newsfirstkannada.com

ಭಾರತದ ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕ್​ ಸೇನೆ, ಫೈರಿಂಗ್​.. ಕರ್ನಾಟಕ ಮೂಲದ ಯೋಧನಿಗೆ ಗಂಭೀರ ಗಾಯ!

Share :

27-10-2023

    ರಾತ್ರಿ ವೇಳೆ ಪಾಕ್​ ಸೇನೆಯಿಂದ ಹುಚ್ಚಾಟ, ಯೋಧರಿಂದ ತಕ್ಕ ಪ್ರತ್ಯುತ್ತರ

    ಗ್ರಾಮಸ್ಥರು ಊಟ ಮಾಡಿ ಮಲಗುವ ವೇಳೆಯೇ ಪಾಕ್​ನಿಂದ ಫೈರಿಂಗ್.!

    ಕದನ ವಿರಾಮ ನಿಯಮವನ್ನು ಉಲ್ಲಂಘಸಿ ಕ್ಯಾಂಪ್​ಗಳ ಮೇಲೆ ದಾಳಿ

ಶ್ರೀನಗರ: ಪಾಕಿಸ್ತಾನ ಸೇನೆ ಕದನ ವಿರಾಮ ನಿಯಮ ಉಲ್ಲಂಘಸಿ ಭಾರತದ ಗಡಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಓರ್ವ ಬಿಎಸ್​ಎಫ್​ ಯೋಧ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಿಎಸ್​ಎಫ್​ನ ಕರ್ನಾಟಕ ಮೂಲದ ಬಸವರಾಜ್ ಎಸ್​ಆರ್ ಗಾಯಗೊಂಡ ಯೋಧ. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ. ಕಾಶ್ಮೀರದ ಆರ್​.ಎಸ್​ ಪುರದ ಅರ್ನಿಯಾ ಪ್ರದೇಶದಲ್ಲಿ ಬಿಎಸ್​ಎಫ್​ ಕ್ಯಾಂಪ್​ಗಳ ಇದ್ದಿದ್ದರಿಂದ ಇವುಗಳನ್ನೇ ಟಾರ್ಗೆಟ್ ಮಾಡಿ ಹೆಚ್ಚಾಗಿ ದಾಳಿ ಮಾಡಲಾಗಿದೆ. ಇನ್ನು ಸಾಯಿ ಖುರ್ಡ್​, ಬುರೆಜಲ್​, ಚಕ್ಬುಲ್ಲಾ ಮತ್ತು ದೇವಿಗರ್​ ಗ್ರಾಮಗಳ ಸುತ್ತಲೂ ಗುಂಡಿನ ಶಬ್ಧ ಕೇಳಿ ಬಂದಿದೆ. ಪಾಕ್​ ಸೇನೆ ನಿರಂತರವಾಗಿ ಫೈರಿಂಗ್ ಮಾಡಿರುವುದಕ್ಕೆ ಭಾರತದ ಯೋಧರು ಕೂಡ ತಕ್ಕ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮಗಳ ಸುತ್ತ ರಾತ್ರಿ ಫೈರಿಂಗ್ ಶಬ್ಧ ಹೆಚ್ಚಾಗಿ ಕೇಳಿ ಬಂದಿದ್ದರಿಂದ ಗ್ರಾಮಸ್ಥರು ನಿದ್ದೆ ಮಾಡದೇ ರಾತ್ರಿಯೆಲ್ಲ ಆತಂಕದಲ್ಲೇ ಸಮಯ ಕಳೆದಿದ್ದಾರೆ. ಈ ವೇಳೆ ಅವರಿಗೆ ಯೋಧರು ಧೈರ್ಯ ತುಂಬಿದ್ದು ಯಾವುದೇ ಆತಂಕ ಬೇಡ ಮನೆಯಿಂದ ಹೊರಬರಬೇಡಿ ಎಂದಿದ್ದಾರೆ. ಇನ್ನು ಈ ಪ್ರದೇಶದಲ್ಲಿ 3 ವರ್ಷಗಳ ಬಳಿಕ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕ್​ ಸೇನೆ, ಫೈರಿಂಗ್​.. ಕರ್ನಾಟಕ ಮೂಲದ ಯೋಧನಿಗೆ ಗಂಭೀರ ಗಾಯ!

https://newsfirstlive.com/wp-content/uploads/2023/10/BSF_FIRING.jpg

Load More