸಿದೆ.

“ಸಪ್ತ ಸಾಗರದಾಚೆ ಎಲ್ಲೋ” ಟೈಟಲ್ ಟ್ರ್ಯಾಕ್

ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ಮಾಣ ಮಾಡಿರುವ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಹಾಗೂ ಧನಂಜಯ್ ರಂಜನ್ ಬರೆದಿರುವ ಈ ಶೀರ್ಷಿಕೆ ಗೀತೆಯನ್ನು ಕಪಿಲ್ ಕಪಿಲನ್ ಹಾಡಿದ್ದಾರೆ. ಸಾಂಗ್ ರಿಲೀಸ್ ಆಗಿರುವ 16 ಗಂಟೆಯಲ್ಲಿ ಹತ್ ಹತ್ರಾ 5 ಲಕ್ಷ ವೀಕ್ಷಣೆ ಕಂಡಿದೆ. ಅಂದ್ಹಾಗೆ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗ್ತಿದ್ದು, ಮೊದಲ ಭಾಗ ಸೆಪ್ಟೆಂಬರ್ 1 ರಿಲೀಸ್ ಆಗಲಿದೆ.

ಪಬ್ ಸಾಂಗ್​ನಲ್ಲಿ ಅಣ್ಣಾವ್ರ ಮೊಮ್ಮಗಳು

ದಿಗಂತ್ ಹಾಗೂ ಧನ್ಯಾ ರಾಮ್ ಕುಮಾರ್ ನಟನೆಯ ‘ಜಡ್ಜ್​ಮೆಂಟ್’​ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇತ್ತೀಚೆಗಷ್ಟೇ ಸ್ಪೆಷಲ್ ಹಾಡೊಂದರ ಚಿತ್ರೀಕರಣ ಮಾಡಲಾಗಿದೆ. ಗುರುರಾಜ ಕುಲಕರ್ಣಿ ಈ ಚಿತ್ರ ನಿರ್ದೇಶಿಸ್ತಿದ್ದು, ಇಂದಿನ ಯುವ ಜನತೆಯ ಮಧ್ಯೆ ಟ್ರೆಂಡ್ ಆಗುವ ಪಬ್ ಸಾಂಗ್​ ಮಾಡಿದ್ದಾರಂತೆ. ಈ ಹಾಡಿನಲ್ಲಿ ದಿಗಂತ್ ಮತ್ತು ಧನ್ಯ ರಾಮಕುಮಾರ್ ಹೆಜ್ಜೆ ಹಾಕಿದ್ದು, ಸುಮಾರು 25 ಜನ ನೃತ್ಯ ಕಲಾವಿದರು ಮತ್ತು 50 ಜನ ಸಹ ಕಲಾವಿದರನ್ನು ಬಳಸಿಕೊಳ್ಳಲಾಗಿದೆಯಂತೆ.

ಡಾನ್-3 ಸ್ಟಾರ್ಟ್​.. ರಣ್ವೀರ್ ಸಿಂಗ್ ನಾಯಕ!

ಬಾಲಿವುಡ್​ನಲ್ಲಿ ಡಾನ್-3 ಸಿನಿಮಾ ಅನೌನ್ಸ್​ ಆಗಿದ್ದು, ಶಾರುಖ್ ಖಾನ್ ಬದಲು ನಟ ರಣ್ವೀರ್ ಸಿಂಗ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಫರಾನ್ ಅಖ್ತರ್ ನಿರ್ದೇಶನದಲ್ಲಿ ಈ ಹಿಂದೆ ಡಾನ್ ಮತ್ತು ಡಾನ್ 2 ಸಿನಿಮಾಗಳು ಬಂದಿದ್ದವು. ಈ ಎರಡು ಚಿತ್ರದಲ್ಲೂ ಶಾರುಖ್ ಹೀರೋ ಆಗಿದ್ದರು. ಇದೀಗ ಡಾನ್ 3 ಘೋಷಣೆ ಮಾಡಿದ್ದು, ರಣ್ವೀರ್ ಸಿಂಗ್ ಎಂಟ್ರಿಯಾಗಿದ್ದಾರೆ. ಡಾನ್ 3 ಫಸ್ಟ್​ ಲುಕ್ ಸಹ ಬಿಡುಗಡೆಯಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ಲಿಯೋ’ ಪಾರ್ಟ್ 2​ ಪಕ್ಕಾನಾ.. ಕೌಸಲ್ಯಾ ಸುಪ್ರಜಾ ರಾಮನಿಗೆ ಕಷ್ಟ ತಂದಿಟ್ಟ ಜೈಲರ್; ಇಲ್ಲಿವೆ ಟಾಪ್ 5​ ಸಿನಿ ಸುದ್ದಿಗಳು

https://newsfirstlive.com/wp-content/uploads/2023/08/top-5-15-1.jpg

Load More