ಇದು ಬೇರೆ ಯಾವುದೋ ರಾಜ್ಯದಲ್ಲಿ ನಡೆದ ಘಟನೆ ಅಲ್ಲ
ಪ್ರವಾಸಕ್ಕೆ ಹೋಗಿ ವಾಪಸ್ ಬರುವ ವೇಳೆ ಅಪಹರಣ
ಕಿಡ್ಯ್ಯಾಪ್ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪ
ವಿಜಯಪುರ: ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆ ಸಿನಿಮೀಯ ರೀತಿಯಲ್ಲಿ ಪಂಚಾಯತ್ ಸದಸ್ಯರನ್ನೇ ಕಿಡ್ಯ್ಯಾಪ್ ಮಾಡಿದ ಆರೋಪವೊಂದು ಜಂಬಗಿಯಲ್ಲಿ (ಆಹೇರಿ) ಕೇಳಿಬಂದಿದೆ.
ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪೈಗಂಬರ್ ಮುಲ್ಲಾ ಎಂಬುವವರು ಕಳೆದ ವಾರದಿಂದ ತನ್ನ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಇಂದು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಆದರೆ ಪ್ರವಾಸದಿಂದ ಸದಸ್ಯೆರೆಲ್ಲರೂ ವಾಪಸ್ ಆಗುವಾಗ ಆಲಮಟ್ಟಿಯಲ್ಲಿ ಬಳಿ ಕಿಡ್ಯ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಭೀಮರಾಯ ಕಡಾಯಿ, ಬಸವರಾಜ ಚಿಮ್ಮಲಗಿ, ಶ್ರೀಶೈಲ ಮಸೂತಿ, ರಾಜು ಕೆರೂರು ಎಂಬುವರ ವಿರುದ್ಧ ಕಿಡ್ನ್ಯಾಪ್ ಆರೋಪ ಕೇಳಿಬಂದಿದೆ. ಸಂಖ್ಯಾಬಲಕ್ಕಾಗಿ ಈ ಹೈಡ್ರಾಮ ನಡೆದಿದೆ ಎನ್ನಲಾಗುತ್ತಿದೆ. ಈ ನಾಲ್ಕು ಜನರ ಮೇಲೆ ಎಂಟು ಗ್ರಾಮ ಪಂಚಾಯತಿ ಸದಸ್ಯರ ಕಿಡ್ನ್ಯಾಪ್ ಆರೋಪ ಕೇಳಿಬಂದಿದೆ.
ಹೊನ್ನಾಳಿ ಹಾಗೂ ಜಂಬಗಿ ಗ್ರಾಮಗಳೆರಡು ಸೇರಿ ಗ್ರಾಮ ಪಂಚಾಯಿತಿ ರಚನೆ ಮಾಡಲು ಚುನಾವಣೆ ಆಯೋಜಿಸಿತ್ತು. ಜಂಬಗಿ ಗ್ರಾಮ ಪಂಚಾಯತಿಯಲ್ಲಿ 18 ಸದಸ್ಯರ ಬಲವಿತ್ತು. ಆದರೀಗ ಕೋರಂಗೆ ಬೇಕಾಗಿದ್ದ ಎಂಟು ಜನ ಸದಸ್ಯರು ಕಿಡ್ನ್ಯಾಪ್ ಆರೋಪವನ್ನ ಮಾಡಿದ್ದಾರೆ. ಕಿಡ್ಯ್ಯಾಪ್ ಹಿಂದೆ ಬಿಜೆಪಿ ಪಕ್ಷದ ಕೈವಾಡ ಇದೆ ಎಂದ ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಹಲ್ಲೆಗೊಳಗಾದವರು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ