newsfirstkannada.com

Rajinikanth: ತಲೈವಾ ಫ್ಯಾನ್ಸ್​ಗೆ ಗುಡ್​​ನ್ಯೂಸ್​​; ಒಟಿಟಿಯಲ್ಲಿ ಜೈಲರ್​ ಸಿನಿಮಾ ಯಾವಾಗ ಗೊತ್ತಾ..?

Share :

03-09-2023

  ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ಜೈಲರ್​ ಚಿತ್ರತಂಡ

  ನಟ ರಜನಿಕಾಂತ್‌ ಹೊಸ ಅವತಾರಕ್ಕೆ ಬಾಕ್ಸಾಫೀಸ್​ ಧೂಳಿಪಟ

  625 ಕೋಟಿ ಕಲೆಕ್ಷನ್ ಮಾಡಿದ ತಲೈವಾ ಅಭಿನಯದ ಜೈಲರ್

ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ಬಹುನಿರೀಕ್ಷಿತ ಚಿತ್ರ ಜೈಲರ್‌ ಒಟಿಟಿಗೆ ಲಗ್ಗೆ ಇಡುತ್ತಿದೆ. ವಿಶ್ವದಾದ್ಯಂತ ಆಗಸ್ಟ್​​ 10ರಂದು ಬಿಡುಗಡೆಯಾಗಿ ಬಾಕ್ಸ್​​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿದೆ ಜೈಲರ್​. ಸದ್ಯ ರಜನಿಕಾಂತ್ ಮತ್ತು ಇಡೀ ಚಿತ್ರತಂಡ ‘ಜೈಲರ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಒಟ್ಟು 625 ಕೋಟಿ ಬಾಚಿಕೊಂಡು ಪರಾಕ್ರಮವನ್ನೇ ಮೆರೆಯುತ್ತಿದೆ.

ಇದೇ ಖುಷಿಯಲ್ಲಿ ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿಧಿ ಮಾರನ್, ರಜನಿಕಾಂತ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಈ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್​​ಕುಮಾರ್​ ಅವರಿಗೂ ಕಲಾನಿಧಿ ಮಾರನ್ ದುಬಾರಿ ಬೆಲೆಯ ಪೋರ್ಶೆ ಕಾರು ಹಾಗೂ ಚೆಕ್ ನೀಡಿದ್ದರು. ಇದರ ಬೆನ್ನಲ್ಲೇ ಜೈಲರ್​ ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್​​ನ್ಯೂಸ್​​​​ವೊಂದನ್ನು ನೀಡಿದೆ.  ಹೌದು ಜನರಿಂದಲೂ ಉತ್ತಮ ರೆಸ್ಪಾನ್ಸ್​ ಪಡೆದುಕೊಂಡು ಬಾಕ್ಸ್​ಆಫೀಸ್​ ಕೂಡ ಧೂಳಿಪಟ ಮಾಡಿರೋ ತಲೈವಾ ಚಿತ್ರವು ಈಗ ಸೆಪ್ಟೆಂಬರ್‌ 7ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಈ ಜೈಲರ್​ ಚಿತ್ರವು ರಿಲೀಸ್​ ಆಗಿ 625 ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್​ ಮಾಡಿದೆ. ಹೀಗಾಗಿ ಅಭಿಮಾನಿಗಳು ಜೈಲರ್​ ಚಿತ್ರವನ್ನು ಒಟಿಟಿಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಇದರ ಜೊತೆಗೆ ಸೆಪ್ಟೆಂಬರ್‌ 7ರಂದು ಬಾಲಿವುಡ್​ ಖ್ಯಾತ ನಟ ಶಾರುಖ್‌ ಖಾನ್‌ ನಟನೆಯ ಜವಾನ್‌ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajinikanth: ತಲೈವಾ ಫ್ಯಾನ್ಸ್​ಗೆ ಗುಡ್​​ನ್ಯೂಸ್​​; ಒಟಿಟಿಯಲ್ಲಿ ಜೈಲರ್​ ಸಿನಿಮಾ ಯಾವಾಗ ಗೊತ್ತಾ..?

https://newsfirstlive.com/wp-content/uploads/2023/08/jailer-1.jpg

Load More