newsfirstkannada.com

ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕತ್ತರಿಸಿ ಕೊಂದ ಆರೋಪಿಗಳಿಗೆ ಪೊಲೀಸ್​ ಕಸ್ಟಡಿ

Share :

11-07-2023

  ಜೈನಮುನಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಕಸ್ಟಡಿಗೆ

  ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು

  ದೇಹವನ್ನು ಕತ್ತರಿಸಿ ಕೊಳವೆ ಬಾವಿಗೆ ಹಾಕಿದ್ದ ಆರೋಪಿಗಳು

ಬೆಳಗಾವಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಿಗಿ​ ಭದ್ರತೆಯಲ್ಲಿ ಇಂದು ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿದರು. ವಿಚಾರಣೆ ಬಳಿಕ ಕೋರ್ಟ್​ ಇಬ್ಬರನ್ನು 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ.

ಆರೋಪಿಗಳಾದ ನಾರಾಯಣ ಮಾಳಿ, ಹಸನಸಾಬ್ ದಲಾಯತ್​ನನ್ನು ಜೈಲಿನಿಂದ ಚಿಕ್ಕೋಡಿಯ ಸಿಪಿಐ ಆರ್.ಆರ್ ಪಾಟೀಲ್ ತಂಡದಿಂದ ವಶಕ್ಕೆ ಪಡೆಯಲಾಗಿದೆ. ಬಳಿಕ ಇಬ್ಬರನ್ನು ಸಿಪಿಐ, ಡಿಆರ್ ​ತುಕಡಿಯ ಭದ್ರತೆಯೊಂದಿಗೆ ಚಿಕ್ಕೋಡಿಗೆ ಕರೆದುಕೊಂಡು ಬರಲಾಯಿತು. ಅಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿದ ನಂತರ ಆರೋಪಿಗಳನ್ನ ಪೊಲೀಸರು ಕೋರ್ಟ್​ಗೆ ಕರೆತಂದರು. ಕೋರ್ಟ್​ ವಿಚಾರಣೆ ಮಾಡಿ ಆರೋಪಿಗಳನ್ನ 7 ದಿನ​ ಕಸ್ಟಡಿಗೆ ನೀಡಿದೆ.

ಇದನ್ನೂ ಓದಿ: Breaking News: ಜೈನಮುನಿ ನಾಪತ್ತೆ ಕೇಸ್ ಭೇದಿಸಿದ ಚಿಕ್ಕೋಡಿ ಪೊಲೀಸರು ; ಆಶ್ರಮದಿಂದ ಕರೆದುಕೊಂಡು ಹೋಗಿ ಬರ್ಬರ ಹತ್ಯೆ..

ಚಿಕ್ಕೋಡಿಯ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಇಬ್ಬರು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿದ ಬಳಿಕ ಮೃತದೇಹವನ್ನ ತುಂಡರಿಸಿ ಕಟಕಬಾವಿ ಗ್ರಾಮದ ಹತ್ತಿರದ ಕೊಳವೆ ಬಾವಿಯೊಳಕ್ಕೆ ಹಾಕಿದ್ದರು. ಸಾಲ ಮರುಪಾವತಿ ಮಾಡುವಂತೆ ಕೇಳಿದ್ದಕ್ಕೆ ಆರೋಪಿಗಳು ಜೈನಮುನಿಗಳನ್ನು ಹತ್ಯೆ ಮಾಡಿದ್ದಾರೆಂಬ ವಿಚಾರ ಪ್ರಾಥಮಿಕ ತನಿಖೆಯಿಂದ ಈ ಮೊದಲು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕತ್ತರಿಸಿ ಕೊಂದ ಆರೋಪಿಗಳಿಗೆ ಪೊಲೀಸ್​ ಕಸ್ಟಡಿ

https://newsfirstlive.com/wp-content/uploads/2023/07/BGM_KAMAKUMAR.jpg

Load More