newsfirstkannada.com

ಏಷ್ಯಾಕಪ್​ ಬಿಟ್ಟು ಬಂದ ಬೂಮ್ರಾಗೆ ಗುಡ್‌ನ್ಯೂಸ್‌; ಪುಟಾಣಿ ‘ಅಂಗದ್’ಗೆ ಹಾರ್ಟ್ ಟಚ್ಚಿಂಗ್ ವೆಲ್​ಕಮ್

Share :

04-09-2023

    ನಿನ್ನೆಯಷ್ಟೇ ಲಂಕಾದಿಂದ ಭಾರತಕ್ಕೆ ಬಂದಿದ್ದ ಯಾರ್ಕರ್ ಸ್ಪೆಷಲಿಸ್ಟ್​

    ಅಭಿಮಾನಿಗಳ ಜೊತೆ ಖುಷಿ ಸಂಗತಿ ಹಂಚಿಕೊಂಡ ಜಸ್ಪ್ರೀತ್ ಬುಮ್ರಾ

    ಫುಲ್ ಖುಷಿಯಲ್ಲಿರೋ ಭಾರತದ ಯಾರ್ಕರ್ ಸ್ಪೆಷಲಿಸ್ಟ್​ ಹೇಳಿದ್ದೇನು?

ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ ಅವರು ಫುಲ್ ಖುಷಿಯಲ್ಲಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಅನ್ನು ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ. ಸದ್ಯ ಹೊಸ ವಿಷ್ಯ ಏನೆಂದರೆ ಜಸ್ಪ್ರೀತ್ ಬುಮ್ರಾ ಮತ್ತು ಪತ್ನಿ ಸಂಜನಾ ಗಣೇಶನ್ ದಂಪತಿ ಮೊದಲ ಮಗು ಪಡೆದ ಸಂತಸದಲ್ಲಿದ್ದಾರೆ.

ಏಷ್ಯಾಕಪ್‌ಗಾಗಿ ಟೀಂ ಇಂಡಿಯಾದೊಂದಿಗೆ ಶ್ರೀಲಂಕಾಗೆ ತೆರಳಿದ್ದ ಬೂಮ್ರಾ ಅವರು ವೈಯಕ್ತಿಕ ಕಾರಣ ನೀಡಿ ಇವತ್ತಿನ (ಸೆಪ್ಟೆಂಬರ್ 4) ನೇಪಾಳ ವಿರುದ್ಧದ ಪಂದ್ಯವನ್ನು ಆಡದೆ ಮುಂಬೈಗೆ ವಾಪಸ್ ಆಗಿದ್ದರು. ಟೂರ್ನಿಯನ್ನ ಕೈ ಬಿಟ್ಟು ಯಾರ್ಕರ್ ಸ್ಪೆಷಲಿಸ್ಟ್ ಸಡನ್ ಆಗಿ ಭಾರತದ ವಿಮಾನ ಏರಿದ್ದರಿಂದ ಮತ್ತೆ ಫಿಟ್ನೆಸ್​ ಸಮಸ್ಯೆ ಏನಾದ್ರೂ ಕಾಣಿಸಿದೆಯಾ ಎಂದು ಕ್ರಿಕೆಟ್​ ಅಭಿಮಾನಿಗಳಲ್ಲಿ ಅನುಮಾನ ಹುಟ್ಟಲು ಕಾರಣವಾಗಿತ್ತು. ಆದ್ರೆ ಮುಂಬೈಗೆ ಬಂದಿರುವ ಬೂಮ್ರಾ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಬೂಮ್ರಾ ದಂಪತಿ

ಬೂಮ್ರಾ ದಂಪತಿ ಮೊದಲ ಮಗುವಿಗೆ ವೆಲ್​ಕಮ್ ಮಾಡಿರುವ ಬಗ್ಗೆ ತಮ್ಮ ಇನ್​ಸ್ಟಾದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ನಮ್ಮ ಪುಟ್ಟ ಕುಟುಂಬಕ್ಕೆ ಬೆಳೆದಿದ್ದು ನಮ್ಮ ಊಹೆಗಿಂತ ಮಿಗಿಲಾಗಿದ್ದು ಹೃದಯಕ್ಕೆ ಸಿಕ್ಕಿದೆ. ಇವತ್ತು ಬೆಳಗ್ಗೆ ಮುದ್ದಾದ ಪುಟ್ಟ ಗಂಡು ಮಗು ಅಂಗದ್ ಜಸ್ಪ್ರೀತ್ ಬುಮ್ರಾನನ್ನು ವಿಶ್ವಕ್ಕೆ ಸ್ವಾಗತಿಸಿದೆವು. ನಾವು ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯವು ಕಂದನೊಂದಿಗೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಬೂಮ್ರಾ ಮತ್ತು ಸಂಜನಾ ಅವರು 2021 ಮಾರ್ಚ್​ 15 ರಂದು ಗೋವಾದಲ್ಲಿ ವಿವಾಹವಾಗಿದ್ದರು. ಸದ್ಯ ದಂಪತಿಗೆ ಎರಡು ವರ್ಷದ ಬಳಿಕ ಮಗು ಜನನವಾಗಿದೆ.

View this post on Instagram

A post shared by jasprit bumrah (@jaspritb1)

ಇದನ್ನೂ ಓದಿ: 68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಸುಪ್ರೀಂಕೋರ್ಟ್​ನ ಹಿರಿಯ ವಕೀಲ.. ವಿವಾಹ ಸಮಾರಂಭ ನಡೆದಿದ್ದೇಲ್ಲಿ?

ಸದ್ಯ ಭಾರತದ ತಂಡದಲ್ಲಿ ಬೂಮ್ರಾ ಅವರ ಪಾತ್ರ ಪ್ರಮುಖವಾಗಿದೆ. ಏಕೆಂದರೆ ಸದ್ಯ ನಡೆಯುತ್ತಿರುವ ಏಷ್ಯಾಕಪ್​ಗೆ ಪ್ರಮುಖವಾಗಿ ಬೂಮ್ರಾ ಬೌಲಿಂಗ್​ ಅನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಈ ಟೂರ್ನಿಯಲ್ಲಿ ನೀಡಿದ ಪ್ರದರ್ಶನದಿಂದ ಮುಂಬರುವ ವಿಶ್ವಕಪ್​ಗೆ ಅಣಿಗೊಳ್ಳಬೇಕಿದೆ. ಹೀಗಾಗಿ ಇದೇ ಖುಷಿಯಲ್ಲಿ ಸದ್ಯದಲ್ಲೆ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇವತ್ತು ನೇಪಾಳ ವಿರುದ್ಧ ನಡೆಯುವ ಪಂದ್ಯದಲ್ಲಿ ಬೂಮ್ರಾ ಬದಲಿಗೆ ಮೊಹಮ್ಮದ್ ಶಮಿ ಅಥವಾ ಪ್ರಸಿದ್ಧ್ ಕೃಷ್ಣ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏಷ್ಯಾಕಪ್​ ಬಿಟ್ಟು ಬಂದ ಬೂಮ್ರಾಗೆ ಗುಡ್‌ನ್ಯೂಸ್‌; ಪುಟಾಣಿ ‘ಅಂಗದ್’ಗೆ ಹಾರ್ಟ್ ಟಚ್ಚಿಂಗ್ ವೆಲ್​ಕಮ್

https://newsfirstlive.com/wp-content/uploads/2023/09/Jasprit_Bumrah_1.jpg

Load More