newsfirstkannada.com

ಕೊಹ್ಲಿ, ಜಡೇಜಾ ಬೆನ್ನಲ್ಲೇ ಬೂಮ್ರಾ ಟಿ-20 ಕ್ರಿಕೆಟ್​​ಗೆ ಗುಡ್​ಬೈ? ನಿವೃತ್ತಿ ಬಗ್ಗೆ ಬೂಮ್ರಾ ಮಾತು..

Share :

Published July 5, 2024 at 12:31pm

    ಅಭಿನಂದನಾ ಕಾರ್ಯಕ್ರಮದಲ್ಲಿ ಬೂಮ್ರಾ ಮಾತು

    ಮೂರು ಮಾದರಿಯ ಕ್ರಿಕೆಟ್ ಆಡ್ತಿರುವ ಬೂಮ್ರಾ

    ಟಿ20 ಕ್ರಿಕೆಟ್​ಗೆ ಕೊಹ್ಲಿ, ಜಡೇಜಾ, ರೋಹಿತ್ ನಿವೃತ್ತಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿನ್ನೆ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನಾ ಸಮಾರಂಭ ನಡೆಯಿತು. ಈ ವೇಳೆ ಜಸ್​​ಪ್ರೀತ್ ಬುಮ್ರಾ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದರು.

ನನ್ನ ನಿವೃತ್ತಿ ಇನ್ನೂ ಬಹಳ ದೂರವಿದೆ, ನಾನು ಈಗಷ್ಟೇ ಪ್ರಾರಂಭಿಸಿದ್ದೇನೆ. ಅದು ಇನ್ನೂ ದೂರದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಸದ್ಯಕ್ಕೆ ಯಾವುದೇ ಮಾದರಿಯ ಕ್ರಿಕೆಟ್​​ಗೆ ಗುಡ್​ಬೈ ಹೇಳುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರೋಹಿತ್, ಕೊಹ್ಲಿ, ಜಡೇಜಾ ಬೆನ್ನಲ್ಲೇ ಬೂಮ್ರಾ ಕೂಡ ಟಿ20 ಕ್ರಿಕೆಟ್​​ಗೆ ವಿದಾಯ ಹೇಳ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಈ ಅನುಮಾನಗಳಿಗೆ ನಿನ್ನೆ ಬೂಮ್ರಾ ತೆರೆ ಎಳೆದಿದ್ದಾರೆ.

ಬೂಮ್ರಾ ಕ್ರಿಕೆಟ್ ಬದುಕು..!
ಬುಮ್ರಾ ಭಾರತಕ್ಕಾಗಿ ಮೂರು ಮಾದರಿಯ ಕ್ರಿಕೆಟ್ ಆಡ್ತಿದ್ದಾರೆ. ಇಲ್ಲಿಯವರೆಗೆ 36 ಟೆಸ್ಟ್, 89 ODI ಮತ್ತು 70 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 159, ಏಕದಿನದಲ್ಲಿ 149 ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ. ಜನವರಿ 2016ರಲ್ಲಿ ಭಾರತಕ್ಕಾಗಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಮಾಡಿದರು.

ಇದನ್ನೂ ಓದಿ:ಅಭಿಮಾನಿಗಳಿಗೆ ಟೀಮ್​ ಇಂಡಿಯಾದಿಂದ ಸ್ಪೆಷಲ್​ ಗಿಫ್ಟ್.. ಬೆಲೆ ಕಟ್ಟಲಾಗದ ಐದು ಉಡುಗೊರೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ಜಡೇಜಾ ಬೆನ್ನಲ್ಲೇ ಬೂಮ್ರಾ ಟಿ-20 ಕ್ರಿಕೆಟ್​​ಗೆ ಗುಡ್​ಬೈ? ನಿವೃತ್ತಿ ಬಗ್ಗೆ ಬೂಮ್ರಾ ಮಾತು..

https://newsfirstlive.com/wp-content/uploads/2024/07/Jasprit-bumrah.jpg

Load More