ಜೈಲರ್ಗೆ ಜಪಾನ್ ರಾಯಭಾರಿಯಿಂದ ಶುಭಾಶಯ
ರಜನಿಕಾಂತ್ ಸ್ಟೈಲ್ನಲ್ಲೇ ತಲೈವಾ ಫ್ಯಾನ್ಸ್ ಮನಗೆದ್ರು
ರಜನಿಕಾಂತ್ ಬಗ್ಗೆ ಹಿರೋಶಿ ಸುಜುಕಿ ಏನಂದ್ರು ಗೊತ್ತಾ?
ಭಾರತ ಮಾತ್ರವಲ್ಲದೆ, ಹೊರ ದೇಶದಲ್ಲೂ ಜೈಲರ್ ಭಾರೀ ಸದ್ದು ಮಾಡುತ್ತಿದೆ. ರಜನಿ ನಟನೆಗೆ ಅನೇಕರು ಫಿದಾ ಆಗಿದ್ದಾರೆ. ಇದೀಗ ಭಾರತದಲ್ಲಿನ ಜಪಾನ್ ರಾಯಭಾರಿ ಕೂಡ ‘ಜೈಲರ್’ಗೆ ಶುಭ ಹಾರೈಸಿದ್ದಾರೆ.
ರಜಿನಿಕಾಂತ್ ಅಭಿಮಾನಿಯಾಗಿರೋ ಜಪಾನ್ ರಾಯಭಾರಿ ಹಿರೋಶಿ ಸುಜುಕಿ, ತಲೈವಾ ಸ್ಟೈಲ್ನಲ್ಲೇ ಸಿನಿಮಾಗೆ ಗುಡ್ ಲಕ್ ಹೇಳಿದ್ದಾರೆ. ಹಿರೋಶಿ ಸುಜುಕಿ ಈ ಹಿಂದೆ ತಲೈವರ್ ಚಾಲೆಂಜ್ ಸ್ವೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ರು. ಇದೀಗ ರಜನಿಕಾಂತ್ ಜೈಲರ್ ಬಿಡುಗಡೆಯಾಗ್ತಿದ್ದಂತೆ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.
ರಜನಿ ಸ್ಟೈಲ್ನಲ್ಲಿ ಸನ್ಗ್ಲಾಸ್ ಹಾಕಿ ವಿಡಿಯೋ ಮಾಡಿದ್ದಾರೆ. ರಜಿನಿ ಯೂ ಆರ್ ಜಸ್ಟ್ ಸೂಪರ್. ನಿಮಗೆ ಹಾಗೂ ಜೈಲರ್ ಸಿನಿಮಾಗೆ ಒಳ್ಳೆಯದಾಗಲಿ ಅಂತಾ ಹಾರೈಸಿದ್ದಾರೆ.
Vannakkam!@Rajinikanth, #Japan also loves you a lot!🤝#Jailer #rajinifans pic.twitter.com/ced3GUiHi7
— Hiroshi Suzuki, Ambassador of Japan (@HiroSuzukiAmbJP) August 11, 2023
ಕಲೆಕ್ಷನ್ ಎಷ್ಟು?
ಜೈಲರ್ ಸಿನಿಮಾ ಬಿಡುಗಡೆಗೊಂಡು ಇಂದಿಗೆ 3ನೇ ದಿನ. ಬಾಕ್ಸ್ ಆಫೀಸಿನಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿದೆ. ಎರಡೇ ದಿನದಲ್ಲಿ 100 ಕಲೆಕ್ಷನ್ ಮಾಡಿರೋದಾಗಿ ಅಂದಾಜು ಹಾಕಲಾಗ್ತಿದೆ. ಫಸ್ಟ್ ಡೇ ಭಾರತದಲ್ಲಿ 52 ಕೋಟಿ ಗಳಿಸಿದ್ದ ‘ಜೈಲರ್’, ವಿಶ್ವಾದ್ಯಂತ 80 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಎರಡನೇ ದಿನವೂ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದು ಚಿತ್ರಮಂದಿರದ ಗಲ್ಲಾಪೆಟ್ಟಿಗೆ ತುಂಬಿವೆ. ಪರಿಣಾಮ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದಂತಾಗಿದೆ. ಈ ಬಗ್ಗೆ ಅಧಿಕೃತ ನಂಬರ್ಸ್ ಇನ್ನಷ್ಟೇ ಚಿತ್ರತಂಡ ನೀಡಬೇಕಿದೆ.
ಜೈಲರ್ ಸಿನಿಮಾ ಬಗ್ಗೆ..
‘ಜೈಲರ್’ಚಿತ್ರ ಯು/ಎ ಪ್ರಮಾಣ ಪತ್ರ ಪಡೆದ ಸಿನಿಮಾವಾಗಿದೆ. ಈ ಚಿತ್ರದ ಅವಧಿ 2 ಗಂಟೆ 49 ನಿಮಿಷಗಳಿದ್ದು, ಸುಮಾರು 3 ಗಂಟೆಗಳ ಕಾಲ ಸಿನಿಮಾವಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಜೈಲರ್ ಸಿನಿಮಾ ಮೂಡಿಬಂದಿದೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ