newsfirstkannada.com

ಜಮ್ಮು-ಕಾಶ್ಮೀರದಲ್ಲಿ ಎನ್​ಕೌಂಟರ್ ಅಂತ್ಯ.. 7 ದಿನದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಫಿನೀಶ್

Share :

20-09-2023

  ದಟ್ಟಾರಣ್ಯದಲ್ಲಿ ಲಷ್ಕರ್ ಉಗ್ರರನ್ನು ಸದೆ ಬಡಿದ ಭಾರತೀಯ ಸೇನೆ

  ಬುಲೇಟ್​ಗೆ ಎದೆಯೊಡ್ಡಿ ಉಸಿರು ಚೆಲ್ಲಿದ ನಾಲ್ವರು ಭಾರತೀಯರು

  ಉಗ್ರರ ನೆಲೆಗಳಲ್ಲಿ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ವಶಕ್ಕೆ ಪಡೆದ ಸೇನೆ

ಶ್ರೀನಗರ: ಸ್ಥಳೀಯ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕ ಉಜೀರ್ ಖಾನ್​ನನ್ನು ಎನ್​ಕೌಂಟರ್ ಮಾಡುವ ಮೂಲಕ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಾಡೊಲ್ ಅರಣ್ಯದಲ್ಲಿ ನಡೆಯುತ್ತಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯವಾಗಿದೆ.

ವೀರ ಮರಣ ಹೊಂದಿದ ಕರ್ನಲ್ ಮನ್‌ಪ್ರೀತ್ ಸಿಂಗ್, ಡಿವೈಎಸ್‌ಪಿ ಹಿಮಯುನ್ ಭಟ್, ಮೇಜರ್ ಆಶಿಶ್

ಸೆಪ್ಟೆಂಬರ್​ 13 ರಿಂದ ಪ್ರಾರಂಭವಾಗಿದ್ದ ಈ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್ ಉಗ್ರರ ಹತ್ಯೆಯೊಂದಿಗೆ ಕೊನೆ ಮಾಡಲಾಗಿದೆ. ಕಾರ್ಯಚರಣೆ ವೇಳೆ ಉಗ್ರರ ನೆಲೆಗಳಲ್ಲಿದ್ದ ಮದ್ದು-ಗುಂಡು, ಪಿಸ್ತೂಲ್, ರೈಫಲ್ ಸೇರಿದಂತೆ ಇತರೆ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿತ್ತು. ಪಾಕ್​ನಿಂದ ಡ್ರೋನ್ ಮೂಲಕ ಬರುತ್ತಿದ್ದ ಉಗ್ರರು ಕೋಕರ್ನಾಗ್, ಗಾಡೊಲ್ ದಟ್ಟಾರಣ್ಯದಲ್ಲಿ ಅವಿತು ದಾಳಿಗೆ ಮುಂದಾಗಿದ್ದರು. ಇದರಿಂದ ಎಚ್ಚೆತ್ತುಕೊಂಡ ಭಾರತ ತಕ್ಕ ಉತ್ತರ ನೀಡಿದೆ.

ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ 28 ವರ್ಷದ ಉಜೀರ್ ಶವ ಎಂದು ಖಾತ್ರಿ ಪಡಿಸಿಕೊಳ್ಳಲಾಗಿದೆ. ಆದಾಗ್ಯೂ ಮತ್ತೊಬ್ಬ ಭಯೋತ್ಪಾದಕನ ಮೃತದೇಹವನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎನ್​ಕೌಂಟರ್​ನಲ್ಲಿ ಭಾರತೀಯ ನಾಲ್ವರು ಯೋಧರು ಮತ್ತು ಪೊಲೀಸ್ ವೀರ ಮರಣ ಹೊಂದಿದ್ದಾರೆ. ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಇನ್ನೊಬ್ಬ ಯೋಧ ಪ್ರದೀಪ್​ ಸಾವನ್ನಪ್ಪಿದ್ದರು. ಜಮ್ಮುಕಾಶ್ಮೀರ ಪೊಲೀಸ್‌ ಡಿವೈಎಸ್‌ಪಿ ಹಿಮಯುನ್ ಭಟ್ ಕೂಡ ವೀರ ಮರಣ ಹೊಂದಿದ್ದಾರೆ. ಭಾರತೀಯ ಸೇನಾದ ಶ್ವಾನ ಕೆಂಟ್ ಅನ್ನು ಈ ಘಟನೆಯಲ್ಲಿ ಕಳೆದುಕೊಂಡಿದ್ದೇವೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಸುದೀರ್ಘ ಎನ್‌ಕೌಂಟರ್‌ಗಳಲ್ಲಿ ಒಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮ್ಮು-ಕಾಶ್ಮೀರದಲ್ಲಿ ಎನ್​ಕೌಂಟರ್ ಅಂತ್ಯ.. 7 ದಿನದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಫಿನೀಶ್

https://newsfirstlive.com/wp-content/uploads/2023/09/PAK_TERROR.jpg

Load More