newsfirstkannada.com

ವಾಲ್ಮೀಕಿ ಸಮುದಾಯವೇ ಈಗ ರೆಡ್ಡಿ ಟಾರ್ಗೆಟ್​​.. ರಾಮುಲು ಬಲವನ್ನೇ ಮುರಿಯೋಕೆ ಮುಂದಾದ್ರಾ ಗಣಿಧಣಿ?

Share :

01-11-2023

    ವಾಲ್ಮೀಕಿ ಜಯಂತಿಗೆ ರಜೆ ಘೋಷಿಸುವಂತೆ ಒತ್ತಾಯಿಸಿದ್ದು ನಾವು

    ವಾಲ್ಮೀಕಿ ಸಮುದಾಯದ ಕೊಡುಗೆ ಬಗ್ಗೆ ಮಾತಾಡಿದ ಜನಾರ್ಧನ್​​ ರೆಡ್ಡಿ!

    ಮಾಜಿ ಗೆಳೆಯನ ವಿರುದ್ಧ ವಾಲ್ಮೀಕಿ ಅಸ್ತ್ರ ಪ್ರಯೋಗಿಸಿದ್ರಾ ಗಣಿಧಣಿ?

ಬಳ್ಳಾರಿಯ ರಾಮ-ಲಕ್ಷ್ಮಣರಂತಿದ್ದ ಜನಾರ್ಧನ್ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ದ್ವೇಷದ ಕಿಡಿ ಹೊತ್ತಿದೆ. ಕುಚಿಕು ಗೆಳೆಯರಂತಿದ್ದವ್ರು ಈಗ ಎದುರಾಳಿಗಳಾಗಿ ನಾನಾ? ನೀನಾ? ಅಂತ ಕಾದಾಡ್ತಿದ್ದಾರೆ. ಮೊದಲೇ ಇಬ್ಬರ ನಡುವೆ ಕೆಂಡದಂತೆ ದ್ವೇಷ ಹೊತ್ತಿ ಹೊರಿಯುತ್ತಿದೆ. ಇದೀಗ ಶ್ರೀರಾಮುಲು ಸ್ಲಂನಲ್ಲಿ ಬೆಳೆದ ಯುವಕ. ಆತನನ್ನ ಶಾಸಕ ಮಾಡಿದ್ದು ನಾನೇ, ರಾಜ್ಯ ಜನತೆಗೆ ಗೊತ್ತಾಗೋ ಹಾಗೇ ಮಾಡಿದ್ದೇ ನಾನು ಅಂತ ರೆಡ್ಡಿ ಹೊಸ ದಾಳ ಉರುಳಿಸಿದ್ದಾರೆ.

ಜನಾರ್ಧನ್ ರೆಡ್ಡಿ ಮತ್ತು ಶ್ರೀರಾಮುಲು ಒಂದೇ ತಾಯಿ ಮಕ್ಕಳು ಅಲ್ಲದಿದ್ರೂ ರಾಮಲಕ್ಷ್ಮಣರಂತೆ ಇದ್ದರು. ಒಬ್ಬರು ಎಳೆದ ರೇಖೆಯನ್ನು ಮತ್ತೊಬ್ಬರು ದಾಟುತ್ತಿರಲಿಲ್ಲ, ಒಬ್ಬರು ಮಾತಾಡಿದ್ರು ಅಂದ್ರೆ, ಇನ್ನೊಬ್ಬರು ಅದನ್ನು ಮಿರುತ್ತಾ ಇರಲಿಲ್ಲ. ಹೀಗಾಗಿಯೇ ಇವರನ್ನು ಬಳ್ಳಾರಿಯಲ್ಲಿ ಭಲೇ ಜೋಡಿ ಅಂತಾನೇ ಕರೀತಾ ಇದ್ದರು. ಆದರೆ ಇವತ್ತು ಬದಲಾದ ರಾಜಕೀಯ ಪರಿಸ್ಥಿತಿಯಿಂದ ಒಬ್ಬರೊಬ್ಬರಿಗೂ ಹಾವು ಮುಂಗಸಿಯಂತೆ ಕಿತ್ತಾಡ್ತಿದ್ದಾರೆ. ನನ್ನಿಂದ ನೀನು, ನಿನ್ನಿಂದ ನಾನಲ್ಲ ಅನ್ನೋಥರ ಒಬ್ಬರಿಗೊಬ್ಬರು ಏಟು ಎದಿರೇಟು ಕೊಡ್ತಿದ್ದಾರೆ.

ಸ್ಲಂನಲ್ಲಿ ಬೆಳೆದ ಶ್ರೀರಾಮುಲುನಾ ಶಾಸಕ ಮಾಡಿದ್ದು ನಾನು!
ರಾಜ್ಯದ ದೊಡ್ಡ ನಾಯಕನನ್ನಾಗಿಸಿದ್ದಕ್ಕೆ ಹೆಮ್ಮೆ ಇದೆ ಎಂದ ರೆಡ್ಡಿ!

ಜನಾರ್ಧನ್ ರೆಡ್ಡಿ ಮತ್ತು ಶ್ರೀರಾಮುಲು ಅಪ್ಪಣೆ ಇಲ್ಲದೇ ಗಣಿನಾಡಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುತ್ತಿರಲಿಲ್ಲ ಎನ್ನಲಾಗುತ್ತಿತ್ತು. ಜನಾರ್ಧನ್ ರೆಡ್ಡಿನಾ ಏನಾದರೂ ಕೇಳಿದ್ರೆ ಶ್ರೀರಾಮುಲು ಹೇಗೆ ಹೆಜ್ಜೆ ಹಾಕ್ತಾರೋ ತಾವು ಹಾಗೇ ಹೆಜ್ಜೆ ಇಡುತ್ತೇವೆ ಅಂತಿದ್ದರು. ಶ್ರೀರಾಮುಲು ಅವರನ್ನು ಏನಾದರೂ ಕೇಳಿದ್ರೆ ರೆಡ್ಡಿ ಏನ್‌ ಹೇಳ್ತಾರೋ ಹಾಗೇ ನಡೀತಿನಿ ಅಂತಿದ್ರು. ಆದರೆ ಇವತ್ತು ನಾನಿಲ್ಲದೇ ಶ್ರೀರಾಮುಲು ಇಲ್ಲ ಅಂತಿದ್ದಾರೆ ಗಣಿಧಣಿ ಜನಾರ್ಧನ್ ರೆಡ್ಡಿ. ಗಂಗಾವತಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ವಾಲ್ಮೀಕಿ ಸಮುದಾಯದ ಅಭಿವೃದ್ಧಿ ಮತ್ತು ಯೋಜನೆಗಳ ಬಗ್ಗೆ ಮಾತಾಡುತ್ತಿದ್ದ ರೆಡ್ಡಿ, ಇದ್ದಕ್ಕಿದ್ದಂತೆ ಮಾಜಿ ಸ್ನೇಹಿತನ ಇತಿಹಾಸ ಕೆದಕಿದರು. ವಾಲ್ಮೀಕಿ ಸಮುದಾಯ ಅಂದ್ರೆ ಶ್ರೀರಾಮುಲು, ಶ್ರೀರಾಮುಲು ಅಂದ್ರೆ ವಾಲ್ಮಿಕಿ ಸಮುದಾಯದ ನಾಯಕ ಅಂತ ಬಿಂಬಿತವಾಗೋದಕ್ಕೆ ಪ್ರಮುಖ ಕಾರಣ ನಾನು ಅಂದ್ರು. ಅಷ್ಟೇ ಅಲ್ಲ ಎಸ್ಟಿಗೆ ಮೀಸಲಾತಿ ಇಲ್ಲದ ಸಂದರ್ಭದಲ್ಲೂ ನಾಯಕ ಸಮಾಜದವರನ್ನು ಶಾಸಕರನ್ನಾಗಿ ಮಾಡಿದ್ದು ನಾನೇ ಅಂತ ಹೇಳಿ ಕಲ್ಯಾಣ ಕರ್ನಾಟಕದಲ್ಲಿ ಹೊಸ ದಾಳ ಉರುಳಿಸಿದ್ದಾರೆ.

ವಾಲ್ಮೀಕಿ ಸಮುದಾಯದ ಹಿಡಿತಕ್ಕೆ ಮುಂದಾದ್ರಾ ರೆಡ್ಡಿ?
ರಾಮುಲು ಬಲವನ್ನೇ ಮುರಿಯೋಕೆ ನಿರ್ಧರಿಸಿದ್ರಾ ಗಣಿಧಣಿ?

ಜನಾರ್ಧನ್ ರೆಡ್ಡಿ ಬರೀ ಶ್ರೀರಾಮುಲು ಬಗ್ಗೆ ಮಾತಾಡಿಲ್ಲ. ಇಡೀ ವಾಲ್ಮೀಕಿ ಸಮುದಾಯದ ಬಗ್ಗೆ ಮಾತಾಡಿದ್ದರು. ಈ ಸಮುದಾಯಕ್ಕಾಗಿ ತನ್ನ ಕೊಡುಗೆ ಏನು ಅಂತ ಹೇಳಿಕೊಂಡರು. ನಾನಿಲ್ಲದ ಅಂದಿದ್ರೆ ಶ್ರೀರಾಮುಲುವಿನಿಂದ ಏನೂ ಆಗ್ತಿರಲಿಲ್ಲ ಎನ್ನುವ ಸಂದೇಶ ಸಾರಿದ್ದಾರೆ. ಶ್ರೀರಾಮುಲು ಮಾತ್ರ ಸಿರಗುಪ್ಪಾದಲ್ಲಿ ಸೋಮಲಿಂಗಪ್ಪರನ್ನು ಶಾಸಕರನ್ನಾಗಿ ಮಾಡಿದ್ದು ನಾನೇ ಎನ್ನುವ ಮೂಲಕ ಎಸ್​ಟಿ ಸಮುದಾಯದ ಮೇಲೆ ಪ್ರೀತಿ ತೋರಿದರು. ಇದನ್ನ ನೋಡಿದ್ರೆ ಜನಾರ್ಧನ್ ರೆಡ್ಡಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿರುವ ಹಾಗೂ ಚುನಾವಣೆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸುವ ವಾಲ್ಮೀಕಿ ಸಮುದಾಯವನ್ನ ಓಲೈಸುವ ಪ್ರಯತ್ನ ಮಾಡಿದ್ರಾ ಎಂಬ ಅನುಮಾನ ಕಾಡೋಕೆ ಶುರುವಾಗಿದೆ.

ವಾಲ್ಮೀಕಿ ಜಯಂತಿಗೆ ರಜೆ ಘೋಷಿಸುವಂತೆ ಒತ್ತಾಯಿಸಿದ್ದು ನಾವು!

ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರೂ ಬಾಲ್ಯದಿಂದಲೇ ಜೊತೆ ಜೊತೆಯಾಗಿ ಬೆಳೆದು ಬಂದವರು. ಅದೆಷ್ಟೋ ಸಂದರ್ಭದಲ್ಲಿ ರೆಡ್ಡಿ ಮಾತಾಡುವಾಗ ನಾವು ನಾಲ್ಕು ಜನ ಸಹೋದರರು ಅದರಲ್ಲಿ ಶ್ರೀರಾಮುಲು ಕೂಡ ಒಬ್ಬರು ಅನ್ನೋದನ್ನು ಹೇಳ್ಕೊಂಡಿದ್ದಾರೆ. ಹಾಗೇ ಇಬ್ಬರು ರಾಜಕೀಯವಾಗಿ ಜೊತೆ ಜೊತೆಯಾಗಿಯೇ ಬೆಳೆದು ಬಂದಿದ್ದಾರೆ. ಶ್ರೀರಾಮುಲು ಏಳಿಗೆಯಲ್ಲಿ ರೆಡ್ಡಿ ಪಾಲು ಇದ್ದೇ ಇದೆ ಅನ್ನೋದು ಗೊತ್ತಿರುವ ಸಂಗತಿಯೇ. ಆದರೆ ಇವತ್ತು ಅದನ್ನೇ ಅಸ್ತ್ರವನ್ನಾಗಿ ಜನಾರ್ಧನ್ ರೆಡ್ಡಿ ಬಳಸಿಕೊಳ್ತಿದ್ದಾರಾ ಎಂಬ ಅನುಮಾನ ಉಂಟಾಗಿದೆ.

ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ಧನ್ ರೆಡ್ಡಿ ಜೈಲಿಗೆ ಹೋದ್ಮೇಲೆ ಗಣಿನಾಡಿನ ರಾಜಕೀಯದ ಹಿಡಿತ ಕೈ ತಪ್ಪಿದೆ. ಮತ್ತೊಂದೆಡೆ ಶ್ರೀರಾಮುಲು ಮಾಸ್‌ ಲೀಡರ್‌ ಆಗಿ ಬೆಳೆದು ನಿಲ್ತಾರೆ. ಜೈಲಿನಿಂದ ಹೊರಬಂದ ಬಳಿಕ ರೆಡ್ಡಿ ಮತ್ತು ಗಣಿನಾಡಿನಲ್ಲಿ ತನ್ನ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯಬೇಕು ಅಂತ ಎಷ್ಟೇ ಪ್ರಯತ್ನಿಸಿದ್ರೂ ಅದು ಸಾಧ್ಯವಾಗಲ್ಲ. ಜೊತೆಗೆ ನಂಬಿಕೊಂಡಿದ್ದ ಬಿಜೆಪಿನೂ ಕೈ ಕೊಡುತ್ತೆ. ಶ್ರೀರಾಮುಲು ಸಹ ಜೊತೆಗೆ ಬರಲ್ಲ. ಈ ಎಲ್ಲಾ ಬೆಳವಣಿಗೆಯಿಂದ ಸ್ವಂತ ಪಕ್ಷ ಕಟ್ಟಿದ ಜನಾರ್ಧನ್ ರೆಡ್ಡಿ ಈಗ ಕಲ್ಯಾಣ ಕರ್ನಾಟಕದ ಮೇಲೆ ಪ್ರಾಬಲ್ಯ ಸಾಧಿಸೋ ತಂತ್ರದಲ್ಲಿದ್ದಾರೆ. ಈ ತಂತ್ರದಲ್ಲಿ ಯಶಸ್ಸು ಸಾಧಿಸಬೇಕು ಅಂದ್ರೆ ಮೊದಲು ಶ್ರೀರಾಮುಲುನ ಕಟ್ಟಿ ಹಾಕಬೇಕು ಅಂತ ಅರಿತಿರೋ ರೆಡ್ಡಿ ಈಗ ಸಮುದಾಯದ ಓಲೈಕೆ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಲ್ಮೀಕಿ ಸಮುದಾಯವೇ ಈಗ ರೆಡ್ಡಿ ಟಾರ್ಗೆಟ್​​.. ರಾಮುಲು ಬಲವನ್ನೇ ಮುರಿಯೋಕೆ ಮುಂದಾದ್ರಾ ಗಣಿಧಣಿ?

https://newsfirstlive.com/wp-content/uploads/2023/11/sree.jpg

Load More