newsfirstkannada.com

ಆಂಧ್ರದಲ್ಲಿ ಇನ್ಮುಂದೆ ಪವನ್​​ ಅಸಲಿ ಆಟ; ಜೈಲಿಗೆ ಹೋಗಿ ಬಂದ ಬೆನ್ನಲೇ ಜಗನ್​ಗೆ ಖಡಕ್​​ ವಾರ್ನಿಂಗ್​​

Share :

14-09-2023

    ಇವತ್ತಿಂದ ನಾನು ಆಂಧ್ರದಲ್ಲಿ ಹೊಸ ನಿರ್ಣಯ ತೆಗೆದುಕೊಂಡಿದ್ದೇನೆ

    ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ಪವನ್ ಕಲ್ಯಾಣ್

    ರಾಜಮಂಡ್ರಿ ಜೈಲಿಗೆ ಬಂದ ಜನಸೇನಾ ಪಕ್ಷದ ನಾಯಕರ ದಂಡು

ರಾಜಮಂಡ್ರಿ: ಆಂಧ್ರ ರಾಜಕೀಯದಲ್ಲಿ ಎದ್ದಿರೋ ಬಿರುಗಾಳಿಗೆ ಜನಸೇನಾ ಪಕ್ಷದ ಅಧ್ಯಕ್ಷ, ಪವರ್ ಸ್ಟಾರ್ ಪವನ್ ಕಲ್ಯಾಣ್ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ರಾಜಮಂಡ್ರಿ ಜೈಲಿನಲ್ಲಿ ಭೇಟಿಯಾದ ಪವನ್ ಕಲ್ಯಾಣ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಇವತ್ತಿಂದ ನಾನು ಹೊಸ ನಿರ್ಣಯ ತೆಗೆದುಕೊಂಡಿದ್ದೇನೆ. ಮುಂದಿನ ಚುನಾವಣೆಯನ್ನು ಟಿಡಿಪಿ ಹಾಗೂ ಜನಾಸೇನಾ ಪಕ್ಷ ಒಟ್ಟಿಗೆ ಸೇರಿ ಎದುರಿಸಲಾಗುವುದು ಎಂದಿದ್ದಾರೆ.

ಪವನ್ ಕಲ್ಯಾಣ್ ಅವರು ತಮ್ಮ ಫಿಲ್ಮಿ ಸ್ಟೈಲ್‌ನಲ್ಲೇ ಇಂದು ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ಭೇಟಿ ಕೊಟ್ಟರು. ಪವನ್ ಕಲ್ಯಾಣ್ ಅವರಿಗೆ ಜನಸೇನಾ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್, ನಟ ಬಾಲಯ್ಯ ಸಾಥ್ ಕೊಟ್ಟಿದ್ದರು. ಅಭಿಮಾನಿಗಳ ಮೆರವಣಿಗೆಯಲ್ಲಿ ಸಾಗಿ ಬಂದ ಪವನ್ ಕಲ್ಯಾಣ್ ಅವರು ಜೈಲಿಗೆ ಖಡಕ್ ಎಂಟ್ರಿ ಕೊಟ್ಟರು. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಹೊರಗಡೆ ಬಂದ ಪವನ್ ಕಲ್ಯಾಣ್ ಟಿಡಿಪಿ, ಜನಾಸೇನಾ ಪಕ್ಷದ ಮೈತ್ರಿಯನ್ನು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: WATCH: ಚಂದ್ರಬಾಬು ನಾಯ್ಡು ಜೈಲು ಪಾಲಾಗಿದ್ದಕ್ಕೆ ಸಂತಸ; ಪಟಾಕಿ ಸಿಡಿಸಿ ಸಂಭ್ರಮಿಸಿದ ನಟಿ ರೋಜಾ ಹೇಳಿದ್ದೇನು?

ಕಾರಾಗೃಹದ ಹೊರಗೆ ಸುದ್ದಿಗೋಷ್ಠಿ ನಡೆಸಿದ ಪವನ್ ಕಲ್ಯಾಣ್ ಅವರು ಖಡಕ್ ಡೈಲಾಗ್ ಹೊಡೆದ್ರು. ನಾನು ಮೊನ್ನೆವರೆಗೂ ಯಾವುದೇ ನಿರ್ಣಯವನ್ನು ತೆಗೆದುಕೊಂಡಿರಲಿಲ್ಲ. ಎಲ್ಲವೂ ಒಳ್ಳೆಯದಾಗುತ್ತೆ ಅಂತ ಹೇಳುತ್ತಿದ್ದೆ. ಇವತ್ತು ನಾನು ನಿರ್ಣಯ ತೆಗೆದುಕೊಂಡಿದ್ದೇನೆ. ಜನಾಸೇನಾ, ತೆಲುಗು ದೇಶಂ ಒಟ್ಟಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಜನಾಸೇನಾ, ಟಿಡಿಪಿ ಒಟ್ಟಿಗೆ ಎದುರಿಸಲಿದೆ. ಇದು ನಮ್ಮಿಬ್ಬರ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಣಯವಲ್ಲ. ಆಂಧ್ರಪ್ರದೇಶದ ಜನರ ಭವಿಷ್ಯಕ್ಕಾಗಿ ನಿರ್ಣಯವನ್ನು ತೆಗೆದುಕೊಂಡಿದ್ದೇನೆ ಎಂದು ಪಂಚಿಂಗ್ ಡೈಲಾಗ್ ಹೊಡೆದ್ರು.

ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು 2021ರಲ್ಲಿ ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ. ಸದ್ಯ ಚಂದ್ರಬಾಬು ನಾಯ್ಡು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿರುವ ಪವನ್ ಕಲ್ಯಾಣ್ ಅವರು ಆಂಧ್ರ ಸಿಎಂ ಜಗನ್‌ ಮೋಹನ್ ರೆಡ್ಡಿ ವಿರುದ್ಧ ಕಿಡಿಕಾರಿದ್ದಾರೆ. ಆಂಧ್ರದಲ್ಲಿ YSRCP ಪಕ್ಷವೂ ಆಡಳಿತ ಸರಿಯಿಲ್ಲ. ಆಂಧ್ರದ ಜನರ ಭವಿಷ್ಯಕ್ಕಾಗಿ ಜನಸೇನಾ, ಟಿಡಿಪಿ ಮೈತ್ರಿಯಾಗಲಿದೆ ಎಂದು ಘೋಷಿಸಿದ್ದಾರೆ. ಪವನ್ ಕಲ್ಯಾಣ್ ಅವರ ಈ ಘೋಷಣೆ ಕುದಿಯುತ್ತಿರೋ ಆಂಧ್ರ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಆಂಧ್ರದಲ್ಲಿ ಇನ್ಮುಂದೆ ಪವನ್​​ ಅಸಲಿ ಆಟ; ಜೈಲಿಗೆ ಹೋಗಿ ಬಂದ ಬೆನ್ನಲೇ ಜಗನ್​ಗೆ ಖಡಕ್​​ ವಾರ್ನಿಂಗ್​​

https://newsfirstlive.com/wp-content/uploads/2023/09/Pawan-Kalyan-Andhra.jpg

Load More