ಜೈನಮುನಿ ಹಾಗೂ ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಕೇಸ್
ಸರ್ಕಾರದ ವಿರುದ್ಧ ಬಿಜೆಪಿ ಉಭಯ ಸದನಗಳ ಸದಸ್ಯರಿಂದ ಹೋರಾಟ
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ.. ರಾಜ್ಯಪಾಲರಿಗೆ ಮನವಿ!
ಈಗಾಗಲೇ ಅಧಿವೇಶನ ಆರಂಭಗೊಂಡಿದೆ. ನಿನ್ನೆಯಷ್ಟೇ ಅಧಿವೇಶನದ ಒಳಗಡೆ ಎರಡು ಹತ್ಯೆ ಸದ್ದು ಮಾಡಿದ್ದವು. ಇದೀಗ ಇದೆ ವಿಚಾರಕ್ಕೆ ವಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಸದನದ ಹೊರಗಡೆ ಗುಡುಗಲು ಸಿದ್ಧವಾಗಿದೆ. ಇಷ್ಟು ದಿನ ಗ್ಯಾರಂಟಿ ಯೋಜನೆಗೆ ಘೋಷಿಸಿದ ಕಂಡೀಶನ್ ವಿರುದ್ಧ ಹೋರಾಡಿದ್ದ ಬಿಜೆಪಿಗೆ ಈಗ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಜೈನಮುನಿ ಹತ್ಯೆ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣಗಳು ಕಳೆದ ಎರಡ್ಮೂರು ದಿನಗಳಿಂದ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿವೆ. ಸದನದ ಒಳಗೂ ಹೊರಗೂ ಸರ್ಕಾರವನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿವೆ. ಇದೇ ಪ್ರಕರಣಗಳಿಂದ ಆಡಳಿತ ವರ್ಸಸ್ ವಿಪಕ್ಷ ಸದಸ್ಯರ ನಡುವೆ ಸದನದಲ್ಲಿ ಟಾಕ್ವಾರ್ಗಳೇ ನಡೆದಿವೆ. ಇಂದು ಈ ವಾಗ್ಯುದ್ಧವನ್ನು ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋಗಲು ಕೇಸರಿ ಸೇನೆ ಮುಂದಾಗಿದೆ.
ಜೈನಮುನಿ & ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಕೇಸ್ನಿಂದ ಸಂಕಷ್ಟ?
ತನಿಖೆ ಹಂತದಲ್ಲಿರುವ ಜೈನಮುನಿ ಹಾಗೂ ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ನಿನ್ನೆಯಷ್ಟೆ ಸದನದಲ್ಲಿ ಸದ್ದು ಮಾಡಿದ್ದ ಈ 2 ಹತ್ಯೆ ಪ್ರಕರಣಗಳು ಇಂದು ಸದನದ ಹೊರಗೆ ಹೋರಾಟಕ್ಕೆ ನಾಂದಿ ಹಾಡಿವೆ.
ಚಿಕ್ಕೋಡಿಯ ಜೈನಮುನಿ ಹಾಗೂ ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯ ತನಿಖೆ ಈಗಾಗಲೇ ನಡೆಯುತ್ತಿದೆ. ಎರಡೂ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡ ಸರ್ಕಾರ ಬಂಧಿಸಿದೆ. ಆದರೆ ಈ ಎರಡು ಹತ್ಯೆಗಳಲ್ಲಿ ಅನುಮಾನ ವ್ಯಕ್ತಪಡಿಸಿದ ಬಿಜೆಪಿ, ಪ್ರಕರಣವನ್ನ ಸಿಬಿಐ ತನಿಖೆ ವಹಿಸಲು ಒತ್ತಾಯಿಸಿದೆ. ಜೈನಮುನಿ ಹತ್ಯೆ ಘನಘೋರ ಕೃತ್ಯ. ಇದರ ಉನ್ನತಮಟ್ಟದ ತನಿಖೆ ಆಗಬೇಕು ಅಂತ ಆಗ್ರಹಿಸಿತ್ತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಸದನದಲ್ಲಿ ವಿಪಕ್ಷ ನಾಯಕರ ಮನವಿಗೆ ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆಗೆ ನಿರ್ಧಾರ ಮಾಡಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಈ ಎರಡು ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗೆ ಕೇಸರಿ ಕಲಿಗಳು ಮುಂದಾಗಿದ್ದಾರೆ.
ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
‘ಎಲ್ಲಾ ಆಯಾಮದಲ್ಲಿ ತನಿಖೆ’
ಬೆಳಗ್ಗೆ 10 ಗಂಟೆಗಳಲ್ಲಿ ವಿಧಾನಸೌಧದಲ್ಲಿರುವ ಗಾಂಧಿಜಿ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಮಾಜಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದ ಬಿಜೆಪಿಯ ಎರಡು ಮನೆಯ ಸದಸ್ಯರು ಸೇರಿ ಸರ್ಕಾರದ ವಿರುದ್ಧ ಧರಣಿ ನಡೆಸಲಿದ್ದಾರೆ. ಬೃಹತ್ ಪ್ರತಿಭಟನೆ ಬಳಿಕ ನೇರವಾಗಿ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಕೂಡ ನೀಡಲಿದ್ದಾರೆ.
‘ರಾಜ್ಯಪಾಲರಿಗೆ ಮನವಿ’
ಇನ್ನು ವೇಣುಗೋಪಾಲ್ ಹತ್ಯೆ ಈ ಬಗ್ಗೆ ಮಾತನಾಡಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದೇವೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಅಂತ ಹೇಳಿದ್ದಾರೆ.
‘ಕಾನೂನು ತನ್ನ ಕೆಲಸ ಮಾಡುತ್ತೆ’
ಇತ್ತ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಯುವುದರಿಂದ ಪೊಲೀಸ್ ಇಲಾಖೆ ಸಹ ಎಚ್ಚೆತ್ತುಕೊಂಡಿದೆ. ಪ್ರತಿಭಟನೆಯಿಂದ ಸುತ್ತಮುತ್ತಲು ಯಾವುದೇ ತೊಂದರೆ ಆಗದಂತೆ ಬಿಗಿ ಭದ್ರತೆ ನೀಡಲು ಪೊಲೀಸ್ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಒಟ್ಟಾರೆ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರದ ಮೂಲಕ ಬಿಸಿ ಮುಟ್ಟಿಸಲು ಬಿಜೆಪಿ ಸಜ್ಜಾಗಿದೆ. ಆದರೆ ಬಿಜೆಪಿಯ ಧರಣಿ ಹಾಗೂ ಮನವಿಗೆ ಆಡಳಿತ ಪಕ್ಷ ಮಣಿಯುತ್ತಾ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ