ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಜೈನಮುನಿ ಹತ್ಯೆ
ದೇಹವನ್ನು ಕತ್ತರಿಸಿ ಬಾವಿಗೆ ಹಾಕಿದ್ದ ಹಂತಕರು
ತನಿಖೆಗೆ ಫೀಲ್ಡಿಗಿಳಿದ ಸಿಐಡಿ ಡಿಜಿಪಿ ಸಲೀಮ್!
ಬೆಳಗಾವಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಪರಿಶೀಲನೆಗೆ ಖುದ್ದು ಸಿಐಡಿ ಡಿಜಿಪಿ ಡಾ. ಎಂ.ಎ ಸಲೀಮ್ ಫೀಲ್ಡಿಗೆ ಇಳಿದಿದ್ದಾರೆ. ಇಂದು ಹಿರೇಕೋಡಿಯ ನಂದಿಪರ್ವತ ಆಶ್ರಮಕ್ಕೆ ಸಿಐಡಿ ಡಿಜಿಪಿ ಡಾ. ಎಂ.ಎ ಸಲೀಮ್, ಐಜಿ ಪ್ರವೀಣ್ ಮಧುಕರ್ ಪವಾರ್, ಎಸ್ಪಿ ವೆಂಕಟೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್ ಸೇರಿ ಹಲವರು ಸಾಥ್ ನೀಡಿದ್ದಾರೆ.
ಕೇಸ್ ಸಂಬಂಧ ಆರೋಪಿ ನಾರಾಯಣ ಮಾಳಿ, ಹಸನಸಾಬ್ ದಲಾಯತ್ ಎಂಬ ಹಂತಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಕೂಡ ಬಹುತೇಕ ಪೂರ್ಣಗೊಂಡಿದೆ. ಸಿಐಡಿ ಐಜಿ ಪ್ರವೀಣ್ ಮಧುಕರ್ ಅವರೇ 5 ದಿನಗಳ ಕಾಲ ಚಿಕ್ಕೋಡಿಯಲ್ಲೇ ಬೀಡು ಬಿಟ್ಟು ತನಿಖೆ ನಡೆಸಿದ್ದರು. ಈಗ ಕೊನೆಯದಾಗಿ ಪರಿಶೀಲಿಸಲು ಡಿಜಿಪಿ ಸಲೀಮ್ ಅಖಾಡಕ್ಕೆ ಇಳಿದಿದ್ದಾರೆ.
ಏನಿದು ಕೇಸ್..?
ಚಿಕ್ಕೋಡಿಯ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಇಬ್ಬರು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿದ ಬಳಿಕ ಮೃತದೇಹವನ್ನ ತುಂಡರಿಸಿ ಕಟಕಬಾವಿ ಗ್ರಾಮದ ಹತ್ತಿರದ ಕೊಳವೆ ಬಾವಿಯೊಳಕ್ಕೆ ಹಾಕಿದ್ದರು. ಸಾಲ ಮರುಪಾವತಿ ಮಾಡುವಂತೆ ಕೇಳಿದ್ದಕ್ಕೆ ಆರೋಪಿಗಳು ಜೈನಮುನಿಗಳನ್ನು ಹತ್ಯೆ ಮಾಡಿದ್ದಾರೆಂಬ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ